-->
ನೈಟ್ ಕರ್ಫ್ಯೂ ವೇಳೆ ಪೊಲೀಸರೊಂದಿಗೆ ಕಿರಿಕ್ ಮಾಡಿಕೊಂಡ ಬಿಗ್ ಬಾಸ್ ಸ್ಪರ್ಧಿ: ಬಾಯ್ ಫ್ರೆಂಡ್ ಜೊತೆಗೂಡಿ ದಿವ್ಯಾ ಸುರೇಶ್ ಹೈಡ್ರಾಮಾ!

ನೈಟ್ ಕರ್ಫ್ಯೂ ವೇಳೆ ಪೊಲೀಸರೊಂದಿಗೆ ಕಿರಿಕ್ ಮಾಡಿಕೊಂಡ ಬಿಗ್ ಬಾಸ್ ಸ್ಪರ್ಧಿ: ಬಾಯ್ ಫ್ರೆಂಡ್ ಜೊತೆಗೂಡಿ ದಿವ್ಯಾ ಸುರೇಶ್ ಹೈಡ್ರಾಮಾ!

ಬೆಂಗಳೂರು: ರೂಪಾಂತರಿ ವೈರಸ್ ಒಮಿಕ್ರಾನ್​ ಹೆಚ್ಚಳ ಭೀತಿಯಿಂದ ಹಿನ್ನೆಲೆಯಲ್ಲಿ ನಿನ್ನೆಯಿಂದಲೇ ರಾಜ್ಯದಲ್ಲಿ ನೈಟ್​ ಕರ್ಫ್ಯೂ ಜಾರಿಗೊಳಿಲಾಗಿದೆ. ಈ ಹಿನ್ನೆಲೆಯಲ್ಲಿ ಮೊದಲ ದಿನವೇ ರಾಜ್ಯದ ಅಲ್ಲಲ್ಲಿ ರಾತ್ರಿ ಸಂಚಾರ ಮಾಡುತ್ತಿದ್ದ ಸಾರ್ವಜನಿಕರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ನಡುವೆ ಬಿಗ್ ಬಾಸ್ ಖ್ಯಾತಿಯ ದಿವ್ಯಾ ಸುರೇಶ್​ ಕೂಡ ಪೊಲೀಸರೊಂದಿಗೆ ಕಿರಿಕ್​ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.  

ಸೀಸನ್​ 8ರ ಬಿಗ್​ಬಾಸ್​ ಸ್ಪರ್ಧಿ ಹಾಗೂ ನಟಿ 'ದಿವ್ಯಾ ಸುರೇಶ್​' ನಿನ್ನೆ ರಾತ್ರಿ ಪೊಲೀಸರೊಂದಿಗೆ ಕಿರಿಕ್​ ಮಾಡಿಕೊಂಡಿದ್ದಾರೆ. ಅವರು ನೈಟ್​ ಕರ್ಫ್ಯೂ ಉಲ್ಲಂಘಿಸಿದ್ದಲ್ಲದೆ, ಕರ್ಫ್ಯೂ ಇದೆ ಮನೆಗೆ ಹೋಗಿ ಎಂದು ಬುದ್ಧಿವಾದ ಹೇಳಿರುವ ಪೊಲೀಸರಿಗೆ ಅವಾಚ್ಯ ಪದಗಳಿಂದ ನಿಂದಿಸಿ, ಆವಾಜ್​ ಹಾಕಿದ್ದಾರೆ ಎನ್ನುವ ಗಂಭೀರ ಆರೋಪಗಳು ಕೇಳಿಬಂದಿದೆ.  

ಬೆಂಗಳೂರು ನಗರದ ಎಂ.ಜಿ.ರಸ್ತೆ ಮತ್ತು ಬ್ರಿಗೇಡ್​ ರಸ್ತೆಯಲ್ಲಿ ಬಿಗಿ ಪೊಲೀಸ್​ ಬಂದೋಬಸ್ತ್​ ವ್ಯವಸ್ಥೆ ಮಾಡಲಾಗಿತ್ತು. ಈ ವೇಳೆ ಅಲ್ಲಿಗೆ ಬಂದಿದ್ದ ದಿವ್ಯಾ ಸುರೇಶ್ ಪೊಲೀಸರಿಗೆ ಸಹಕಾರ ನೀಡದೆ ​ ಕಿರಿಕ್​ ಮಾಡಿಕೊಂಡಿದ್ದಾರೆ. ಕರ್ಫ್ಯೂ ಇದೆ ಮನೆಗೆ ಹೋಗಿ ಎಂದ ಪೊಲೀಸರು ಮಾತನ್ನು ಕೇಳದ ದಿವ್ಯಾ ಸುರೇಶ್​, ಅವರೊಂದಿಗೆ ವಾಗ್ವಾದಕ್ಕಿಳಿದು ರಂಪಾಟ ಮಾಡಿದ್ದಾರೆ. 

ಈ ವೇಳೆ ಮಾಧ್ಯಮದವರು ವೀಡಿಯೋ ಚಿತ್ರೀಕರಣ ಮಾಡಲು ಮುಂದಾದಾಗ ಕ್ಯಾಮೆರಾವನ್ನು ಕಿತ್ತುಕೊಳ್ಳಲು ಯತ್ನಿಸಿದ್ದಾರೆ. ಅಲ್ಲದೆ, ಕ್ಯಾಮೆರಾ ಒಡೆದು ಹಾಕುವುದಾಗಿಯೂ ಧಮ್ಕಿ ಹಾಕಿದ್ದಾರೆ ಎನ್ನಲಾಗಿದೆ. ಇನ್ನು ಸ್ಥಳದಲ್ಲಿದ್ದ ದಿವ್ಯಾ ಬಾಯ್​ಫ್ರೆಂಡ್​ 'ತಾನು ಬಿಜೆಪಿ ಪಕ್ಷದವನು' ಎಂದು ಹೇಳಿ ಪೊಲೀಸರಿಗೆ ಅವಾಜ್​ ಹಾಕಿದ್ದಾನೆ.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

Advertise under the article

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100