-->

cpim fixes age limit for leadership - ಯುವ ನಾಯಕತ್ವಕ್ಕೆ ಮಣೆ ಹಾಕಲಿರುವ ಸಿಪಿಐಎಂ: 75ರ ನಂತರ ನಾಯಕರಿಗೆ ನಿವೃತ್ತಿ?

cpim fixes age limit for leadership - ಯುವ ನಾಯಕತ್ವಕ್ಕೆ ಮಣೆ ಹಾಕಲಿರುವ ಸಿಪಿಐಎಂ: 75ರ ನಂತರ ನಾಯಕರಿಗೆ ನಿವೃತ್ತಿ?





ಮಹತ್ವದ ಬೆಳವಣಿಗೆಯೊಂದರಲ್ಲಿ ಸಿಪಿಎಂ ಪಕ್ಷ ತನ್ನ ನಾಯಕತ್ವಕ್ಕೆ ವಯಸ್ಸಿನ ಮಿತಿಯನ್ನು ಹೇರಿದೆ. 75 ವರ್ಷ ದಾಟಿದ ನಂತರ ಪಕ್ಷದ ನಾಯಕರು ತನ್ನ ಅತ್ಯುನ್ನತ ಸಮಿತಿಗಳಾದ ಕೇಂದ್ರ ಸಮಿತಿ ಮತ್ತು ಪಾಲಿಟ್ ಬ್ಯೂರೋದಿಂದ ನಿವೃತ್ತರಾಗಲಿದ್ದಾರೆ.


ಈ ಕುರಿತ ಮಹತ್ವದ ತೀರ್ಮಾನವನ್ನು ಪಕ್ಷ ಮುಂದಿನ ಮಹಾ ಅಧಿವೇಶನಕ್ಕೆ ಮುಂದಿಡಲು ನಿರ್ಧಾರ ಕೈಗೊಂಡಿದ್ದು, ಮಹಾಧಿವೇಶನ ಈ ನಿರ್ಧಾರಕ್ಕೆ ಅಂತಿಮ ಮುದ್ರೆ ಒತ್ತಿದರೆ, 75 ದಾಟಿದ ನಾಯಕರು ಶೀಘ್ರದಲ್ಲೇ ಪಕ್ಷದ ಉನ್ನತ ಸಮಿತಿಗಳಿಂದ ನಿವೃತ್ತರಾಗಲಿದ್ದಾರೆ.




ಸಿಪಿಐಎಂನ ಮಹಾಧಿವೇಶನ ಮುಂದಿನ ಎಪ್ರಿಲ್ 2022ರಲ್ಲಿ ಕೇರಳದ ಕಣ್ಣೂರಿನಲ್ಲಿ ನಡೆಯಲಿದೆ.



ನವದೆಹಲಿಯಲ್ಲಿ ನಡೆದ ಪಕ್ಷದ ಕೇಂದ್ರ ಸಮಿತಿಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಒಂದು ವೇಳೆ, ಈ ನಿರ್ಧಾರಕ್ಕೆ ಮಹಾಧಿವೇಶನ ಅಂಕಿತ ಹಾಕಿದರೆ, ಪಕ್ಷವನ್ನು ದಶಕಗಳಿಂದ ಮುನ್ನಡೆಸಿದ ಹಲವು ನಾಯಕರು ನಿವೃತ್ತರಾಗಲಿದ್ದಾರೆ.



1984ರಲ್ಲಿ ಆಗ 30ರ ವಯಸ್ಸಿನಲ್ಲಿದ್ದ ಪ್ರಕಾಶ್ ಕಾರಟ್ ಮತ್ತು ಸೀತಾರಾಮ ಯೆಚೂರಿ ಸಿಪಿಎಂನ ಆಗಿನ ಕೇಂದ್ರ ಸಮಿತಿಗೆ ಆಯ್ಕೆಯಾಗಿದ್ದರು. ಆ ಬಳಿಕ ಯುವ ನಾಯಕತ್ವಕ್ಕೆ ಮಣೆ ಹಾಕುವ ಇಂತಹ ಯಾವುದೇ ಘಟನೆ ನಡೆದಿರಲಿಲ್ಲ.


ದೇಶದಲ್ಲಿ ರಾಜಕೀಯವಾಗಿ ಭಾರೀ ಹಿನ್ನಡೆ ಕಂಡಿರುವ ಸಿಪಿಎಂ ಪಕ್ಷ ಸಂಘಟನೆಯಲ್ಲಿ ಈ ನಿರ್ಧಾರ ಭಾರೀ ಮಹತ್ವದ್ದು ಎಂದು ಹೇಳಲಾಗಿದೆ.

Ads on article

Advertise in articles 1

advertising articles 2

Advertise under the article