Ilegal permission by PDO- ಕೋವಿಡ್ ಭೀತಿ ಮಧ್ಯೆ ಯಕ್ಷ ಸಪ್ತಾಹಕ್ಕೆ ಅನುಮತಿ: ಪಂಚಾಯತ್ ಅಧಿಕಾರಿಯ ಅಧಿಕಪ್ರಸಂಗ!




ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತಿ ಹೆಚ್ಚು ಕೋವಿಡ್ ಸೋಂಕು ಪ್ರಕರಣ ದಾಖಲಾದ ತಾಲೂಕು ಎನ್ನಲಾದ ಬೆಳ್ತಂಗಡಿಯಲ್ಲಿ ಪಂಚಾಯತ್ ಅಧಿಕಾರಿಯೊಬ್ಬರು ಯಕ್ಷ ಸಪ್ತಾಹಕ್ಕೆ ಅನುಮತಿ ನೀಡಿ ಸಾರ್ವಜನಿಕ ಆಕ್ರೋಶಕ್ಕೆ ತುತ್ತಾಗಿದ್ದಾರೆ.


ಗ್ರಾಮವನ್ನು ಸೀಲ್ ಡೌನ್ ಮಾಡಲಾಗಿದ್ದರೂ ಸೋಂಕು ಭೀತಿ ಮಧ್ಯೆ ಯಕ್ಷ ಸಪ್ತಾಹಕ್ಕೆ ಅನುಮತಿ ನೀಡಿರುವುದಕ್ಕೆ ಟೀಕೆ ವ್ಯಕ್ತವಾಗಿದ್ದು, ಈ ಆದೇಶ ಪ್ರತಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರೀ ಸದ್ದು ಮಾಡುತ್ತಿದೆ.



ಕೋವಿಡ್ 19 ವ್ಯಾಪಕವಾಗಿ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಸೀಲ್ ಡೌನ್ ಮಾಡಲಾದ ಲಾಯಿಲ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸರ್ಕಾರದ ನಿಯಮಾವಳಿಗಳನ್ನು ಮೀರಿ ಕಾನೂನು ಬಾಹಿರವಾಗಿ ಯಕ್ಷಸಾಂಗತ್ಯ ಸಪ್ತಕ ತಾಳಮದ್ದಳೆ ಕಾರ್ಯಕ್ರಮವನ್ನು ನಡೆಸಲು ಅನುಮತಿ ನೀಡಲಾಗಿರುವ ಘಟನೆ ಸಂಭವಿಸಿದೆ.




ಲಾಯಿಲ ಗ್ರಾಮದಲ್ಲಿ ಕೋವಿಡ್ ಸೋಂಕು ಹೆಚ್ಚಾಗಿರುವ ಕಾರಣ, ಆ ಗ್ರಾಮವನ್ನು ದ.ಕ ಜಿಲ್ಲಾಡಳಿತ ಕಟ್ಟುನಿಟ್ಟಾಗಿ ಕಂಟೈನ್‌ಮೆಂಟ್ ವಲಯ ಎಂದು ಗುರುತಿಸಿದೆ. ಈ ಹಿನ್ನೆಲೆಯಲ್ಲಿ ಗ್ರಾಮದಾದ್ಯಂತ ಜನರು ಮನೆಯಿಂದ ಹೊರಗೆ ಬರದಂತೆ ತಡೆಯಲಾಗಿದೆ. ಇದರಿಂದಾಗಿ ಕೂಲಿಕಾರರು ಸೇರಿದಂತೆ ದಿನನಿತ್ಯ ಜೀವನಕ್ಕಾಗಿ ದುಡಿಯುವವರು ಮನೆಯಿಂದ ಹೊರಗೆ ಬಾರದ ಸ್ಥಿತಿ ನಿರ್ಮಾಣವಾಗಿದೆ.





ಆದರೆ ಇದೆಲ್ಲದರ ನಡುವೆ ಲಾಯಿಲ ಗ್ರಾಮ ಪಂಚಾಯತ್ ಮಾತ್ರ ಯಕ್ಷಗಾನ ತಾಳಮದ್ದಳೆ ನಡೆಸಲು ಅನುಮತಿ ನೀಡಿದೆ. ಜೂನ್ 12 ರಿಂದ ಜೂನ್ 20 ರವರೆಗೆ ಯಕ್ಷಗಾನ ತಾಳಮದ್ದಳೆ ನಡೆಸಲು ಹಾಗೂ ಎರಡು ದಿನಗಳ ಯಕ್ಷ ನೃತ್ಯ ಕಾರ್ಯಕ್ರಮವನ್ನು ಛಾಯಾಗ್ರಹಣ ಮಾಡಲು ಅನುಮತಿ ನೀಡಿದೆ. ಆ ಮೂಲಕ ಸರ್ಕಾರದ ನೀತಿ ನಿಯಮಾವಳಿಗಳನ್ನು ಗಾಳಿಗೆ ತೂರಿದೆ.



ದ.ಕ ಜಿಲ್ಲೆಯಲ್ಲಿ ಅತಿ ಹೆಚ್ಚು ಕೋವಿಡ್ 19 ಸೋಂಕು ತಗುಲಿದ ತಾಲೂಕುಗಳಲ್ಲಿ ಬೆಳ್ತಂಗಡಿ ತಾಲೂಕು ಮೊದಲ ಸ್ಥಾನದಲ್ಲಿದ್ದರೂ ಕೂಡ ಸ್ಥಳೀಯ ಅಧಿಕಾರಿಗಳು ಸೇರಿದಂತೆ ಪಂಚಾಯತ್ ಆಡಳಿತ ಮಂಡಳಿಯ ನಿರ್ಲಕ್ಷ್ಯತೆ, ಬೇಜಾವ್ದಾರಿಯಿಂದ ನಿಯಮಾವಳಿಗಳನ್ನು ಮೀರಿ ಅನುಮತಿ ನೀಡಿವ ಮೂಲಕ ಒಂದು ವರ್ಗವನ್ನು ವ್ಯವಸ್ಥಿತವಾಗಿ ಮೆಚ್ಚಿಸುವ ಪಿತೂರಿ ಮಾಡಲಾಗಿದೆ ಎಂಬ ಆರೋಪಗಳು ಕೇಳಿಬಂದಿದೆ.


BREAKING NEWS
Loading latest news...
Join our WhatsApp Channel Powered By : Online Pudu