ನೇಪಾಲಿ ಮೂಲದ ಮಹಿಳೆ ಮಂಗಳೂರಿನಲ್ಲಿ ನಾಪತ್ತೆ- ಪತಿಯಿಂದ ದೂರು

 

 


 

ಮಂಗಳೂರು:  ನೇಪಾಲ ಮೂಲದ ಹೆಂಡತಿ ಮಂಗಳೂರಿನಲ್ಲಿ ನಾಪತ್ತೆಯಾಗಿದ್ದಾಳೆ ಎಂದು ಆಕೆಯ ಪತಿ ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಸೀತಾ ಬೋಹರ್ ಎಂಬವರು ನಾಪತ್ತೆಯಾದ ಮಹಿಳೆ. ಇವರು  ನೇಪಾಲದವರಾಗಿದ್ದು ಇವರ ಪತಿ ಉಮೇಶ್ ಬೋಹಾರ್  ಮಂಗಳೂರಿನಲ್ಲಿ ಸೆಕ್ಯೂರಿಟಿ ಕೆಲಸ ಮಾಡುತ್ತಿದ್ದಾರೆ.

 

ಕಳೆದ ಮೂರು ವರ್ಷಗಳ ಹಿಂದೆ ಉಮೇಶ್ ಅವರು ಹೆಂಡತಿ ಮತ್ತು ಮಗನೊಂದಿಗೆ  ನೇಪಾಲದಿಂದ ಮಂಗಳೂರಿಗೆ ಬಂದಿದ್ದರು. ಸೀತಾ ಬೋಹರ್ ಅವರು ಸೆಪ್ಟೆಂಬರ್ 27 ರಂದು ಮನೆ ಗೆಲಸಕ್ಕೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದವರು ಮರಳಿ ಮನೆಗೆ ಬಂದಿಲ್ಲ. ಎಲ್ಲಿಯೂ ವಿಚಾರಿಸಿದರೂ ಆಕೆ ಪತ್ತೆಯಾಗದೆ ಇರುವುದರಿಂದ  ಕದ್ರಿ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದಾರೆ.