-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಪ್ರೇಯಸಿಯ ಅಂತ್ಯಸಂಸ್ಕಾರ ನಡೆದ ಸ್ಥಳದಲ್ಲಿಯೇ ನಡುರಾತ್ರಿ ಹೊತ್ತು ಪ್ರಿಯತಮ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ! : ಡೆತ್ ನೋಟ್ ನಲ್ಲಿತ್ತು ಮನದ ದುಗುಡ

ಪ್ರೇಯಸಿಯ ಅಂತ್ಯಸಂಸ್ಕಾರ ನಡೆದ ಸ್ಥಳದಲ್ಲಿಯೇ ನಡುರಾತ್ರಿ ಹೊತ್ತು ಪ್ರಿಯತಮ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ! : ಡೆತ್ ನೋಟ್ ನಲ್ಲಿತ್ತು ಮನದ ದುಗುಡ

ಕೆ.ಆರ್​.ಸಾಗರ: ಪ್ರೇಯಸಿಯ ಅಂತ್ಯಸಂಸ್ಕಾರ ನಡೆದಿರುವ ಸ್ಥಳದಲ್ಲಿಯೇ ಭಗ್ನಪ್ರೇಮಿಯೋರ್ವನು ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಮೈಸೂರಿನ ಕೆ.ಆರ್​.ಸಾಗರದಲ್ಲಿ ಸಂಭವಿಸಿದೆ.

ಬೆಳಗೊಳ ಗ್ರಾಮದ ದಿ.ಕುಮಾರ್​ ಎಂಬವರ ಪುತ್ರ ಚಂದನ್​(20) ಆತ್ಮಹತ್ಯೆ ಮಾಡಿಕೊಂಡ ಭಗ್ನಪ್ರೇಮಿ. 

ಮೈಸೂರಿನಲ್ಲಿ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಚಂದನ್ ಬೆಳಗೊಳ ಗ್ರಾಮದ ಯುವತಿಯೋರ್ವಳನ್ನು ಪ್ರೀತಿಸುತ್ತಿದ್ದ. ಆದರೆ ಅದೇಕೋ ಈತ ಪ್ರಿಯತಮೆ 4 ದಿನಗಳ ಹಿಂದೆ ಮನೆಯಲ್ಲಿಯೇ ನೇಣು ಬಿಗಿದು ಮೃತಪಟ್ಟಿದ್ದಳು. ಆಕೆಯ ಕುಟುಂಬಸ್ಥರು ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನೆರವೇರಿಸಿ ಮನೆಗೆ ತೆರಳಿದ್ದರು.

ಪ್ರೀತಿಸಿದ ಯುವತಿ ಮೃತಪಟ್ಟ ಸುದ್ದಿ ತಿಳಿದು ಚಂದನ್​ ಭಾರೀ ಮನ ನೊಂದಿದ್ದ. ಆಕೆ ಮೃತಪಟ್ಟ ಮೂರನೇ ದಿನದಂದು ರಾತ್ರಿ ಆಕೆಯ ಅಂತ್ಯಸಂಸ್ಕಾರ ನೆರವೇರಿಸಿದ ಸ್ಥಳದಲ್ಲಿಯೇ ಚಂದನ್ ಪೆಟ್ರೋಲ್​ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮರುದಿನ  ಬೆಳಗ್ಗೆ ಸುಟ್ಟು ಕರಕಲಾದ ಆತನ ಮೃತದೇಹ ಪತ್ತೆಯಾದ ಬಳಿಕ ವಿಚಾರ ಬಹಿರಂಗಗೊಂಡಿದೆ.

ಆತ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಪ್ರೇಯಸಿಯ ಅಂತ್ಯಸಂಸ್ಕಾರ ನೆರವೇರಿಸಿದ ಸ್ಥಳದಲ್ಲಿ ಸ್ಕೂಟರ್​ ನಿಲ್ಲಿಸಿ, ಅದರ ಮೇಲೆ ಆಕೆಯ ವೇಲ್​ ಇಟ್ಟಿದ್ದಾನೆ. “ನಿನ್ನನ್ನು ಬಹಳ ಪ್ರೀತಿಸುತ್ತಿದ್ದೆ. ನೀನು ಇರದಿರುವ ಈ ಭೂಮಿಯಲ್ಲಿ ನಾನು ಕೂಡ ಇರಲಾರೆ. ನಿನ್ನ ಬಳಿ ಬರುತ್ತಿರುವೆ. ಜೀವನ ಜಿಗುಪ್ಸೆಯಾಗಿದೆ. ನನ್ನ ಸಾವಿಗೆ ನಾನೇ ಕಾರಣ’ ಎಂದು ಪತ್ರ ಬರೆದಿಟ್ಟು ಬೆಂಕಿ ಹಚ್ಚಿಕೊಂಡು ಸಾವಿಗೆ ಶರಣಾಗಿದ್ದಾನೆ. 

ಬೆಳಗ್ಗೆ ಯುವಕನ ಮೃತದೇಹ ಕಂಡು ಸಾರ್ವಜನಿಕರು ನೀಡಿರುವ ಮಾಹಿತಿಯ ಮೇರೆಗೆ ಸ್ಥಳಕ್ಕೆ ಸರ್ಕಲ್​ ಇನ್​ಸ್ಪೆಕ್ಟರ್​ ಯೋಗೇಶ್​, ಕೆ.ಆರ್​.ಸಾಗರ ಠಾಣೆ ಸಬ್​ ಇನ್​ಸ್ಪೆಕ್ಟರ್​ ಲಿಂಗರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳದಲ್ಲಿದ್ದ ಮೊಬೈಲ್​, ಬೈಕ್​ ಮತ್ತಿತರ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. 

ರಾತ್ರಿ ಬಹಳಹೊತ್ತು ನಮ್ಮೊಂದಿಗೆ ಮಾತನಾಡಿದ್ದ. ಆ ಬಳಿಕ ಆತ ಪ್ರೇಯಸಿಯ ಅಂತ್ಯಸಂಸ್ಕಾರ ನಡೆದಿರುವಲ್ಲಿಗೆ ಹೋಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಆತನ ಸ್ನೇಹಿತರು ತಿಳಿಸಿದ್ದಾರೆ. ಈ ಬಗ್ಗೆ ಕೆ.ಆರ್​.ಸಾಗರ ಠಾಣೆಯಲ್ಲಿ  ದೂರು ದಾಖಲಾಗಿದೆ. 

Ads on article

Advertise in articles 1

advertising articles 2

Advertise under the article

ಸುರ