ದಕ್ಷಿಣ ಕನ್ನಡದಲ್ಲಿ ಕೊರೋನಾ ಸೋಂಕು ಸತತ ಏರಿಳಿಕೆಯನ್ನು ದಾಖಲಿಸಿದೆ. ನಿನ್ನೆ 218 ಹೊಸ ಪ್ರಕರಣ ಪತ್ತೆಯಾಗಿದ್ದು, ಇವತ್ತು ಈ ಸಂಖ್ಯೆ 195ಕ್ಕೆ ಇಳಿದಿದೆ.
ಇದೇ ವೇಳೆ, ಜಿಲ್ಲೆಯಲ್ಲಿ ಏಳು ಮಂದಿ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. 308 ಮಂದಿ ಸೋಂಕು ಮುಕ್ತರಾಗಿ ಆಸ್ಪತ್ತೆಯಿಂದ ಬಿಡುಗಡೆ ಹೊಂದಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಕೊರೋನಾ ಹೊಸ ಸೋಂಕಿನ ಸಂಖ್ಯೆ ಎರಡಂಕಿಗೆ ಇಳಿದಿದೆ. ನಿನ್ನೆ 113 ಹೊಸ ಪ್ರಕರಣ ಪತ್ತೆಯಾಗಿತ್ತು. ಇಂದು 92 ಮಂದಿಗೆ ಸೋಂಕು ತಗುಲಿದೆ. 93 ಮಂದಿ ಸೋಂಕು ಮುಕ್ತರಾಗಿ ಆಸ್ಪತ್ತೆಯಿಂದ ಬಿಡುಗಡೆ ಹೊಂದಿದ್ದಾರೆ.
ಕೊರೋನಾದಿಂದ ಇವತ್ತು ಉಡುಪಿಯಲ್ಲಿ ಯಾವುದೇ ಸಾವು ಸಂಭವಿಸಿಲ್ಲ.
ರಾಜ್ಯದಲ್ಲಿ ಕೋವಿಡ್ ಸೋಂಕಿನ ಇಂದಿನ ಅಪ್‌ಡೇಟ್ ಹೀಗಿದೆ. ಇಂದು ರಾಜ್ಯದಲ್ಲಿ 1978 ಹೊಸ ಕೊರೋನಾ ಸೋಂಕು ಪತ್ತೆಯಾಗಿದೆ. ಇದರ ಜೊತೆಗೆ 56 ಮಂದಿಯನ್ನು ಮಹಾಮಾರಿ ಬಲಿಪಡೆದುಕೊಂಡಿದೆ.
ಈ ಮಧ್ಯೆ, ರಾಜ್ಯದಲ್ಲಿ ಪಾಸಿಟಿವಿಟಿ ದರ ಮತ್ತಷ್ಟು ಇಳಿಕೆಯಾಗಿದ್ದು, ಶೇಕಡಾ 1.24 ಆಗಿರುವುದು ಸ್ವಲ್ಪ ನೆಮ್ಮದಿ ತಂದಿದೆ.
ರಾಜ್ಯದಲ್ಲಿ ಈಗ 36,737 ಸಕ್ರಿಯ ಪ್ರಕರಣಗಳಿವೆ. ರಾಜ್ಯದಲ್ಲಿ ಒಟ್ಟು 35835 ಮಂದಿ ಸೋಂಕಿಗೆ ಬಲಿಯಾಗಿದ್ದು, ಸೋಂಕು ಪ್ರಕರಣಗಳ ಸಂಖ್ಯೆ 28.71 ಲಕ್ಷಕ್ಕೇರಿದೆ.
