-->
ಅಂಬಾನಿ ಮನೆ ತಲುಪಿದ 185 ವರ್ಷಗಳ ಹಳೆಯದಾದ ಎರಡು ಆಲಿವ್ ಮರಗಳು: ಅಷ್ಟಕ್ಕೂ ಈ ಮರಗಳನ್ನು ತರಿಸಿದ್ದೇಕೆ ಗೊತ್ತಾ?

ಅಂಬಾನಿ ಮನೆ ತಲುಪಿದ 185 ವರ್ಷಗಳ ಹಳೆಯದಾದ ಎರಡು ಆಲಿವ್ ಮರಗಳು: ಅಷ್ಟಕ್ಕೂ ಈ ಮರಗಳನ್ನು ತರಿಸಿದ್ದೇಕೆ ಗೊತ್ತಾ?

ಹೈದರಾಬಾದ್: ಭಾರತದ ಅತೀ ದೊಡ್ಡ ಉದ್ಯಮಿಯೆಂದು ಖ್ಯಾತರಾಗಿರುವ ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯಿಂದ ಎರಡು ಆಲಿವ್ ಮರಗಳನ್ನು ತಮ್ಮ ಮನೆಯ ಆವರಣದಲ್ಲಿ ನೆಡಲೆಂದು ತರಿಸಿಕೊಂಡಿದ್ದಾರೆ.
 
ಸ್ಪೇನ್‌ನಿಂದ ಎರಡು ವರ್ಷಗಳ ಹಿಂದೆಯೇ ಅವರು ಈ ಆಲಿವ್ ಮರಗಳನ್ನು ತರಿಸಿಕೊಂಡಿದ್ದರು. ಇಲ್ಲಿಯವರೆಗೆ ಇದನ್ನು ಗೋದಾವರಿ ನದಿಯ ದಡದಲ್ಲಿರುವ ಕದಿಯಂ ಪ್ರದೇಶದಲ್ಲಿನ ಗೌತಮಿ ನರ್ಸರಿಯಲ್ಲಿ ಪೋಷಿಸಲಾಗುತ್ತಿತ್ತು. ಇಲ್ಲಿ ಮರಗಳ ಆರೈಕೆ, ಮಣ್ಣಿನ ಫಲವತ್ತತೆ, ಬೆಳವಣಿಗೆಗೆ ಬೇಕಾದ ವಿಶೇಷ ಕಾಳಜಿಯನ್ನು ವಹಿಸಲಾಗಿತ್ತು. ಈ ಮರಗಳು ಸುಮಾರು 185 ವರ್ಷಗಳಷ್ಟು ಹಳೆಯದಾಗಿದ್ದು, ಅಂದಾಜು 1000 ವರ್ಷ ಕಾಲ ಬದುಕುತ್ತದೆ ಎನ್ನಲಾಗಿದೆ.

ಪ್ರತಿ ಮರಕ್ಕೂ ತಲಾ 47ಲಕ್ಷ ರೂ.ನಂತೆ 94 ಲಕ್ಷ ರೂ. ಕೊಟ್ಟು ಅಂಬಾನಿ ಈ ಆಲಿವ್ ಮರಗಳನ್ನು ಖರೀದಿಸಿದ್ದರು. ಈ ಮರವು ಬಹಳ ಶುಭಕಾರಕ ಎಂಬ ನಂಬಿಕೆಯಿಂದ ಇವುಗಳನ್ನು ತೀರಿಸಿಕೊಳ್ಳಲಾಗಿದೆ. ಮನೆಯಲ್ಲಿ ಈ ಮರವಿದ್ದರೆ ಅದೃಷ್ಟ ಒಲಿಯುತ್ತದೆ ಎನ್ನುವ ಕಾರಣದಿಂದ ಅಂಬಾನಿ ಇದನ್ನು ತರಿಸಿಕೊಂಡಿದ್ದಾರೆ ಎನ್ನಲಾಗಿದೆ. ಈ ಎರಡು ಮರಗಳು ವಿಶೇಷ ಟ್ರಕ್ ಮೂಲಕ ತೆಲಂಗಾಣ, ಮಹಾರಾಷ್ಟ್ರದ ಮೂಲಕ ಹಾದು ಗುಜರಾತ್‍ನ ಜಾಮ್ ನಗರದಲ್ಲಿರುವ ಅಂಬಾನಿ ಮನೆಗೆ ತರಿಸಿಕೊಳ್ಳಲಾಗಿದೆ. ಸುಮಾರು 1,800 ಕಿ.ಮೀ. ದೂರ ಕ್ರಮಿಸಿ ಇದೀಗ ಈ ಮರಗಳು ಅಂಬಾನಿ ಮನೆ ತಲುಪಿದೆ.

Ads on article

Advertise in articles 1

advertising articles 2

Advertise under the article

holige copy 1.jpg