ಸೌತ್ ಕೆನರಾ ಫೋಟೋಗ್ರಾಫರ್ ಸಂಘಟನೆಯ ಮಂಗಳೂರು ಜೆರೋಸಾ ಹಾಲ್‌ನಲ್ಲಿ ಮೆಹಂದಿ ಕಾರ್ಯಕ್ರಮ ನಡೆದಿತ್ತು. ಅದನ್ನು ಮುಗಿಸಿ ಹೊರಡುವಾಗ ಛಾಯಾಗ್ರಾಹಕರಿಗೆ ಬ್ರೇಸ್‌ಲೆಟ್‌ವೊಂದು ಕಾಣಸಿಕ್ಕಿತು.
ಅದನ್ನು ಆಯೋಜಕರಿಗೆ ತಿಳಿಸಿ ಅದರ ವಾರೀಸುದಾರರಿಗೆ ತಲುಪಿಸುವ ಮೂಲಕ ಸೈಯದ್ ಅಬಿದ್ ಹಾಗೂ ಮಧು ಮಂಗಳೂರು ಪ್ರಾಮಾಣಿಕತೆ ಮೆರೆದಿದ್ದಾರೆ. ಬ್ರೇಸ್‌ಲೆಟ್ ಮೌಲ್ಯ ಅಂದಾಜು ರೂ. 55,000 ಎಂದು ಹೇಳಲಾಗಿದೆ.
