Bahrain donated 40 Metric Tonnes Liquid Medical Oxygen | ಬರಹೈನಿಂದ 40 ಮೆಟ್ರಿಕ್ ಟನ್ ಆಮ್ಲಜನಕ ಕೊಡುಗೆ: ಮಂಗಳೂರಿಗೆ ಆಗಮಿಸಿದ ಹಡಗು
40 ಮೆಟ್ರಿಕ್ ಟನ್ ದ್ರವ ಸ್ವರೂಪದ ಆಮ್ಲಜನಕ ಹೊತ್ತ ಐಎನ್‌ಎಸ್ ತಲ್ವಾರ್ ಹಡಗು ಮಂಗಳೂರು ಬಂದರಿಗೆ ಆಗಮಿಸಿದೆ. ಕೋವಿಡ್ ಎರಡನೇ ಅಲೆಯಿಂದಾಗಿ ಇಡೀ ದೇಶವೇ ತತ್ತರಿಸಿದ್ದು, ಲಾಕ್‌ಡೌನ್‌ನಿಂದ ಜನರು ತಲೆ ಕೆಟ್ಟು ಹೋಗಿದ್ದು, ಜನಜೀವನವೇ ಅಸ್ತವ್ಯವಸ್ಥವಾಗಿದೆ.
Video:
ಈ ಮಧ್ಯೆ, ಅಭೂತಪೂರ್ವ ಆಮ್ಲಜನಕದ ಕೊರತೆ ಕಂಡುಬಂದಿದ್ದು, ಇದನ್ನು ಎದುರಿಸಲು ಭಾರತಕ್ಕೆ ಬಹರೈನ್ ದೊಡ್ಡ ಮೊತ್ತದ ಆಮ್ಲಜನಕ ಕೊಡುಗೆ ದೊರೆತಿದೆ. ಬಹರೈನ್ ಸರ್ಕಾರ ಭಾರತಕ್ಕೆ 40 ಮೆಟ್ರಿಕ್ ಟನ್ ಆಮ್ಲಜನಕ ಕೊಡುಗೆ ನೀಡಿದ್ದು, ದ್ರವ ಸ್ವರೂಪದ ಆಮ್ಲಜನಕದ ಕಂಟೈನರ್‌ನ್ನು ಮಂಗಳೂರಿನಲ್ಲಿ ಸ್ವೀಕರಿಸಲಾಯಿತು.
ಸಮುದ್ರ ಸೇತು-II ಭಾಗದ ಅಡಿಯಲ್ಲಿ ಭಾರತೀಯ ನೌಕಾ ಪಡೆ ಆರಂಭಿಸಿದ ಅಭಿಯಾನದಲ್ಲಿ ಈ ಬೃಹತ್ ಪ್ರಮಾಣದ ಆಮ್ಲಜನಕದ ಕೊಡುಗೆ ದೊರೆತಿದೆ.
ಭಾರತೀಯ ರೆಡ್ ಕ್ರಾಸ್ ಸೊಸೈಟಿಗೆ ಬಹರೈನ್ ಸರ್ಕಾರ ತನ್ನ ಮಾನವೀಯ ಮೌಲ್ಯದ ಕೊಡುಗೆಯಾಗಿ ಈ ನೆರವಿನ ಹಸ್ತವನ್ನು ಚಾಚಿದೆ.