-->
Forensic Odontology Centre in Yenepoya University - ಯೆನೆಪೋಯಾ ದಂತ ವೈದ್ಯಕೀಯ ವಿವಿಯಲ್ಲಿ ವಿಧಿವಿಜ್ಞಾನ ದಂತ ಶಾಸ್ತ್ರ ವಿಭಾಗ ಉದ್ಘಾಟನೆ

Forensic Odontology Centre in Yenepoya University - ಯೆನೆಪೋಯಾ ದಂತ ವೈದ್ಯಕೀಯ ವಿವಿಯಲ್ಲಿ ವಿಧಿವಿಜ್ಞಾನ ದಂತ ಶಾಸ್ತ್ರ ವಿಭಾಗ ಉದ್ಘಾಟನೆಯೆನೆಪೊಯಾ ದಂತ ವೈದ್ಯಕೀಯ ಮಹಾವಿದ್ಯಾಲಯದ “ವಿಧಿ-ವಿಜ್ಞಾನ” ದಂತ ಶಾಸ್ತ್ರ ವಿಭಾಗವನ್ನು, ನೂತನವಾಗಿ ಪ್ರಾರಂಭಿಸಲಾಗಿದೆ.ಧಾರವಾಡದ, ಎಸ್.ಡಿ.ಎಮ್ ದಂತ ವೈದೈಕೀಯ ಮಹಾವಿದ್ಯಾಲಯದ , ವಿಧಿ-ವಿಜ್ಞಾನ ದಂತಶಾಸ್ತ್ರ ವಿಭಾಗದ ಮುಖ್ಯಸ್ಧರಾದ ಡಾ. ಅಶಿತ್.ಬಿ ಆಚಾರ್ಯ ಈ ವಿಭಾಗವನ್ನು ವಿಧ್ಯುಕ್ತವಾಗಿ ಉದ್ಘಾಟಿಸಿದರು.ಯೆನೆಪೊಯಾ ದಂತ ಮಹಾವಿದ್ಯಾಲಯದ ಈ ವಿಭಾಗದ ಮುಖ್ಯಸ್ಥರಾದ ಡಾ. ಸುಧೀಂದ್ರ ಪ್ರಭು ಸ್ವಾಗತಿಸಿದರು.ಪ್ರಾಂಶುಪಾಲರಾದ ಡಾ. ಅಖ್ತರ್ ಹುಸೈನ್, ಈ ವಿಭಾಗದಲ್ಲಿ ದಂತವೈದ್ಯರಿಗೆ ತರಬೇತಿ ನೀಡುವುದರ ಪ್ರಾಮುಖ್ಯತೆಯನ್ನು ವಿವರಿಸಿದರು.ಯೆನೆಪೊಯ ವಿಶ್ವವಿದ್ಯಾಲಯದ ಪರವಾಗಿ ಉಪ ಕುಲಪತಿ ಡಾ. ಬಿ.ಎಚ್. ಶ್ರೀಪತಿ ರಾವ್, ಸ್ಥಳೀಯ ಕಾನೂನು ಜಾರಿ ಮಾಡುವ ಸಂಸ್ಥೆಗಳಿಗೆ ಈ ವಿಭಾಗದ ಮಹತ್ವದ ಬಗ್ಗೆ ವಿವರಿಸಿದರು.

ರಿಜಿಸ್ಟ್ರಾರ್ ಡಾ. ಗಂಗಾದರ ಸೋಮಯಾಜಿ ಅವರು, ಈ ವಿಭಾಗದ ನೂತನ ಲಾಂಛನವನ್ನು ಬಿಡುಗಡೆ ಮಾಡಿದರು.


ಪ್ರಾದ್ಯಾಪಕರಾದ ಡಾ. ಸಯ್ಯದ್ ಮಿಕ್ ದಾದ್ ವಂದಿಸಿದರು ಮತ್ತು ಡಾ.ಉಮ್ಮೆ ಅಮರ್ ಕಾರ್ಯಕ್ರಮ ನಿರೂಪಿಸಿದರು.

Ads on article

Advertise in articles 1

advertising articles 2

Advertise under the article