-->
Shocking News to PM Modi | ನನ್ನ ಅಂಗಾಂಗ ಸೇಲ್ ಮಾಡಿ ಕರೆಂಟ್ ಬಿಲ್ ಕಟ್ಟಿ: ಸಾಯುವ ಮುನ್ನ ಮೋದಿಗೆ ಡೆತ್ ನೋಟ್ ಬರೆದ ಬಡಪಾಯಿ!

Shocking News to PM Modi | ನನ್ನ ಅಂಗಾಂಗ ಸೇಲ್ ಮಾಡಿ ಕರೆಂಟ್ ಬಿಲ್ ಕಟ್ಟಿ: ಸಾಯುವ ಮುನ್ನ ಮೋದಿಗೆ ಡೆತ್ ನೋಟ್ ಬರೆದ ಬಡಪಾಯಿ!
"ಮೋದಿಯವರೇ, ನಿಮ್ಮ ಮೇಲೆ ನಾನು ಅಪಾರವಾದ ಗೌರವ ಮತ್ತು ಅತ್ಯಂತ ಪ್ರೀತಿಯನ್ನು ಇಟ್ಟುಕೊಂಡಿದ್ದೇನೆ. ಆದರೆ, ನಿಮ್ಮ ಅಧಿಕಾರದಲ್ಲಿ ಕೆಳ ಹಂತದ ಅಧಿಕಾರಿಗಳು ಬಡವರ ಬದುಕಿನಲ್ಲಿ ಚೆಲ್ಲಾಟ ಆಡುತ್ತಿದ್ದಾರೆ. ಇದರಿಮದ ಬಡವರ ಬದುಕು ಕಷ್ಟಕರವಾಗಿದೆ. ನಾನು ವಿದ್ಯುತ್ ಬಿಲ್ ಕಟ್ಟಲಾಗದ್ದಕ್ಕೆ ಬೇಸರವಿಲ್ಲ. ಆದರೆ, ನಿಗಮದ ಅಧಿಕಾರಿಗಳು ನೀಡುತ್ತಿರುವ ಹಿಂಸೆಯಿಂದ ಬೇಸತ್ತು ಹೋಗಿದ್ದೇನೆ. ಹತಾಶನಾಗಿ ಈ ಕಠಿಣ ನಿರ್ಧಾರಕ್ಕೆ ಬಂದಿದ್ದೇನೆ. ನನ್ನ ದೇಹದ ಅಂಗಾಂಗಗಳನ್ನು ಮಾರಾಟ ಮಾಡಿ ಅವರ ಬಿಲ್ ಕಟ್ಟಲು ಸಹಾಯ ಮಾಡಿ"

ವಿದ್ಯುತ್ ಬಿಲ್ ಕಟ್ಟಲಾಗದೆ ಹತಾಶಗೊಂಡು ಯುವಕನೊಬ್ಬ ಸಾವಿಗೆ ಶರಣಾಗಿದ್ದಾನೆ. ಸಾಯುವ ಮುನ್ನ ಡೆತ್ ನೋಟು ಬರೆದಿಟ್ಟ ಯುವಕ, ತನ್ನ ಅಂಗಾಂಗಗಳನ್ನು ಮಾರಾಟ ಮಾಡಿ ಬಿಲ್ ಕಟ್ಟಿಕೊಳ್ಳಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ಧಾನೆ.ಇಂತಹ ಹೃದಯ ವಿದ್ರಾವಕ ಘಟನೆ ನಡೆದಿರುವುದು ಮಧ್ಯಪ್ರದೇಶದ ಛತರ್ ಪುರದಲ್ಲಿ. ಗ್ರಾಮದಲ್ಲಿ ಕಿರಾಣಿ ಅಂಗಡಿ ನಡೆಸುತ್ತಿದ್ದ ಮುನೇಂದ್ರ ರಜಪೂತ್ ಆತ್ಮಹತ್ಯೆ ಮಾಡಿಕೊಂಡ ಯುವಕ. ಕಳೆದ ಕೆಲವು ಸಮಯದಿಂದ ಕೊರೋನಾ ಲಾಕ್ ಡೌನ್ ಮತ್ತು ವ್ಯಾಪಾರದಲ್ಲಿ ಕಂಡುಬಂದ ವ್ಯತ್ಯಯದಿಂದ ಈತ ವಿದ್ಯುತ್ ಬಿಲ್ ಕಟ್ಟಿರಲಿಲ್ಲ.ವಿದ್ಯುತ್ ಬಿಲ್ ಮೊತ್ತ 80,000/- ರೂಪಾಯಿ ದಾಟಿದಾಗ ವಿದ್ಯುತ್ ಇಲಾಖೆಯ ಅಧಿಕಾರಿಗಳು ಈ ಮಳಿಗೆಗೆ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದ್ದರು. ಈ ಕಾರಣದಿಂದ ಮುನೇಂದ್ರ ಅವರಿಗೆ ತಮ್ಮ ಕಿರಾಣಿ ಅಂಗಡಿ ಮುಚ್ಚಬೇಕಾದ ಪರಿಸ್ಥಿತಿ ಎದುರಾಗಿತ್ತು.ಒಂದು ವೇಳೆ ಹಣಕಾಸಿನ ಮುಗ್ಗಟ್ಟು, ಇನ್ನೊಂದೆಡೆ ಅವಮಾನ... ಇದರಿಂದ ಕಠಿಣ ನಿರ್ಧಾರಕ್ಕೆ ಬಂದ ರಜಪೂತ್, ಪ್ರಧಾನಿ ಮೋದಿ ಅವರಿಗೆ ಏಳು ಪುಟಗಳ ಡೆತ್ ನೋಟ್ ಬರೆದಿಟ್ಟು ತಮ್ಮ ಮಳಿಗೆ ಪಕ್ಕದ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಮೋದಿಯವರೇ, ನಿಮ್ಮ ಮೇಲೆ ನಾನು ಅಪಾರವಾದ ಗೌರವ ಮತ್ತು ಅತ್ಯಂತ ಪ್ರೀತಿಯನ್ನು ಇಟ್ಟುಕೊಂಡಿದ್ದೇನೆ. ಆದರೆ, ನಿಮ್ಮ ಅಧಿಕಾರದಲ್ಲಿ ಕೆಳ ಹಂತದ ಅಧಿಕಾರಿಗಳು ಬಡವರ ಬದುಕಿನಲ್ಲಿ ಚೆಲ್ಲಾಟ ಆಡುತ್ತಿದ್ದಾರೆ. ಇದರಿಮದ ಬಡವರ ಬದುಕು ಕಷ್ಟಕರವಾಗಿದೆ. ನಾನು ವಿದ್ಯುತ್ ಬಿಲ್ ಕಟ್ಟಲಾಗದ್ದಕ್ಕೆ ಬೇಸರವಿಲ್ಲ. ಆದರೆ, ನಿಗಮದ ಅಧಿಕಾರಿಗಳು ನೀಡುತ್ತಿರುವ ಹಿಂಸೆಯಿಂದ ಬೇಸತ್ತು ಹೋಗಿದ್ದೇನೆ. ಹತಾಶನಾಗಿ ಈ ಕಠಿಣ ನಿರ್ಧಾರಕ್ಕೆ ಬಂದಿದ್ದೇನೆ. ನನ್ನ ದೇಹದ ಅಂಗಾಂಗಗಳನ್ನು ಮಾರಾಟ ಮಾಡಿ ಅವರ ಬಿಲ್ ಕಟ್ಟಲು ಸಹಾಯ ಮಾಡಿ ಎಂದು ತನ್ನ ಡೆತ್ ನೋಟ್‌ನಲ್ಲಿ ಬರೆದುಕೊಂಡಿದ್ದಾರೆ.

Ads on article

Advertise in articles 1

advertising articles 2

Advertise under the article

WhatsApp Image 2021-10-17 at 10.29.15 PM (1).jpeg