-->
Sharan Pumpwell Vs Muneer Katipalla | ಲವ್ ಜಿಹಾದ್ ಪ್ರಕರಣ: ದಂ ಇದ್ದರೆ ಚರ್ಚೆಗೆ ಬನ್ನಿ, ಶರಣ್ ಪಂಪವೆಲ್ ಗೆ ಮುನೀರ್ ಕಾಟಿಪಳ್ಳ ಸವಾಲು

Sharan Pumpwell Vs Muneer Katipalla | ಲವ್ ಜಿಹಾದ್ ಪ್ರಕರಣ: ದಂ ಇದ್ದರೆ ಚರ್ಚೆಗೆ ಬನ್ನಿ, ಶರಣ್ ಪಂಪವೆಲ್ ಗೆ ಮುನೀರ್ ಕಾಟಿಪಳ್ಳ ಸವಾಲು

 ಲವ್ ಜಿಹಾದ್ ಪ್ರಕರಣ

ದಂ ಇದ್ದರೆ ಚರ್ಚೆಗೆ ಬನ್ನಿ

ಶರಣ್ ಪಂಪವೆಲ್ ಗೆ ಮುನೀರ್ ಕಾಟಿಪಳ್ಳ ಸವಾಲು   


 

ಮಂಗಳೂರು : ವಿಎಚ್ ಪಿ, ಭಜರಂಗ ದಳ ಮುಖಂಡ ಶರಣ್ ಪಂಪ್ ವೆಲ್ "ಲವ್ ಜಿಹಾದ್, ಶ್ರೀಮಂತ ಹಿಂದುಗಳನ್ನು ಗುರಿಯಾಗಿಸಿ ಲವ್ ಜಿಹಾದ್ ತಂಡಗಳು ಕಾರ್ಯಾಚರಿಸುತ್ತಿವೆ" ಎಂದು  ಆರೋಪಿಸಿದ್ದ ಪ್ರಕರಣದಲ್ಲಿ  ಕಾಮುಕ, ಶ್ರೀಮಂತ ಉದ್ಯಮಿ ಗಂಗಾಧರ ಅತ್ಯಾಚಾರ,ವಂಚನೆ ಪ್ರಕರಣದಲ್ಲಿ ಜೈಲು ಸೇರಿದ್ದಾನೆ. ಪೊಲೀಸ್ ಕಮೀಷನರ್ ಶಶಿ‌ ಕುಮಾರ್ ಸ್ವತಹ ಕಾಮುಕ, ಹೆಣ್ಣು ಬಾಕ ಗಂಗಾಧರನ ರಂಗು ರಂಗಿನ ಕತೆ ಬಿಚ್ಚಿಟ್ಟು ಬೆತ್ತಲೆ ಮಾಡಿದ್ದಾರೆ. ಆ ಮೂಲಕ ಶರಣ್ ಪಂಪ್ ವೆಲ್ ಸಹ ಸಾರ್ವಜನಿಕವಾಗಿ ಬೆತ್ತಲಾಗಿದ್ದಾರೆ.

ಶರಣ್ ಪಂಪ್ ವೆಲ್ ಲವ್ ಜಿಹಾದ್ ಕತೆಯೊಂದಿಗೆ ರೋಷಾವೇಶದಿಂದ ರಂಗಸ್ಥಳ ಪ್ರವೇಶ ಮಾಡಿದ ಮರುದಿನ‌ ಸಂತ್ರಸ್ತ ಮುಸ್ಲಿಂ ಮಹಿಳೆ ಜಥಿಜಿi ಕಚೇರಿಗೆ ಭೇಟಿ‌ ನೀಡಿ ತನಗಾದ ವಂಚನೆಯ ಕತೆಯನ್ನು ಮಾಧ್ಯಮಗಳ ಮುಂದೆ ತೆರೆದಿಟ್ಟಿದ್ಧಳು. ನಾನು ಅಂದೇ  ಶರಣ್ ಪಂಪವೆಲ್ ಗೆ "ಧಮ್ ಉಂಟಾ, ಬಹಿರಂಗ ಚರ್ಚೆಗೆ ಬನ್ನಿ" ಅಂತ ಸವಾಲೊಡ್ಡಿದ್ದೆ. ಆದರೆ ಶರಣ್ ಪಂಪ್ ವೆಲ್ ಮತ್ತವರ ಬಳಗ ಈಗ ಮೌನಕ್ಕೆ ಶರಣಾಗಿದೆ. ನಾನು ಈಗಲೂ ಸವಾಲೊಡ್ಡುತ್ತೇನೆ. ಬಹಿರಂಗ ಚರ್ಚೆಗೆ ಬನ್ನಿ. ನಿಮ್ಮ‌ಆರೋಪಗಳಿಗೆ ನೀವು ಈಗಲೂ ಬದ್ದರಾಗಿದ್ದರೆ ಪೊಲೀಸರು ನಿಮ್ಮ ಪ್ರಕಾರ ಲವ್ ಜಿಹಾದ್ ಸಂತ್ರಸ್ತನಾದ ಗಂಗಾಧರನನ್ನೇ ಅತ್ಯಾಚಾರ ಪ್ರಕರಣದಲ್ಲಿ ಜೈಲಿಗಟ್ಟಿದ್ದನ್ನು ಪ್ರಶ್ನಿಸಿ, ಜನರಿಗೆ ಉತ್ತರ ನೀಡಿ. ಇಲ್ಲಾ ಸಾರ್ವಜನಿಕವಾಗಿ‌ ಕ್ಷಮೆ ಯಾಚಿಸಿ.

ಧಮ್ ಉಂಟಾ ಪಂಪ್ ವೆಲ್ ರೆ ?

ಪೊಲೀಸರು ಈ ಪ್ರಕರಣವನ್ನು ಮೂಲಾಗ್ರವಾಗಿ ತನಿಖೆ ನಡೆಸಬೇಕು. ಆ ಹೆಣ್ಣುಮಗಳಿಗೆ ಗಂಗಾಧರ ಮುಸ್ಲಿಂ ಅಂತ ಹೇಳಿ ಮದುವೆ ಮಾಡಿಸಿದ ಮೂವರು ಮುಸ್ಲಿಂ ಬ್ರೋಕರುಗಳ, ನಿಖಾ ಮಾಡಿಕೊಟ್ಟ ನಕಲಿ‌ ಮೌಲವಿಯನ್ನೂ ಹೆಡೆಮುರಿ ಕಟ್ಟಬೇಕು. ಜೊತೆಗೆ ಈ ಪ್ರಕರಣದಲ್ಲಿ ಪರದೆಯ ಹಿಂದೆ ಗಂಗಾಧರನ ಕುಟುಂಬದ ಜೊತೆ "ರಾಜಿ ಪಂಚಾಯತಿ" ನಡೆಸಿ ಪರಿಹಾರ ಕೊಡಿಸುವ ನೆಪದಲ್ಲಿ ದುಡ್ಡು ಹೊಡೆಯಲು ಕೆಲವರು ಯತ್ನಿಸಿದ್ದಾರೆ ಎಂಬ ಗುಸು ಗುಸು ಇದೆ. ಇದೂ ತನಿಖೆಯಾಗಬೇಕು. ಈಗ ಎಲ್ಲೆಡೆ ಹೆಣದ ಮಾಂಸ ಕುಕ್ಕಿ ತಿನ್ನುವ ರಣಹದ್ದುಗಳೇ ಕಾಣಿಸುತ್ತಿದ್ದಾರೆ. ಅದು ಸ್ವಜಾತಿಯ ಹೆಣವಾದರೂ ಸರಿ ವಿಜಾತಿಯ ಹೆಣವಾದರೂ ಸರಿ. ಇಂತವರಿಗೂ ಪಾಠ ಕಲಿಸಬೇಕಿದೆ.

ಏನಾದರು ಆಗು ಮೊದಲು ಮಾನವನಾಗು.

ಮುನೀರ್ ಕಾಟಿಪಳ್ಳ

Ads on article

Advertise in articles 1

advertising articles 2

Advertise under the article

holige copy 1.jpg