-->

ಕೋವಿಡ್ ಚಿಕಿತ್ಸೆಗಾಗಿ 50 ಎಕರೆ ಜಮೀನು ಮಾರಿ, 8 ಕೋಟಿ ರೂ. ಖರ್ಚು ಮಾಡಿದರೂ ಬದುಕಿ ಉಳಿಯಲಿಲ್ಲ ರೈತ

ಕೋವಿಡ್ ಚಿಕಿತ್ಸೆಗಾಗಿ 50 ಎಕರೆ ಜಮೀನು ಮಾರಿ, 8 ಕೋಟಿ ರೂ. ಖರ್ಚು ಮಾಡಿದರೂ ಬದುಕಿ ಉಳಿಯಲಿಲ್ಲ ರೈತ

ರೇವಾ (ಮಧ್ಯಪ್ರದೇಶ): ಕೊರೊನಾ ಸೋಂಕು ವಿವಿಧ ರೀತಿಯಲ್ಲಿ ಪ್ರತಿಯೊಬ್ಬರ ಜೀವನವನ್ನು ಹೈರಾಣ ಮಾಡಿದೆ. ಎಷ್ಟೋ ಮಂದಿ ಇದರಿಂದ ತಮ್ಮ ಜೀವವನ್ನೇ ಕಳೆದುಕೊಂಡಿದ್ದಾರೆ. ಖಾಸಗಿ ಆಸ್ಪತ್ರೆಗಳು ದುಡ್ಡು ವಸೂಲಿ ಮಾಡುವ ಕೇಂದ್ರಗಳಾಗಿ ಮಾರ್ಪಟ್ಟಿದೆ. ಈ ಬಗ್ಗೆ ಸಾಕಷ್ಟು ಆರೋಪಗಳು ಕೇಳಿಬರುತ್ತಿದೆ. ಲಕ್ಷ ಲಕ್ಷ ರೂ. ವಸೂಲಿ ಮಾಡಿ, ಕೊನೆಗೆ ಉಳಿಸಿಕೊಂಡಿರುವ ಸ್ವಲ್ಪ ಹಣವನ್ನು ಪಾವತಿ ಮಾಡದ ಕಾರಣ ಮೃತದೇಹವನ್ನು ಕೊಡಲು ಆಸ್ಪತ್ರೆಗಳು ನಿರಾಕರಿಸಿರುವ ಅಮಾನವೀಯ ಘಟನೆಗಳೂ ಸಾಕಷ್ಟು ಕಡೆ ನಡೆದಿವೆ. ಈ ಎಲ್ಲದರ ನಡುವೆಯೇ ಅತ್ಯಂತ ಭಯಾನಕ ಘಟನೆಯೊಂದು ಮಧ್ಯಪ್ರದೇಶದ ರಾಕ್ರಿ ಗ್ರಾಮದಲ್ಲಿ ನಡೆದಿದೆ. 

ಇಲ್ಲಿನ ರೈತ ಧರಂಜಯ್ ಸಿಂಗ್ (50) ಎಂಬವರು 8 ತಿಂಗಳಿನಿಂದ ಕೊರೊನಾ ಸೋಂಕಿನಿಂದ ಬಳಲಿ ಕೊನೆಗೆ ಮೃತಪಟ್ಟಿದ್ದಾರೆ. ಆದರೆ ಈ ಅವಧಿಯಲ್ಲಿ ಅವರ ಕುಟುಂಬವು ಅಷ್ಟಿಷ್ಟು ಹಣವಲ್ಲ ಬರೋಬ್ಬರಿ 8 ಕೋಟಿ ರೂ. ಧರಂಜಯ್‌ ಅವರುಗೆ ಕೊರೊನಾ ಸೋಂಕು ಬಂದ ಬೆನ್ನಲ್ಲೇ ವಿವಿಧ ಅನಾರೋಗ್ಯ ಸಮಸ್ಯೆಗಳು ಕಾಡಿದ್ದವು. ಈ ಹಿನ್ನೆಲೆಯಲ್ಲಿ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. 

ಒಂದು ಆಸ್ಪತ್ರೆಯಿಂದ ಮತ್ತೊಂದು ಆಸ್ಪತ್ರೆಗೆ ಸಾಗಿಸಲಾಗಿತ್ತು. ಅವರು ಗುಣಮುಖರಾಗಲು ಹಣವನ್ನು ನೀರಿನಂತೆ ಖರ್ಚು ಮಾಡಲಾಯಿತು. ಆದರೆ ಅವರು ಗುಣಮುಖರಾಗುವ ಯಾವ ಲಕ್ಷಣಗಳೂ ಕಾಣಿಸಲಿಲ್ಲ. ಮನೆಯಲ್ಲಿದ್ದ ಹಣ, ಚಿನ್ನಾಭರಣ ಎಲ್ಲವೂ ಆಸ್ಪತ್ರೆ ಪಾಲಾಯಿತು. ಅದಷ್ಟಲ್ಲದೆ 50 ಎಕರೆ ಜಮೀನನ್ನು ಮಾರಾಟ ಮಾಡಲಾಯಿತು. ಇಷ್ಟೆಲ್ಲಾ ಮಾಡಿದರೂ ವೈದ್ಯರಿಂದ ಭರವಸೆಯ ಮಾತುಗಳು ದೊರಕಿತೇ ವಿನಃ ಫಲಿತಾಂಶ ಮಾತ್ರ ಶೂನ್ಯವಾಯಿತು. 

ಪ್ರತಿಷ್ಠಿತ ಸೂಪರ್‌ಸ್ಪೆಷ್ಯಾಲಿಟಿ ಆಸ್ಪತ್ರೆಯೊಂದರಲ್ಲಿ ಅವರನ್ನು ದಾಖಲು ಮಾಡಲಾಗಿತ್ತು. ಅಲ್ಲಿ ಪ್ರತಿ ದಿನದ ಶುಲ್ಕವೇ 3 ಲಕ್ಷ ರೂ. ಇತ್ತು. ಇದಕ್ಕಾಗಿ ಕುಟುಂಬಸ್ಥರು ತಮ್ಮ 50 ಎಕರೆ ಜಮೀನನ್ನೂ ಮಾರಿದರು. ಕೊನೆಗೆ 8 ಕೋಟಿ ರೂ. ಖರ್ಚು ಆದ ಬಳಿಕ ಅವರಲ್ಲಿ ಕೊಡಲು ಇನ್ನೇನೂ ಇರಲಿಲ್ಲ. ಇದೆಲ್ಲಾ ಆದ ಬಳಿಕ ಕುಟುಂಬಸ್ಥರಿಗೆ ಆಸ್ಪತ್ರೆಯಿಂದ ಸಿಕ್ಕಿದ್ದ ಧರಂಜಯ್‌ ಅವರ ಮೃತದೇಹ ಮಾತ್ರ.

ಕಳೆದ ಎಪ್ರಿಲ್​​​ 30ರಂದು ಕೋವಿಡ್​ ಟೆಸ್ಟ್ ಮಾಡಿಸಿದಾಗ ಅವರಿಗೆ ಪಾಸಿಟಿವ್​ ವರದಿ ಬಂದಿತ್ತು. ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಚಿಕಿತ್ಸೆ ಮುಂದುವರಿದಂತೆಯೇ ಮೆದುಳಿನ ಸಮಸ್ಯೆ ಕಾಣಿಸಿಕೊಂಡಿದೆ‌. ಬಳಿಕ ಏರ್ ಆ್ಯಂಬುಲೆನ್ಸ್ ಮೂಲಕ ಅವರನ್ನು ಚೆನ್ನೈ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ಅಷ್ಟು ಹೊತ್ತಿಗಾಗಲೇ ಅವರಿಗೆ ಶ್ವಾಸಕೋಶದಲ್ಲಿ ಸೋಂಕು ಕಾಣಿಸಿಕೊಂಡಿದೆ. ಆದರೆ ತಪಾಸಣೆಯಲ್ಲಿ ಕೊರೊನಾ ನೆಗೆಟಿವ್‌ ಬಂದಿತ್ತು.

 ಆದರೂ ವಿದೇಶೀ ವೈದ್ಯರಿಂದಲೂ ಚಿಕಿತ್ಸೆ ಕೊಡಿಸಲಾಗಿದೆ. ಕೊನೆಗೂ ಚಿಕಿತ್ಸೆ ಫಲಕಾರಿಯಾಗಲಿಲ್ಲ. ಧರಂಜಯ್ ಸಿಂಗ್ ಅವರು ರೈತರಾಗಿ ಸ್ಟ್ರಾಬೆರಿ ಮತ್ತು ಗುಲಾಬಿ ಕೃಷಿಯನ್ನು ಮಾಡಿ  ಹೆಸರು ಮಾಡಿದ್ದರು. ಮಧ್ಯಪ್ರದೇಶದ ಸಿಎಂ ಶಿವರಾಜ್​ ಸಿಂಗ್​ ಚೌಹಾಣ್​ ಕೂಡ ಧರಂಜಯ್ ಅವರನ್ನು ಸನ್ಮಾನಿಸಿದ್ದರು. ಕೊರೊನಾ ಅವಧಿಯಲ್ಲಿ ಜನರ ಸೇವೆ ಮಾಡುವಾಗ ಅವರಿಗೆ ಸೋಂಕು ತಗುಲಿತ್ತು. ಬಳಿಕ ಸರಕಾರದಿಂದ 4 ಲಕ್ಷ ರೂ.ಗಳ ಧನ ಸಹಾಯ ದೊರೆತಿರುವುದಾಗಿ ಕುಟುಂಬಸ್ಥರು ಹೇಳಿದ್ದಾರೆ.

Ads on article

Advertise in articles 1

advertising articles 2

Advertise under the article