-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
Dr Mohan Alva | ಶಾಲೆ ಬಂದ್ ಮಾಡುವವರು ಮೊದಲು ರಾಜಕೀಯ ಚಟುವಟಿಕೆ ಬಂದ್ ಮಾಡಲಿ: ಡಾ. ಮೋಹನ್ ಆಳ್ವ

Dr Mohan Alva | ಶಾಲೆ ಬಂದ್ ಮಾಡುವವರು ಮೊದಲು ರಾಜಕೀಯ ಚಟುವಟಿಕೆ ಬಂದ್ ಮಾಡಲಿ: ಡಾ. ಮೋಹನ್ ಆಳ್ವ





ಉಡುಪಿ: ಕೊರೊನಾ ಭೀತಿಯನ್ನು ಮುಂದಿಟ್ಟುಕೊಂಡು ಶೈಕ್ಷಣಿಕ ಸಂಸ್ಥೆಗಳನ್ನು ಬಂದ್ ಮಾಡುವ ಬದಲು ರಾಜಕಾರಣಿಗಳು ಮೊದಲು ತಮ್ಮ ರಾಜಕೀಯ ಚಟುವಟಿಕೆಗಳನ್ನು ಬಂದ್ ಮಾಡಲಿ ಎಂದು ಸರಕಾರದ ಅಸಂಬಂದ್ಧ ನಿರ್ಧಾರದ ವಿರುದ್ದ ಆಳ್ವಾಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ, ಶಿಕ್ಷಣ ತಜ್ಞ ಡಾ. ಎಂ ಮೋಹನ್ ಆಳ್ವ ಟೀಕಾಪ್ರಹಾರ ಮಾಡಿದ್ದಾರೆ.


ಉಡುಪಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು ವಿದ್ಯಾರ್ಥಿಗಳು ಹೆಚ್ಚು ರೋಗ ನಿರೋಧಕ ಶಕ್ತಿ ಹೊಂದಿದ್ದರೂ ಸರ್ಕಾರ ಕೋವಿಡ್ ಕಾರಣದಿಂದ ದೇಶದ ಭವಿಷ್ಯಗಳನ್ನು ಸೃಷ್ಟಿ ಮಾಡುತ್ತಿರುವ ಶಿಕ್ಷಣ ಸಂಸ್ಥೆಗಳನ್ನು ಮುಚ್ಚಿಸುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.


ಮತ್ತೊಂದೆಡೆ ಸೋಂಕು ಹೆಚ್ಚು ಹರಡಬಹುದಾದ ಮತ್ತು ಅಪಾಯದ ಕೇಂದ್ರವಾಗಿರುವ ಮದ್ಯ ಮಾರಾಟ ಕೇಂದ್ರಗಳನ್ನು ತೆರೆಯಲು ಅನುಮತಿ ನೀಡಿದೆ ಎಂದು ಸರಕಾರದ ಆದೇಶದ ವಿರುದ್ದ ಅವರು ಆಕ್ರೋಶ ವ್ಯಕ್ತಪಡಿಸಿದರು.


ಯಾವುದೇ ಸಭೆ, ಸಮಾರಂಭಗಳಲ್ಲಿ ಅಂತರ ಕಾಣುತ್ತಿಲ್ಲ. ಎಗ್ಗಿಲ್ಲದೆ ಮೋಜು ಮಸ್ತಿ ನಡೆಯುತ್ತಿದೆ. ರಾಜಕೀಯ ಸಮಾವೇಶಗಳಿಗೆ ಕಡಿವಾಣ ಇಲ್ಲದಂತಾಗಿದೆ. ಆದರೆ, ಸೋಂಕು ಹರಡುವ ಕಾರಣದಿಂದ ವಿದ್ಯಾ ಸಂಸ್ಥೆಗಳನ್ನು ಮಾತ್ರ ಮುಚ್ಚಲಾಗುತ್ತಿದೆ’ ಎಂದು ಆಳ್ವ ಬೇಸರ ವ್ಯಕ್ತಪಡಿಸಿದರು.


ಒಂದು ವರ್ಷ ಶೈಕ್ಷಣಿಕ ಕ್ಷೇತ್ರ ಬಂದ್ ಮಾಡಿದರೆ ಯಾವುದೇ ನಷ್ಟ ಇಲ್ಲ ಎಂದು ವಾದಿಸುವ ಕೆಲವು ರಾಜಕಾರಣಿಗಳಿದ್ದಾರೆ. ಈಗಿನ ಸ್ಥಿತಿಯಲ್ಲಿ ವಿದ್ಯಾರ್ಥಿಗಳಿಗೆ ಬೇಕಾಗಿರುವುದು ಶಿಕ್ಷಣವೇ ಹೊರತು ರಾಜಕೀಯವಲ್ಲ! ಹಾಗೆ ಬೇಕಿದ್ದರೆ ಒಂದು ವರ್ಷ ರಾಜಕೀಯ ಚಟುವಟಿಕೆಗಳನ್ನು ಬಂದ್ ಮಾಡಲಿ’ ಎಂದು ರಾಜಕಾರಣಿಗಳಿಗೆ ಸಲಹೆ ನೀಡಿದರು.

Ads on article

Advertise in articles 1

advertising articles 2

Advertise under the article

ಸುರ