-->
ಕಿಟಕಿ ಮುರಿದು ಸೊಂಡಿಲು ಒಳಗೆ ಹಾಕಿ ಆಹಾರ ಕಬಳಿಸುತ್ತಿರುವ ಆನೆ: ವೀಡಿಯೋ ಸಖತ್ ವೈರಲ್

ಕಿಟಕಿ ಮುರಿದು ಸೊಂಡಿಲು ಒಳಗೆ ಹಾಕಿ ಆಹಾರ ಕಬಳಿಸುತ್ತಿರುವ ಆನೆ: ವೀಡಿಯೋ ಸಖತ್ ವೈರಲ್

ಬೆಂಗಳೂರು: ಆನೆಯೊಂದು ಅಡುಗೆ ಮನೆಯ ಕಿಟಕಿಯನ್ನು ಮುರಿದು ಸೊಂಡಿಲು ಒಳಗೆ ಹಾಕಿ ಆಹಾರವನ್ನು ತಿನ್ನಲು ಹವಣಿಸುತ್ತಿರುವ ವೀಡಿಯೋವೊಂದು ವೈರಲ್ ಆಗುತ್ತಿದೆ. ಕಿಟಕಿಯೊಳಗೆ ಸೊಂಡಿಲು ಹಾಕಿ ಪಾತ್ರೆ ಪಗಡಿಗಳನ್ನು ಚಲ್ಲಾಪಿಲ್ಲಿಯಾಗಿಸಿ ಆಹಾರ ಸಾಮಗ್ರಿಯನ್ನು ತಿನ್ನುತ್ತಿರುವ ದೃಶ್ಯ ಈ ವೀಡಿಯೋದಲ್ಲಿ ಸೆರೆಯಾಗಿದೆ.  ಹಾಕಿಕೊಳ್ಳುತ್ತಿದೆ. 
ಮನೆಯೊಂದರ ಅಡುಗೆ ಕೋಣೆಯ ಕಿಟಕಿಯನ್ನು ಮುರಿದಿರುವ ಆನೆ, ವಸ್ತುಗಳನ್ನೆಲ್ಲಾ ಚೆಲ್ಲಾಪಿಲ್ಲಿ ಮಾಡುತ್ತಿದೆ. ಈ ಆನೆಯ ಅಟಾಟೋಪವನ್ನು ನೋಡಿ ಆ ಮನೆಯಲ್ಲಿದ್ದವರು ಭಯಗೊಂಡಿದ್ದಾರೆ. ಮನೆಯಿಂದ ಹೊರ ಬರಲಾಗದೆ, ಒಳಗೂ ಇರಲಾರದೆ ಜೀವಭಯದಲ್ಲೇ ಆನೆಯನ್ನು ಓಡಿಸಲು ಹರಸಾಹಸಪಟ್ಟಿದ್ದಾರೆ. 


ತಟ್ಟೆಯನ್ನು ಬಡಿದು, ಬೊಬ್ಬೆಯಿಟ್ಟು ಶಬ್ದ ಮಾಡುತ್ತಾ ಆನೆಯನ್ನು ಓಡಿಸಲು ಇನ್ನಿಲ್ಲದ ಕಸರತ್ತು ನಡೆಸುತ್ತಿರುವುದು ವೀಡಿಯೋದಲ್ಲಿ ದಾಖಲಾಗಿದೆ. ಈ ದೃಶ್ಯವನ್ನು ಮನೆಯಲ್ಲಿದ್ದವರೇ ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದಾರೆ. ಅಂದಹಾಗೆ ಇದು ಎಲ್ಲಿ ನಡೆದ ಘಟನೆ ಎಂಬ ಖಚಿತ ಮಾಹಿತಿ ಸಿಕ್ಕಿಲ್ಲ. ಹಾಸನದಲ್ಲಿ ಕೆಲವರು ಈ ವಿಡಿಯೋವನ್ನು ವಾಟ್ಸ್​ಆ್ಯಪ್​ ಸ್ಟೇಟಸ್​ಗೆ ಹಾಕಿಕೊಂಡು ‘ಜಿಲ್ಲೆಯಲ್ಲಿ ಆನೆ ಹಾವಳಿ ಯಾವ ಮಟ್ಟಕ್ಕೆ ಬಂದಿದೆ ನೋಡಿ..’ ಎಂದು ಬರೆದುಕೊಂಡಿದ್ದಾರೆ. ಆದರೆ, ಹಾಸನ ಅರಣ್ಯಾಧಿಕಾರಿಗಳು ಜಿಲ್ಲೆಯಲ್ಲಿ ಈ ಘಟನೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Ads on article

Advertise in articles 1

advertising articles 2

Advertise under the article