Kit by Congress- ದೇರೆಬೈಲ್ ದಕ್ಷಿಣ ವಾರ್ಡಿನಲ್ಲಿ ಕಾಂಗ್ರೆಸ್ ವತಿಯಿಂದ ದಿನಸಿ ಕಿಟ್ ವಿತರಣೆ..






ಮಂಗಳೂರು ನಗರದ ದೇರೆಬೈಲ್ ದಕ್ಷಿಣ ವಾರ್ಡಿನಲ್ಲಿರುವ ಆರ್ಥಿಕವಾಗಿ ಹಿಂದುಳಿದ ಕುಟುಂಬದವರಿಗೆ ಕಾಂಗ್ರೆಸ್ ವತಿಯಿಂದ ಆಹಾರದ ಕಿಟ್ ವಿತರಿಸಲಾಯಿತು.


ಚಿಲಿಂಬಿಯಲ್ಲಿರುವ ಆದರ್ಶ ಫ್ರೆಂಡ್ಸ್ ಅಸೋಸಿಯೇಷನ್ ಕಟ್ಟಡದಲ್ಲಿ ಮಂಗಳೂರು ದಕ್ಷಿಣ ಕ್ಷೇತ್ರದ ಮಾಜಿ ಶಾಸಕ ಜೆ. ಆರ್. ಲೋಬೊ ರವರು ವಿತರಿಸಿದರು.





ಮಾಜಿ ಮೇಯರ್ ಎಂ. ಶಶಿಧರ್ ಹೆಗ್ಡೆ, ಬ್ಲಾಕ್ ಅಧ್ಯಕ್ಷ ಪ್ರಕಾಶ್ ಸಾಲ್ಯಾನ್ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು.


ಈ ಸಂದರ್ಭದಲ್ಲಿ ವಾರ್ಡ್ ಅಧ್ಯಕ್ಷ ರಾಜೇಂದ್ರ ಚಿಲಿಂಬಿ, ಆದರ್ಶ ಫ್ರೆಂಡ್ಸ್ ಅಧ್ಯಕ್ಷ ಕಿಶೋರ್, ಟಿ. ಕೆ. ಸುಧೀರ್, ರವಿ ಕುಮಾರ್ ಚಿಲಿಂಬಿ, ಶೋಭಾ ಅಶೋಕ್, ಶಾನ್ ಡಿಸೋಜಾ, ಉದಯ್ ಕುಂದರ್, ಆಸ್ಟನ್ ಸಿಕ್ವೇರಾ, ಕೃತಿನ್ ಕುಮಾರ್, ಜೀವನ್ ಮೋರೆ, ಅಶೋಕ್, ರೋಷನ್ ಮೊದಲಾದವರು ಉಪಸ್ಥಿತರಿದ್ದರು.