'ಬಿಕಿನಿ' ಫೋಟೋ ಕೇಳಿದ ನಟ್ಟಿಗನಿಗೆ ನಟಿ ಅನುಪಮಾ ಪರಮೇಶ್ವರನ್

ಹೈದರಾಬಾದ್​: ಪವರ್ ಸ್ಟಾರ್ ಪುನೀತ್​ ರಾಜ್​ಕುಮಾರ್​ ಅಭಿನಯದ 'ನಟ ಸಾರ್ವಭೌಮ' ಸಿನಿಮಾದ ಮೂಲಕ ಚಂದನವನಕ್ಕೆ ಎಂಟ್ರಿ ಕೊಟ್ಟಿರುವ ನಟಿ ಅನುಪಮಾ ಪರಮೇಶ್ವರನ್ ಈಗ ಸೌತ್ ಇಂಡಿಯನ್ ಬ್ಯೂಟಿ ಕ್ವೀನ್ ಆಗಿದ್ದಾರೆ. 

ಮೂಲತಃ ಮಲಯಾಳಂ ಬೆಡಗಿಯಾಗಿರುವ ಅವರು ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿಯೂ ತಮ್ಮ ಛಾಪು ಮೂಡಿಸಿದ್ದಾರೆ. ಇಂತಿಪ್ಪ ಅನುಪಮಾ ಪರಮೇಶ್ವರನ್ ಸಾಮಾಜಿಕ ಜಾಲತಾಣಗಳಲ್ಲಿ ಎಷ್ಟು ಸಕ್ರಿಯರೆಂಬುದು ಜಾಲತಾಣ ಪ್ರಿಯರಿಗೆ ತಿಳಿದಿರುವ ವಿಚಾರ. 

ಇತ್ತೀಚೆಗಷ್ಟೇ ಇನ್​ಸ್ಟಾಗ್ರಾಂ ಮೂಲಕ ಅನುಪಮಾ ತಮ್ಮ ಅಭಿಮಾನಿಗಳೊಂದಿಗೆ ಸಂಭಾಷಣೆ ನಡೆಸಿದ್ದರು. ಈ ಸಂದರ್ಭ ನೆಟ್ಟಿಗನಳರ್ವ ಕೇಳಿರುವ ಪ್ರಶ್ನೆಗೆ ನೀಡಿರುವ ತಿರುಗೇಟಿಗೆ ಹೆಚ್ಚಿನ ಜಾಲತಾಣ ಪ್ರಿಯರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇದೀಗ ಅನುಪಮಾ ಪರಮೇಶ್ವರನ್ ನೆಟ್ಟಿಗ ಕೇಳಿರುವ ಪ್ರಶ್ನೆಯ ಸ್ಕ್ರೀನ್​ಶಾಟ್​ ಅನ್ನು ತಮ್ಮ ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ಶೇರ್​ ಮಾಡಿಕೊಂಡಿದ್ದಾರೆ. 

ಅಭಿಮಾನಿಗಳೊಂದಿಗೆ ಸಂಭಾಷಣೆ ನಡೆಸುತ್ತಿದ್ದ ವೇಳೆ ನೆಟ್ಟಿಗನೋರ್ವನು ನಿಮ್ಮ ಬಿಕಿನಿ ಫೋಟೋವನ್ನು ಕಳುಹಿಸುವಿರಾ? ಎಂದು ಕೇಳಿದ್ದಾನೆ. ಇದಕ್ಕೆ ತಾಳ್ಮೆಯಿಂದ ಉದ್ವೇಗಕ್ಕೊಳಗಾಗದೆ ಪ್ರತಿಕ್ರಿಯಿಸಿರುವ ಅನುಪಮಾ, 'ನಿಮ್ಮ ಮನೆಯ ವಿಳಾಸ ತಿಳಿಸಿ, ನನ್ನ ಬಿಕಿನಿ ಫೋಟೋವನ್ನು ನಿಮ್ಮ ಮನೆಯ ವಿಳಾಸಕ್ಕೆ ಕಳುಹಿಸುತ್ತೇನೆ. ಅದನ್ನು ಫ್ರೇಮ್​ ಮಾಡಿ ನಿಮ್ಮ ಮನೆಯ ಗೋಡೆಯ ಮೇಲೆ ಹಾಕಿಕೊಳ್ಳಿ' ಎಂದು ತಿರುಗೇಟು ನೀಡಿದ್ದಾರೆ.

ಇದೀಗ ಅನುಪಮಾ ಪರಮೇಶ್ವರನ್ ನಟ ನಿಖಿಲ್ ರೊಂದಿಗೆ '18 ಪೇಜಸ್​' ಹೆಸರಿನ ತೆಲುಗು ಚಿತ್ರದಲ್ಲಿ ನಟಿಸುತ್ತಿದ್ದಾರೆ.