-->
ವಿಮಾನ ನಿಲ್ದಾಣದ ಶೌಚಾಲಯದಲ್ಲಿ ಟಾಯ್ಲೆಟ್ ಪೇಪರ್ ನಲ್ಲಿ‌ ಸುತ್ತಿಟ್ಟ ನವಜಾತ ಶಿಶು ಪತ್ತೆ: ಶಂಕಿತ ತಾಯಿಯ ಬಂಧನ

ವಿಮಾನ ನಿಲ್ದಾಣದ ಶೌಚಾಲಯದಲ್ಲಿ ಟಾಯ್ಲೆಟ್ ಪೇಪರ್ ನಲ್ಲಿ‌ ಸುತ್ತಿಟ್ಟ ನವಜಾತ ಶಿಶು ಪತ್ತೆ: ಶಂಕಿತ ತಾಯಿಯ ಬಂಧನ

ಹೊಸದಿಲ್ಲಿ: ಆಗತಾನೇ ಹುಟ್ಟಿರುವ ನವಜಾತ ಶಿಶುವೊಂದು ರಕ್ತದಿಂದ ತೊಯ್ದಿದ್ದ ಟಾಯ್ಲೆಟ್ ಪೇಪರ್‌ನಲ್ಲಿ ಸುತ್ತಿದ ರೀತಿಯಲ್ಲಿ ವಿಮಾನದ ಶೌಚಾಲಯದಲ್ಲಿ ಪತ್ತೆಯಾಗಿರುವ ಪ್ರಕರಣ ಸೀವೂಸಾಗುರ್ ರಂಗೂಲಮ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೆಳಕಿಗೆ ಬಂದಿದೆ. ಅಧಿಕಾರಿಗಳು ತಪಾಸಣೆ ನಡೆಸುತ್ತಿದ್ದ ಸಂದರ್ಭ ಈ ನವಜಾತ ಶಿಶು ಪತ್ತೆಯಾಗಿದ್ದು, ಮಗುವನ್ನು ರಕ್ಷಿಸಲಾಗಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ. 

ಏರ್ ಮರೀಷಿಯಸ್ ವಿಮಾನದಲ್ಲಿ 20 ವರ್ಷದ ಯುವತಿಯು ಈ ಶಿಶುವಿಗೆ ಜನ್ಮ ನೀಡಿರಬಹುದೆಂದು ಶಂಕಿಸಲಾಗಿದೆ. ವಿಮಾನವು ಸೀವೂಸಾಗುರ್ ರಂಗೂಲಮ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜನವರಿ 1ರಂದು ಇಳಿದಿತ್ತು.‌ ಆ ಬಳಿಕ ಈ ಶಿಶು ಪತ್ತೆಯಾಗಿದೆ. ಇದೀಗ ಈ ಶಂಕಿತ ಯುವತಿಯನ್ನು ಬಂಧಿಸಲಾಗಿದೆ ಎಂದು ಬಿಬಿಸಿ ವರದಿ ಮಾಡಿದೆ. ಶಿಶು ಆರೋಗ್ಯವಾಗಿದೆ ಎಂದು ವರದಿ ತಿಳಿಸಿದೆ.

ಸಾಮಾನ್ಯವಾಗಿ ನಿರ್ವಹಿಸುವ ಕಸ್ಟಮ್ಸ್ ತಪಾಸಣೆಯ ವೇಳೆ ಶೌಚಾಲಯದಲ್ಲಿ ಈ ಶಿಶು ಪತ್ತೆಯಾಗಿದೆ ಎಂದು ಸಿಟೀಸ್ ನ್ಯೂಸ್‌ ರೂಮ್ ವರದಿಯಲ್ಲಿ ಹೇಳಲಾಗಿದೆ. ಶೌಚಾಲಯದಲ್ಲಿ ರಕ್ತಸಿಕ್ತವಾಗಿದ್ದ ಟಾಯ್ಲೆಟ್ ಪೇಪರ್‌ಗಳು ಇದ್ದುದನ್ನು ಕಂಡು ಅನುಮಾನಗೊಂಡ ಅಧಿಕಾರಿಗಳು ತಪಾಸಣೆ ನಡೆದಿದ್ದರು. 

ಆಗ ಕಾಗದದಲ್ಲಿ ಸುತ್ತಿದ್ದ ನವಜಾತ ಶಿಶು ಪತ್ತೆಯಾಗಿದೆ. ತಕ್ಷ ಆ ಮಗುವನ್ನು ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗಿದೆ. ಶಂಕಿತ ತಾಯಿ ಆರಂಭದಲ್ಲಿ ಈ ಶಿಶು ತನ್ನದೆಂದು ಒಪ್ಪಿಕೊಳ್ಳಲು ನಿರಾಕರಿಸಿದ್ದಳು. ವೈದ್ಯಕೀಯ ತಪಾಸಣೆಯ ಬಳಿಕ, ಆಕೆಯೇ ಮಗುವಿಗೆ ಜನ್ಮ ನೀಡಿರುವುದು ದೃಢಪಟ್ಟಿದೆ ಎಂದು ತಿಳಿದುಬಂದಿದೆ.

Ads on article

Advertise in articles 1

advertising articles 2

Advertise under the article