-->

ರವಿವಾರ ರಾಜ್ಯಾದ್ಯಂತ ಎಲ್ಲಾ ಸಿನಿಮಾ ಮಂದಿರಗಳ ಆವರಣದಲ್ಲಿ 'ಅಪ್ಪು'ವಿಗೆ ‘ಪುಷ್ಪಾಂಜಲಿ, ದೀಪಾಂಜಲಿ, ಗೀತಾಂಜಲಿ, ಭಾಷ್ಪಾಂಜಲಿ’

ರವಿವಾರ ರಾಜ್ಯಾದ್ಯಂತ ಎಲ್ಲಾ ಸಿನಿಮಾ ಮಂದಿರಗಳ ಆವರಣದಲ್ಲಿ 'ಅಪ್ಪು'ವಿಗೆ ‘ಪುಷ್ಪಾಂಜಲಿ, ದೀಪಾಂಜಲಿ, ಗೀತಾಂಜಲಿ, ಭಾಷ್ಪಾಂಜಲಿ’


ಬೆಂಗಳೂರು: ವರನಟನ ಪುತ್ರ, ಚಂದನವನದ ಎಲ್ಲರ ಮೆಚ್ಚಿನ ನಟ ಪುನೀತ್ ರಾಜಕುಮಾರ್ ಅವರ ಹಠಾತ್ ನಿಧನದ ಹಿನ್ನೆಲೆಯಲ್ಲಿ ರವಿವಾರ ರಾಜ್ಯಾದ್ಯಂತ ಏಕಕಾಲಕ್ಕೆ ಬೃಹತ್ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಲಿದೆ. 

ಕನ್ನಡ ಚಿತ್ರ ಪ್ರದರ್ಶನಕಾರರ ನೇತೃತ್ವದಲ್ಲಿ ನಡೆಯಲಿರುವ ಈ ಕಾರ್ಯಕ್ರಮಕ್ಕೆ ‘ಪುಷ್ಪಾಂಜಲಿ, ದೀಪಾಂಜಲಿ, ಗೀತಾಂಜಲಿ, ಭಾಷ್ಪಾಂಜಲಿ’ ಎಂದು ಹೆಸರಿಡಲಾಗಿದೆ. ಈ ಕಾರ್ಯಕ್ರಮದಲ್ಲಿ ರಾಜ್ಯದ ಚಿತ್ರಪ್ರದರ್ಶಕರ ಜತೆಗೆ ಅಲ್ಲಿನ ಸಿಬ್ಬಂದಿ ವರ್ಗ, ಸಿನಿಮಾ ಪ್ರೇಕ್ಷಕರು, ಅಭಿಮಾನಿಗಳು ಕೂಡ ಕೈಜೋಡಿಸಲಿದ್ದಾರೆ. 

ನ.7ರ ರವಿವಾರ ಸಂಜೆ 6 ಗಂಟೆಗೆ ಸರಿಯಾಗಿ ರಾಜ್ಯದ ಎಲ್ಲ ಸಿನಿಮಾ ಮಂದಿರಗಳ ಆವರಣದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಈ ಸಂದರ್ಭ ಹೂವು, ದೀಪ, ಗೀತನಮನಗಳ ಮೂಲಕ ನಟ ಅಪ್ಪುವಿಗೆ ಭಾಷ್ಪಾಂಜಲಿ ಅರ್ಪಿಸಲಾಗುವುದು ಎಂದು ಕರ್ನಾಟಕ ಚಿತ್ರ ಪ್ರದರ್ಶಕರ ಸಂಘದ ಅಧ್ಯಕ್ಷ ಕೆ.ವಿ. ಚಂದ್ರಶೇಖರ ಅವರು ತಿಳಿಸಿದ್ದಾರೆ. 

ಗೀತಾಂಜಲಿ: ನಟ ಪುನೀತ್ ರಾಜ್‍ಕುಮಾರ್ ಅವರಿಗೆ ಗೀತನಮನ ಮೂಲಕ ಶ್ರದ್ಧಾಂಜಲಿ ಅರ್ಪಿಸಲೆಂದೇ ಖ್ಯಾತ ಚಿತ್ರಸಾಹಿತಿ ಡಾ.ವಿ.ನಾಗೇಂದ್ರ ಪ್ರಸಾದ್‌  ವಿಶೇಷ ಗೀತೆಯೊಂದನ್ನು ರಚಿಸಿದ್ದಾರೆ. ʼಬೆಳ್ಳಿ ಬಾನಿನಲ್ಲಿ ಸೇರಿ ಹೋದೆ ಅಪ್ಪು..ʼ ಎಂದು ಆರಂಭವಾಗುವ ಈ ಗೀತೆಯನ್ನು ರವಿವಾರ ಸಂಜೆ ಎಲ್ಲ ಚಿತ್ರಮಂದಿರಗಳ ಆವರಣದಲ್ಲಿ ಸಾಮೂಹಿಕವಾಗಿ ಹಾಡಲಾಗುವುದು. ಬಳಿಕ 2 ನಿಮಿಷಗಳ ಮೌನಪ್ರಾರ್ಥನೆ ಮೂಲಕ ಪುನೀತ್‌ ರಾಜಕುಮಾರ್‌ ಅವರ ಆತ್ಮಕ್ಕೆ ಶಾಂತಿ ಕೋರಲಾಗುವುದು ಎಂದು ಕೆ.ವಿ.ಚಂದ್ರಶೇಖರ ಅವರು ತಿಳಿಸಿದ್ದಾರೆ. 

Ads on article

Advertise in articles 1

advertising articles 2

Advertise under the article