-->
Viral Reaction on Modi - ಮೋದಿ ಅಪ್ಪಟ ಡೆಮಾಕ್ರಾಟಿಕ್ ನಾಯಕ: ಅಮಿತ್ ಹೊಗಳಿಕೆಗೆ ಟೆನ್ನಿಸ್ ಕ್ವೀನ್ ಮಾರ್ಟೀನಾ ನವ್ರಾಟಿಲೋವಾ ನೀಡಿದ ಉತ್ತರ ಜಗತ್ತಲ್ಲೇ ವೈರಲ್

ನರೇಂದ್ರ ಮೋದಿ ಒಬ್ಬ ಅಪ್ರತಿಮ ಪ್ರಜಾಪ್ರಭುತ್ವವಾದಿ ನಾಯಕ, ಅಪ್ಪಟ ಜನಪರ ನಾಯಕ ಎಂಬ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ಲಿವಿಂಗ್ ಲೆಜೆಂಡ್ ಟೆನ್ನಿಸ್ ತಾರೆ ಮಾರ್ಟಿನಾ ನವ್ರಾಟಿಲೋವಾ ವಿಶ್ವವೇ ನಿಬ್ಬೆರಗಾಗುವ ಪ್ರತಿಕ್ರಿಯೆ ನೀಡಿದ್ದಾರೆ. ಅವರ ಟ್ವಿಟ್ಟರ್ ರಿಯಾಕ್ಷನ್ ವಿಶ್ವದಲ್ಲೇ ಭಾರೀ ವೈರಲ್ ಆಗಿದೆ.ಸಂಸದ್ ಟಿವಿಯ ಸಂದರ್ಶನವೊಂದರಲ್ಲಿ ಗೃಹ ಸಚಿವ ಅಮಿತ್ ಶಾ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಹಾಡಿ ಹೊಗಳಿದ್ದರು. ಅವರೊಬ್ಬ ಮಹಾ ಪ್ರಜಾಪ್ರಭುತ್ವವಾದಿ ನಾಯಕ ಎಂದು ಹೇಳಿದ್ದರು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಅವರೊಬ್ಬ ಜನಪರ ನಾಯಕ. ಎಲ್ಲರ ಮಾತುಗಳನ್ನೂ ತಾಳ್ಮೆಯಿಂದ ಕೇಳುತ್ತಾರೆ ಎಂದು ಮೋದಿ ಅವರ ಗುಣಗಾನ ಮಾಡಿದ್ದರು.ಮೋದಿ ಎಲ್ಲರ ಮಾತುಗಳನ್ನೂ ಆಲಿಸುತ್ತಾರೆ. ಹೇಳುವವ ಯಾರು ಎಂಬುದನ್ನು ನೋಡದೆ, ಎಂತಹ ಸಲಹೆಯನ್ನು ಕೊಡುತ್ತಾರೆ ಎಂಬುದಕ್ಕೆ ಹೆಚ್ಚು ಬೆಲೆ ಕೊಡುತ್ತಿದ್ದರು. ಮತ್ತು ವಿಚಾರಬದ್ಧ, ಮೌಲ್ಯಯುತ ಸಲಹೆಗಳನ್ನು ಸ್ವೀಕರಿಸುತ್ತಿದ್ದಾರೆ ಎಂದು ಶಾ ಹೇಳಿದ್ದರು.
ಶಾ ಅವರ ಈ ಹೇಳಿಕೆಗಳು ದೇಶಾದ್ಯಂತ ಕ್ಷಿಪ್ರ ಪ್ರಚಾರಕ್ಕೆ ಬಂದಿತ್ತು. ಮತ್ತು ಈ ಬಗ್ಗೆ ದಿಗ್ಗಜ ಟೆನಿಸ್ ತಾರೆ ಮಾರ್ಟಿನಾ ನವ್ರಾಟಿಲೋವಾ ಅವರೂ ಸೂಕ್ಷ್ಮವಾಗಿ ಗಮನಿಸಿದ್ದಾರೆ. ಮತ್ತು ಶಾ ಅವರ ಹೇಳಿಕೆಗೆ ತಕ್ಷ್ಮಣ ಮತ್ತು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ."And for my next joke...." ಎಂದು ಶಾ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ. ಅವರ ಈ ಟ್ವೀಟ್ ವಿಶ್ವದಲ್ಲೇ ಭಾರೀ ವೈರಲ್ ಆಗಿದೆ.ಇದಕ್ಕೆ ಭಾರತದಲ್ಲೂ ಭರ್ಜರಿ ಪ್ರತಿಕ್ರಿಯೆಗಳ ಮಹಾಪೂರವೇ ಹರಿದುಬಂದಿದೆ. ಸಹಸ್ರಾರು ಮಂದಿ ನವ್ರಾಟಿಲೋವಾ ಅವರ ಪ್ರತಿಕ್ರಿಯೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರೆ, ಅಸಂಖ್ಯಾತ ಮಂದಿ ನವ್ರಾಟಿಲೋವ ಅವರನ್ನು ಟೀಕಿಸಿದ್ದಾರೆ.

Ads on article

Advertise in articles 1

advertising articles 2

Advertise under the article