-->

UT Khadar on online trade | ಅಮೆಝಾನ್-ಫ್ಲಿಪ್‌ಕಾರ್ಡ್ ಫಾರಿನ್ ಕಂಪೆನಿಗಳ ಆನ್ಲೈನ್ ವ್ಯಾಪಾರಕ್ಕೆ ಅವಕಾಶ-ಸ್ಥಳೀಯ ವ್ಯಾಪರಸ್ಥರಿಗೆ ವಂಚನೆ ಮಾಡಿದ ಸರಕಾರ-ಯುಟಿ ಖಾದರ್

UT Khadar on online trade | ಅಮೆಝಾನ್-ಫ್ಲಿಪ್‌ಕಾರ್ಡ್ ಫಾರಿನ್ ಕಂಪೆನಿಗಳ ಆನ್ಲೈನ್ ವ್ಯಾಪಾರಕ್ಕೆ ಅವಕಾಶ-ಸ್ಥಳೀಯ ವ್ಯಾಪರಸ್ಥರಿಗೆ ವಂಚನೆ ಮಾಡಿದ ಸರಕಾರ-ಯುಟಿ ಖಾದರ್





ಸ್ಥಳೀಯರಿಗೆ ಅವಕಾಶ ನಿರಾಕರಿಸಿ, ವಿದೇಶಿ ಕಂಪೆನಿಗಳ ಆನ್‌ಲೈನ್ ವ್ಯಾಪಾರಕ್ಕೆ ಅವಕಾಶ ಕಲ್ಪಿಸಿರುವ ಕ್ರಮವನ್ನು ಮಾಜಿ ಸಚಿವ ಯು.ಟಿ. ಖಾದರ್ ತೀವ್ರವಾಗಿ ಖಂಡಿಸಿದ್ದಾರೆ.


ಲಾಕ್ಡೌನ್ ಸಂದರ್ಭದಲ್ಲಿ ಎಲೆಕ್ಟ್ರಾನಿಕ್, ಫರ್ನಿಚರ್, ಬಟ್ಟೆ ಅಂಗಡಿ, ಮೊಬೈಲ್ ಅಂಗಡಿಗಳು ತೆರೆಯಲು ಅವಕಾಶ ನೀಡದ ಸರಕಾರ ಆನ್ಲೆಲೈನ್ ನಲ್ಲಿ ಅಮೇಝಾನ್ ಹಾಗೂ ಫ್ಲಿಪ್‌ಕಾರ್ಡ್ ಮಾರಾಟಕ್ಕೆ ಅವಕಾಶ ನೀಡಿದೆ. 


ಇದರಿಂದ ಸ್ಥಳೀಯ ಉದ್ಯೋಗಕ್ಕೆ ಹೊಡೆತ ಬಿದ್ದಂತೆ ಆಗಿದೆ. ವಿದೇಶಿ ಕಂಪೆನಿಗಳನ್ನು ಉದ್ಧಾರ ಮಾಡಿ ನಮ್ಮ ಸ್ಥಳೀಯ ವ್ಯಾಪಾರಸ್ಥರು ಸಾಲ ಮಾಡಿ ವ್ಯಾಪಾರ ಮಾಡುತ್ತಿದ್ದಾರೆ. ಈ ಬಗ್ಗೆ ಸರಕಾರ ನಮ್ಮವರ ಕುರಿತು ಆಲೋಚಿಸಬೇಕೆಂದು ಶಾಸಕ ಯು.ಟಿ ಖಾದರ್ ಹೇಳಿದ್ದಾರೆ.


ಮೆಡಿಕಲ್ ಎರ್ಮಜೆನ್ಸಿ ಸ್ಟೇಟ್ ಎಂದು ಘೋಷಿಸಿ ವೈದ್ಯಕೀಯ ವಿಚಾರಗಳ ಕುರಿತು ಸರಕಾರ ಜವಬ್ದಾರಿ ನಿರ್ವಹಿಸಬೇಕು. ವ್ಯಾಕ್ಸಿನ್ ಪೂರೈಸುವುದರೊಂದಿಗೆ ಸರಕಾರದ ಎಲ್ಲಾ ಮಂತ್ರಿಗಳು ದಿನಕ್ಕೊಂದು ಸ್ಟೇಟ್ಮೆಂಟ್ ನೀಡಿ ಜನರಿಗೆ ಗೊಂದಲ ಮೂಡಿಸಬಾರದು ಎಂದು ಅವರು ಈ ಸಂದರ್ಭದಲ್ಲಿ ಅಭಿಪ್ರಾಯಪಟ್ಟಿದ್ದಾರೆ.


ಜನರು ಸುರಕ್ಷಿತರಾಗಿದ್ದು ಆರೋಗ್ಯದಲ್ಲಿ ಏರುಪೇರಾದರೆ ಕೂಡಲೇ ಚಿಕಿತ್ಸೆಗೆ ಒಳಪಡಬೇಕು. ಸರಕಾರ ಜನರಿಗೆ ಧೈರ್ಯ ನೀಡಬೇಕು.ಎಲ್ಲರೂ ಲಸಿಕೆ ತೆಗೆದುಕೊಂಡರೆ ಮಾತ್ರ ಇದನ್ನು ತಡೆಗಟ್ಟಬಹುದು.ಜಿಂದಾಲ್‌ನಿಂದ ವ್ಯಾಕ್ಸಿನ್ ಪೂರೈಕೆ ಆಗುತ್ತಿದ್ದು ಬೇಡಿಕೆಯ ಕುರಿತು ಸರಕಾರ ಎಚ್ಚೆತ್ತುಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದರು.

Ads on article

🎁 Amazon Prime ಸದಸ್ಯರಾಗಿರಿ

Amazon Prime Offer
👉 ಉಚಿತ shipping, Prime Video, shopping deals—all in one!

Disclosure: ಈ ಲಿಂಕ್ Amazon Affiliate Program ನ ಭಾಗವಾಗಿದೆ. ನೀವು ಈ ಲಿಂಕ್ ಮೂಲಕ Prime ಸದಸ್ಯರಾಗಿದರೆ, ನಮಗೆ commission ಸಿಗಬಹುದು.

Advertise in articles 1

advertising articles 2

Advertise under the article