ಮಂಗಳೂರಿನಲ್ಲಿ ಒಂಟಿಯಾಗಿ ಹೋಗುವ ಬೈಕ್ ನಲ್ಲಿ ಸವಾರರ ಸುಲಿಗೆ- ಮಂಗಳಮುಖಿ ಅರೆಸ್ಟ್


ಮಂಗಳೂರು; ಒಂಟಿಯಾಗಿ ಹೋಗುವ ಬೈಕ್ ಸವಾರರನ್ನು ಟಾರ್ಗೆಟ್ ಮಾಡಿ ಸುಲಿಗೆ ಮಾಡುತ್ತಿದ್ದ ಮಂಗಳಮುಖಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.


ಬೆಂಗಳೂರು ನಗರದ ಇಜಿಪುರದ  ಅಭಿಷೇಕ್ @ ಗೊಂಬೆ @ ಅನಾಮಿಕ ( 27) ಬಂಧಿತ ಮಂಗಳಮುಖಿ.


ಮಂಗಳೂರು ನಗರದ ನಂತೂರು ಪದವು ಬಳಿಯಿರುವ ಬಿ ಎಸ್ ಎನ್ ಎಲ್ ಎಕ್ಸ್‌ಚೇಂಜ್ ಬಳಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ  ಗಣೇಶ್ ಶೆಟ್ಟಿ ರವರು ಬೈಕ್ ನಲ್ಲಿ ಬರುವಾಗ ಈ  ಮಂಗಳ ಮುಖಿ ರಸ್ತೆಗೆ ಅಡ್ಡ ಬಂದು ಗಣೇಶ್ ಶೆಟ್ಟಿರವರನ್ನು ತಡೆದು ನಿಲ್ಲಿಸಿ , ಅವರ ಮುಖಕ್ಕೆ ಪೆಪ್ಪರ್ ಸ್ಪೇ ಮಾಡಿ ಅವರ ಕುತ್ತಿಯಲ್ಲಿದ್ದ ಸುಮಾರು 24 ಗ್ರಾಂ ತೂಕದ ಚಿನ್ನದ ಸರವನ್ನು ಸುಲಿಗೆ ಮಾಡಿಕೊಂಡು ಹೋಗಿದ್ದನು. ಈ ಪ್ರಕರಣದಲ್ಲಿ ಆರೋಪಿಯನ್ನು ಕದ್ರಿ ಠಾಣೆಯ ಪೊಲೀಸರು ಬಂಧಿಸಿದಾಗ ಈತ ಮೂರು‌ ಸುಲಿಗೆ ಪ್ರಕರಣದಲ್ಲಿ ಭಾಗಿಯಾಗಿರುವ ಬಗ್ಗೆ ತಿಳಿದುಬಂದಿದೆ.

 ಆರೋಪಿ ಯಿಂದ ಒಟ್ಟು 71 ಗ್ರಾಂ ಚಿನ್ನ ವಶಪಡಿಸಿಕೊಳ್ಳಲಾಗಿದೆ. 

BREAKING NEWS
Loading latest news...
Join our WhatsApp Channel Powered By : Online Pudu