ರಾಷ್ಟ್ರೀಯ ಮಹಿಳಾ ಆಯೋಗವು ಗರ್ಭೀಣಿ ಮಹಿಳೆಯರ ತುರ್ತು ವೈದ್ಯಕೀಯ ಸಹಾಯಕ್ಕಾಗಿ ನೆರವು ನೀಡಲು ಸಹಕಾರ ನೀಡುವ ಸಲುವಾಗಿ ವಾಟ್ಸಪ್ ಸಹಾಯವಾಣಿ ಸಂಖ್ಯೆ 9354954224 ಅನ್ನು ಪ್ರಾರಂಭಿಸಿದ್ದು, ದಿನದ 24 ಗಂಟೆಯು ಕಾರ್ಯನಿರ್ವಹಿಸಲಿದೆ.
ಗರ್ಭಿಣಿ ಮಹಿಳೆಯರ ವೈದ್ಯಕೀಯ ಸಹಾಯ ಕುರಿತಂತೆ ಆಯೋಗವು ತುರ್ತು ವೈದ್ಯಕೀಯ ನೆರವು ನೀಡಲು ಸಹಕಾರ ನೀಡುವ ದೃಷ್ಠಿಯಿಂದ ಸಹಾಯವಾಣಿ ಪ್ರಾರಂಭಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.
