-->
ಶಿಲ್ಪಾ-ರಾಜ್ ಕುಂದ್ರಾ 12ನೇ ವಿವಾಹ ವಾರ್ಷಿಕೋತ್ಸವ: ಮದುವೆ ದಿನದ ಫೋಟೋ ಶೇರ್ ಮಾಡಿ ಭಾವನಾತ್ಮಕ ಸಾಲು ಬರೆದ ನಟಿ

ಶಿಲ್ಪಾ-ರಾಜ್ ಕುಂದ್ರಾ 12ನೇ ವಿವಾಹ ವಾರ್ಷಿಕೋತ್ಸವ: ಮದುವೆ ದಿನದ ಫೋಟೋ ಶೇರ್ ಮಾಡಿ ಭಾವನಾತ್ಮಕ ಸಾಲು ಬರೆದ ನಟಿ

ಮುಂಬೈ: ನೀಲಿಚಿತ್ರ ನಿರ್ಮಾಣ ಪ್ರಕರಣದಲ್ಲಿ ಸಿಲುಕಿಕೊಂಡು ಇತ್ತೀಚಿಗೆ ಜೈಲಿನಿಂದ ಹೊರ ಬಂದಿರುವ ರಾಜ್‌ಕುಂದ್ರಾ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿಯವರನ್ನು ಮದುವೆಯಾದ ದಿನವಿಂದು. 2009ರ ನವೆಂಬರ್ 22 ರಂದು ಮದುವೆಯಾಗಿದ್ದ ಈ ಜೋಡಿಯು ಇಂದು ತಮ್ಮ 12ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ. 

ತಮ್ಮ 12ನೇ ವಿವಾಹ ವಾರ್ಷಿಕೋತ್ಸವದ ಈ ಸಂದರ್ಭ ನಟಿ ಶಿಲ್ಪಾ ಶೆಟ್ಟಿಯವರು ತಮ್ಮ ಮದುವೆಯ ದಿನದ ಫೋಟೋಗಳನ್ನು ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಶೇರ್‌ ಮಾಡಿಕೊಂಡಿದ್ದಾರೆ‌. ಜೊತೆಗೆ ಭಾವನಾತ್ಮಕವಾದ ಸಾಲುಗಳನ್ನು ಬರೆದುಕೊಂಡಿದ್ದಾರೆ.


“12 ವರ್ಷಗಳ ಹಿಂದೆ ನೀಡಿರುವ ಎಲ್ಲಾ ಭರವಸೆಗಳನ್ನು ನಾವಿಬ್ಬರೂ ಈಡೇರಿಸಿದ್ದೇವೆ. ಅದನ್ನು ಈಡೇರಿಸುವುದಕ್ಕೆ ಮುಂದುವರಿದಿದ್ದೇವೆ. ಉತ್ತಮವಾದ   ಸಮಯವನ್ನು ಹಂಚಿಕೊಳ್ಳುವುದು ಹಾಗೂ ಕಷ್ಟದ ದಿನಗಳನ್ನು ಸಹಿಸಿಕೊಳ್ಳುವುದು ಪ್ರೀತಿಯಲ್ಲಿ ನಂಬಿಕೆಯನ್ನು ಹೆಚ್ಚಿಸುತ್ತದೆ. ಇಂಥಹ ಎಲ್ಲಾ ಕಾಲಗಳಲ್ಲಿಯೂ ದೇವರು ನಮಗೆ ದಿನದಿಂದ ದಿನಕ್ಕೆ ದಾರಿ ತೋರಿಸುತ್ತಾನೆ. 12 ವರ್ಷಗಳು ಹೇಗೆ ಕಳೆದು ಹೋಯಿತೆಂದು ಎಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ವಾರ್ಷಿಕೋತ್ಸವದ ಶುಭಾಶಯಗಳು, ಕುಕೀ! ಎಂದು ಬರೆದಿದ್ದಾರೆ. 

ಜೊತೆಗೆ ನಮ್ಮ ಅಮೂಲ್ಯ ಆಸ್ತಿಗಳೆಂದರೆ ನಮ್ಮ ಮಕ್ಕಳು. ನಮ್ಮ ಕಷ್ಟದ ಸಂದರ್ಭ ತನಗೆ ಹಾಗೂ ತನ್ನ ಪತಿಗೆ ಬೆಂಬಲ ನೀಡಿದವರಿಗೆ ಕೃತಜ್ಞತೆ ಎಂದು ಬರೆದಿದ್ದಾರೆ. 

ನೀಲಿ ಚಿತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಸೆಪ್ಟೆಂಬರ್ 20 ರಂದು ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಜಾಮೀನು ನೀಡಿರುವ ಹಿನ್ನೆಲೆಯಲ್ಲಿ ರಾಜ್‌ಕುಂದ್ರಾ ಪತ್ನಿ ಶಿಲ್ಪಾ ಶೆಟ್ಟಿಯವರ ಜೊತೆಯಲ್ಲಿ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದಾರೆ.  

Ads on article

Advertise in articles 1

advertising articles 2

Advertise under the article