ವಾಷಿಂಗ್ಟನ್: ಕೊರೊನಾ ಬಳಿಕ ಹೆಚ್ಚಿನ ಕಚೇರಿಗಳು ವರ್ಕ್ ಫ್ರಂ ಹೋಮ್ ಕೊಟ್ಟಿದ್ದು ಆನ್‌ಲೈನ್ ಮೀಟಿಂಗ್ ವೇಳೆ ಅಶ್ಲೀಲ ದೃಶ್ಯಗಳು ನೇರಾನೇರವಾಗಿ ಕಂಡು ಎಡವಟ್ಟಾಗಿರು ಅನೇಕ ಘಟನೆಗಳು ಸುದ್ದಿಯಾಗಿವೆ. ನಗ್ನರಾಗಿ ಕಾಣಿಸಿಕೊಂಡಿರುವುದು, ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದು, ಅಶ್ಲೀಲ ಚಿತ್ರಗಳು, ವೀಡಿಯೋಗಳೆಲ್ಲವನ್ನೂ ಮೀಟಿಂಗ್‌ನಲ್ಲಿ ಇರುವವರು ನೋಡಿದ್ದಾಗಿದೆ. ಇದೀಗ ಅಂಥದ್ದೇ ಒಂದು ಘಟನೆ ಅಮೆರಿಕಾದಲ್ಲಿ ನಡೆದಿದ್ದು, ಆ್ಯಂಕರ್ ಓರ್ವಳು ಹವಾಮಾನ ವರದಿಯನ್ನು ಓದುವ ವೇಳೆಯೇ ಪೋರ್ನ್ ವಿಡಿಯೋ ಪ್ರಸಾರವಾಗಿರುವ ಘಟನೆ ನಡೆದಿದೆ.
ಟಿವಿ ಬ್ರಾಡ್‌ಕಾಸ್ಟಿಂಗ್ ಸಂಸ್ಥೆಯ ‘ಕ್ರೇಮ್ 2’ ನ್ಯೂಸ್ ಚಾನೆಲ್ನಲ್ಲಿ ಇಂಥದ್ದೊಂದು ಎಡವಟ್ಟು ನಡೆದಿದೆ. ಹವಾಮಾನ ವರದಿಯನ್ನು ವಿವರಿಸುತ್ತಿದ್ದ ಆ್ಯಂಕರ್ ''ಇಂದಿನ ಹವಾಮಾನ ವರದಿ ಹೀಗಿದೆ ನೋಡಿ" ಎಂದು ಹೇಳುತ್ತಿದ್ದರು. ಆದರೆ ಆಕೆಗೆ  ಯಾವ ದೃಶ್ಯ ಬರುತ್ತಿದೆ ಎಂಬುದರ ಬಗ್ಗೆ ತಿಳಿದೇ ಇರಲಿಲ್ಲ.
ಅದೇ ವೇಳೆ ಹವಾಮಾನ ವರದಿಯ ಬದಲು ಜೋಡಿಗಳು ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡಿರುವ ದೃಶ್ಯ ಪ್ರಸಾರವಾಗುತ್ತಿತ್ತು. ಇದನ್ನು ನೋಡಿ ವೀಕ್ಷಕರು ಕಕ್ಕಾಬಿಕ್ಕಿಯಾಗಿದ್ದಾರೆ. ಆದರೂ ಇದು ಆ್ಯಂಕರ್ ಗಮನಕ್ಕೆ ಬಂದಿರಲೇ ಇಲ್ಲ. ಆಕೆ ಹವಾಮಾನ ವರದಿಯನ್ನು ವಿಶ್ಲೇಷಿಸುತ್ತಲೇ ಇದ್ದರು. ಅತ್ತ ಹವಾಮಾನ ತಜ್ಞೆ ಮಿಶೆಲ್ ಬಾಸ್ ವಾತಾವರಣದ ಬಗ್ಗೆ ಮಾಹಿತಿ ನೀಡುತ್ತಿದ್ದರು.
13 ಸೆಕೆಂಡ್ಗಳ ಕಾಲ ಈ ಅಶ್ಲೀಲ ವೀಡಿಯೋ ಸಂಜೆ 6 ಗಂಟೆಯ  ಬುಲೆಟಿನ್ ನಲ್ಲಿ ಈ ಪೋರ್ನ್ ವೀಡಿಯೋ ಪ್ರಸಾರವಾಗಿತ್ತು. ನಂತರ ಈ ಬಗ್ಗೆ ಹಲವಾರು ದೂರವಾಣಿ ಕರೆಗಳು ಬಂದಾಗಲೇ ಈ ವಿಚಾರ ಚ್ಯಾನೆಲ್ ನವರ ಗಮನಕ್ಕೆ ಬಂದಿದೆ. ತಮ್ಮಿಂದಾದ ಎಡವಟ್ಟಿಗೆ ಚಾನೆಲ್‌ನವರು ರಾತ್ರಿ ಕ್ಷಮಾಪಣೆ ಕೇಳಿದ್ದಾರೆ.
 
   
 
 
 
 
 
 
 
 
 
 
 
 
 
 
 
 
 
 
