-->
ಬಿಗ್ ಬಾಸ್ ನೊಳಗೆ ಯೂಟ್ಯೂಬರ್ ರೊಮ್ಯಾನ್ಸ್: ಇನ್ ಸ್ಟಾಗ್ರಾಂನಲ್ಲಿ ಆತನನ್ನು ಅನ್ ಫಾಲೋ ಮಾಡಿದ ನಟಿ ದೀಪ್ತಿ ಸುನೈನಾ

ಬಿಗ್ ಬಾಸ್ ನೊಳಗೆ ಯೂಟ್ಯೂಬರ್ ರೊಮ್ಯಾನ್ಸ್: ಇನ್ ಸ್ಟಾಗ್ರಾಂನಲ್ಲಿ ಆತನನ್ನು ಅನ್ ಫಾಲೋ ಮಾಡಿದ ನಟಿ ದೀಪ್ತಿ ಸುನೈನಾ

ಹೈದರಾಬಾದ್​: ಶಾನು ಅಲಿಯಾಸ್​ ಷಣ್ಮುಖ​ ಜಸ್ವಂತ್​ ಮತ್ತು ದೀಪ್ತಿ ಸುನೈನಾ ತೆಲುಗು ಯೂಟ್ಯೂಬ್​ವಲಯದಲ್ಲಿ ಪ್ರಖ್ಯಾತ ಮತ್ತು ಮುದ್ದಾದ ಜೋಡಿಗಳು. ಇಬ್ಬರೂ  ಪರಸ್ಪರ ಪ್ರೀತಿಸುತ್ತಿರುವುದು ಷಣ್ಮುಖ​ ಜಸ್ವಂತ್ ಬಿಗ್ ಬಾಸ್ ಪ್ರವೇಶದ ಸಮಯದಲ್ಲಿ ಜಗಜ್ಜಾಹೀರಾಗಿತ್ತು. ಅದನ್ನು ಸ್ವತಃ ಷಣ್ಮುಖ ಕೂಡ ಹೇಳಿಕೊಂಡಿದ್ದಾರೆ.

ಶಾನು ಅಲಿಯಾಸ್ ಷಣ್ಮಖ ಜಸ್ವಂತ್ ಪ್ರಸ್ತುತ ತೆಲುಗು ಬಿಗ್​ಬಾಸ್​ ಸೀಸನ್​ 5ರ ಸ್ಪರ್ಧಿಯಾಗಿದ್ದಾರೆ. ಆತ ಬಿಗ್​ಬಾಸ್​ ಪ್ರವೇಶ ಮಾಡಿದಂದಿನಿಂದ ದೀಪ್ತಿ ಸಾಕಷ್ಟು ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಶಾನು ನಾಮಿನೇಶನ್​ ಆದಾಗಲೆಲ್ಲಾ ಆತನಿಗೆ ವೋಟ್​ ಮಾಡಿ ಉಳಿಸುವಂತೆ ಸಾಮಾಜಿಕ ಜಾಲತಾಣಗಳಲ್ಲಿ ದೀಪ್ತಿ ಪ್ರತಿ ಬಾರಿ ಜನರಲ್ಲಿ ಹಾಗೂ ಅಭಿಮಾನಿಗಳಲ್ಲಿ ಮನವಿ ಮಾಡುತ್ತಿದ್ದರು. 

ಆದರೆ, ಇದೀಗ ಶಾನು ಮತ್ತು ದೀಪ್ತಿ ನಡುವೆ ಬ್ರೇಕಪ್ ಆಗಿದೆ ಎಂಬ ವಿಚಾರ ಬೆಳಕಿಗೆ ಬಂದಿದೆ. ಬಿಗ್​ಬಾಸ್​ನೊಳಗೆ ಶಾನು ಕ್ಯಾಪ್ಟನ್​ ಆದ ಬಳಿಕ ಇತ್ತೀಚಿನ ಎಪಿಸೋಡ್​ನಲ್ಲಿ ಪ್ರತಿಸ್ಪರ್ಧಿ ಸಿರಿ, ಶಾನು ಹಣೆಗೆ ಮುತ್ತಿಟ್ಟಿದ್ದರು. ಅಲ್ಲದೆ, ಒಂದು ರಾತ್ರಿ ಇಬ್ಬರು ಮಾತನಾಡುತ್ತಿದ್ದ ವೇಳೆ ಸಿರಿ, ಶಾನು ಎದೆಯ ಮೇಲೆ ಮಲಗಿದ್ದರು. ಇದನ್ನು ನೋಡುವಾಗ ಇವರ ನಡುವೆ ಬಹಳ ಸಲುಗೆ ಇರುವಂತೆ ಕಾಣುತ್ತಿದೆ. 

ಈ ಘಟನೆಗಳ ಬಳಿಕ ದೀಪ್ತಿ ಬಹಳ ಕೋಪಗೊಂಡಿದ್ದಾರೆ ಎಂಬ ವಿಚಾರ ಬೆಳಕಿಗೆ ಬಂದಿದೆ. ಶಾನು ಹಾಗೂ ಸಿರಿ ತುಂಬಾ ಸಲುಗೆಯಿಂದ ಇರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ದೀಪ್ತಿಗೆ ಇರಿಸುಮುರಿಸು ತಂದಿದೆ. ಅಲ್ಲದೆ, ಆಕೆಯ ಭಾವನೆಗಳಿಗೆ ಆಘಾತವಾಗಿದೆ. 

ಹೀಗಾಗಿ ಆಕೆ ತನ್ನ ಇನ್​ಸ್ಟಾಗ್ರಾಂ ಫಾಲೋವರ್ಸ್​ ಲೀಸ್ಟ್​ನಿಂದ ಶಾನು ಅನ್ನು ಅನ್​​ ಫಾಲೋ ಮಾಡಿದ್ದಾರೆ. ಅಭಿಮಾನಿಗಳು ಕೂಡ ಅದನ್ನು ಸ್ವೀಕರಿಸಿದ್ದಾರೆ. ಷಣ್ಮುಖ್ ಜಸ್ವಂತ್ ಶೋನಿಂದ ಹೊರಬಂದ ಬಳಿಕ ಇಬ್ಬರು ನಿಜವಾಗಿಯೂ ತಮ್ಮ ಮಾರ್ಗಗಳನ್ನು ಬೇರ್ಪಡಿಸಿದ್ದಾರೆಯೇ ಎಂಬುದನ್ನು ಕಾದು ನೋಡಬೇಕಾಗಿದೆ. 

Ads on article

Advertise in articles 1

advertising articles 2

Advertise under the article