-->
SCDCC Bank record Profit | ಕೊರೋನಾ ಮಧ್ಯೆ ದಾಖಲೆ ಲಾಭ: ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್ ಸಾಧನೆ

SCDCC Bank record Profit | ಕೊರೋನಾ ಮಧ್ಯೆ ದಾಖಲೆ ಲಾಭ: ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್ ಸಾಧನೆ

ಮಂಗಳೂರು: ಕಳೆದ ಆರ್ಥಿಕ ವರ್ಷ ಅತ್ಯಂತ ಹೀನಾಯ. ಆದರೂ, ದಕ್ಷಿಣ ಕನ್ನಡದ ಜಿಲ್ಲಾ ಸಹಕಾರಿ ಬ್ಯಾಂಕ್ ದಾಖಲೆಯ ಲಾಭ ಗಳಿಕೆ ಮಾಡಿದೆ. ಈ ಮೂಲಕ ರಾಜ್ಯದಲ್ಲೇ ಸಹಕಾರಿ ಕ್ಷೇತ್ರದ ಗರಿಮೆಯನ್ನು ಎತ್ತಿ ಹಿಡಿದಿದೆ.


ಕಳೆದ ಆರ್ಥಿಕ ವರ್ಷದಲ್ಲಿ ಒಟ್ಟು 33.65 ಕೋಟಿ ರೂ. ಲಾಭ ಗಳಿಸಿರುವ ಎಸ್‌ಸಿಡಿಸಿಸಿ ಬ್ಯಾಂಕ್ ತನ್ನ 107 ವರ್ಷಗಳ ಇತಿಹಾಸದಲ್ಲಿ ಸಾರ್ವಕಾಲಿಕ ದಾಖಲೆ ಬರೆದಿದೆ.


ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್, ಬ್ಯಾಂಕ್ ತನ್ನ ಕಾರ್ಯದಕ್ಷತೆಯನ್ನು ಮೆರೆದು ಬ್ಯಾಂಕಿಂಗ್ ಸೇವೆಯಲ್ಲಿ ಅಭೂತಪೂರ್ವ ಸಾಧನೆ ಮಾಡಿರುವುದಕ್ಕೆ ಹರ್ಷ ವ್ಯಕ್ತಪಡಿಸಿದರು.


ಸುಮಾರು ಶೇ. 20ರಷ್ಟು ಪ್ರಗತಿಯಾಗಿದೆ. ಠೇವಣಿ ಸಂಗ್ರಹ ಹಾಗೂ ಸಾಲ ನೀಡಿಕೆಯಲ್ಲೂ ಮುಂದಿದ್ದೇವೆ. ಹಿಂದಿನ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಅನುತ್ಪಾದಕ ಸಾಲದಲ್ಲಿ ಇಳಿಕೆ ಕಂಡುಬಂದಿದೆ ಎಂದು ಅವರು ವಿವರಿಸಿದ್ದಾರೆ.
ಈ ಯಶಸ್ಸಿಗೆ ಕಾರಣರಾದ ಆಡಳಿತ ಮಂಡಳಿ, ಅಧಿಕಾರಿ ವರ್ಗ ಮತ್ತು ಸಿಬ್ಬಂದಿ ವೃಂದಕ್ಕೂ ಅವರು ಧನ್ಯವಾದ ಸಮರ್ಪಿಸಿದ್ದಾರೆ.

Ads on article

Advertise in articles 1

advertising articles 2

Advertise under the article

holige copy 1.jpg