ಸಾಕಷ್ಟು ವರ್ಷಗಳ ಬಳಿಕ ಪ್ಯಾರಿಸ್ ನಲ್ಲಿ ಐಶ್ವರ್ಯಾ ರೈ ಕ್ಯಾಟ್ ವಾಕ್: ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳು ಭಾರೀ ವೈರಲ್

ಪ್ಯಾರಿಸ್: ಬಾಲಿವುಡ್ ಬ್ಯೂಟಿ ಕ್ವೀನ್, ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈಯವರಿಗೆ ಮಾಡಲಿಂಗ್, ರ‍್ಯಾಂಪ್ ವಾಕ್ ಯಾವುದೂ ಹೊಸದಲ್ಲ. ಅವರು ಬಾಕಿವುಡ್ ನಲ್ಲಿ ನಟಿಯಾಗಿ ಮಿಂಚುವುದಕ್ಕೆ ಮೊದಲು ಅದೆಷ್ಟು ಶೋಗಳಲ್ಲಿ ಕ್ಯಾಟ್​ವಾಕ್ ಮಾಡಿದ್ದರೋ ಲೆಕ್ಕ ಇಟ್ಟವರಿಲ್ಲ.

ಆದರೆ, ಇತ್ತೀಚಿಗೆ ಮಾಡಲಿಂಗ್​, ಬೆಕ್ಕಿನ ನಡಿಗೆಯಿಂದ ಸ್ವಲ್ಪ ದೂರ ಉಳಿದಿದ್ದಾರೆ. ಆದರೆ ಮೊನ್ನೆ ಪ್ಯಾರಿಸ್​ನಲ್ಲಿ ನಡೆದ ಪ್ಯಾರಿಸ್ ಫ್ಯಾಶನ್ ವೀಕ್​ನಲ್ಲಿ ಅವರು ಬಹಳ ವರ್ಷಗಳ ಬಳಿಕ ರ‍್ಯಾಂಪ್ ವಾಕ್ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ. ಪ್ಯಾರಿಸ್​ನ ಐಫೆಲ್ ಟವರ್ ಮುಂಭಾಗ ನಡೆದ ಈ ಕಾರ್ಯಕ್ರಮದಲ್ಲಿ ಹಲವಾರು ದೇಶಗಳ ಪ್ರಖ್ಯಾತ ಮಾಡೆಲ್​ಗಳು ಹಾಗೂ ನಟಿಯರು ಭಾಗವಹಿಸಿದ್ದರು. ಇಲ್ಲಿ ಮತ್ತೆ ಐಶ್ವರ್ಯಾ ರೈ ಬೆಕ್ಕಿನ ನಡಿಗೆ ನಡೆದು ಎಲ್ಲರ ಕಣ್ಮನ ಸೆಳೆದಿದ್ದಾರೆ.


ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಐಶ್ವರ್ಯಾ ರೈ ತಮ್ಮ ಪತಿ ಅಭಿಷೇಕ್ ಬಚ್ಚನ್ ಮತ್ತು ಮಗಳು ಆರಾಧ್ಯಾರೊಂದಿಗೆ ಹೋಗಿದ್ದರು. ಈ ಸಂದರ್ಭ ಅವರು ಅಚ್ಚ ಬಿಳುಪಿನ ಅಂಗಿ ತೊಟ್ಟು, ತುಟಿಗೆ ಪಿಂಕ್ ಲಿಪ್​ಸ್ಟಿಕ್ ಹಚ್ಚಿಕೊಂಡು ಕ್ಯಾಟ್ ವಾಕ್ ಮಾಡಿದ್ದಾರೆ. ಅವರು ಕ್ಯಾಟ್ ವಾಕ್ ಮಾಡಿರುವಾಗ ತೆಗೆದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. 

ಈ ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಸೆಲೆಬ್ರಿಟಿಗಳಾದ ಹೆಲೆನ್ ಮಿರ್ರೆನ್, ಕ್ಯಾಮಿಲಾ ಕ್ಯಾಬೆಲ್ಲೋ, ಅಂಬೆರ್ ಹರ್ಡ್ ಸಹ ಭಾಗವಹಿಸಿದ್ದು, ಅವರೆಲ್ಲರ ಜತೆಗೆ ಐಶ್ವರ್ಯಾ ರೈ ಕೂಡಾ ಬೆಕ್ಕಿನ ನಡಿಗೆಗೆ ಹೆಜ್ಜೆ ಹಾಕಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu