ಮಂಗಳೂರಿನ ಗುರುಪುರ ಗುಡ್ಡೆಯಲ್ಲಿ ಅನ್ಯಕೋಮಿನ ಜೋಡಿ ಶಂಕೆಯಲ್ಲಿ ಕಾರ್ಯಾಚರಣೆ ನಡೆಸಿದ ಬಜರಂಗದಳ!



ಮಂಗಳೂರು ; ಮಂಗಳೂರಿನ ಗುರುಪುರದ ಚಿಲಿಂಬಿ ಗುಡ್ಡೆ ಎಂಬಲ್ಲಿ  ಅನ್ಯಕೋಮಿನ ಜೋಡಿ ಇದೆ ಎಂದು ಶಂಕಿಸಿ  ಬಜರಂಗದಳದ ಕಾರ್ಯಕರ್ತರು ಕಾರ್ಯಾಚರಣೆ ನಡೆಸಿದ್ದಾರೆ.

ಚಿಲಿಂಬಿ ಗುಡ್ಡೆಯಲ್ಲಿ ಅನ್ಯ ಕೋಮಿನ ಜೋಡಿ ಇದೆ ಎಂದು ಸಂಜೆಯ ವೇಳೆಗೆ ಬಜರಂಗದಳ ಕಾರ್ಯಕರ್ತರು ಕಾರ್ಯಾಚರಣೆ ನಡೆಸಿದ್ದರು. ನಂಬರ್ ಪ್ಲೇಟ್ ಇಲ್ಲದ ಕಾರಿನಲ್ಲಿ ಬಂದಿದ್ದಾರೆ ಎಂದು ಈ  ಗುಂಪನ್ನು ಪೊಲೀಸರಿಗೊಪ್ಪಿಸಿದ್ದಾರೆ.

 ಈ ಗುಂಪಿನಲ್ಲಿ ಓರ್ವ ಹಿಂದೂ ಯುವಕ ಮತ್ತು ಆತನ ಇಬ್ಬರು ಸ್ನೇಹಿತೆಯರು ಮತ್ತು ಓರ್ವ ಮುಸ್ಲಿಂ ಧರ್ಮದ ಸ್ನೇಹಿತನಿದ್ದ. ಇವರು ತಿರುಗಾಡಲೆಂದು ಇಲ್ಲಿಗೆ ಬಂದಿದ್ದ ವೇಳೆ  ಬಜರಂಗದಳ ಕಾರ್ಯಕರ್ತರ ಕಾರ್ಯಾಚರಣೆಗೊಳಗಾಗಿದ್ದಾರೆ.

ಬಜರಂಗದಳ ಕಾರ್ಯಕರ್ತರು ಇವರನ್ನು ಪೊಲೀಸರ ವಶಕ್ಕೊಪ್ಪಿಸಿದ್ದು ಇವರನ್ನು ವಿಚಾರಣೆ ನಡೆಸಿದ ಬಳಿಕ ಪೊಲೀಸರು ಮನೆಗೆ ಕಳುಹಿಸಿಕೊಟ್ಟಿದ್ದಾರೆ.

 .
BREAKING NEWS
Loading latest news...
Join our WhatsApp Channel Powered By : Online Pudu