ಹಿಂದೂ ಯುವತಿಯರನ್ನೇ ಟಾರ್ಗೆಟ್ ಮಾಡಿ ಮುಸ್ಲಿಂ ಜಿಮ್ ಟ್ರೈನರ್‌ನಿಂದ ಅನುಚಿತ ವರ್ತನೆ- ಬಜರಂದಳ ಪ್ರತಿಭಟನೆ


ಧಾರವಾಡ: ಹಿಂದೂ ಯುವತಿಯರನ್ನೇ ಟಾರ್ಗೆಟ್ ಮಾಡಿ ಅವರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ ಎಂಬ ಆರೋಪ ಧಾರವಾಡದ ಮುಸ್ಲಿಂ ಜಿಮ್ ಟ್ರೈನರ್ ವಿರುದ್ಧ ಕೇಳಿಬಂದಿದೆ.

ಧಾರವಾಡದ ನಗರದ ಮರಾಠಾ ಕಾಲನಿಯಲ್ಲಿರುವ ಫಿಟ್ನೆಸ್ ಫಸ್ಟ್ ಜಿಮ್​ ಟ್ರೈನರ್ ಸಾಬಿರ್, ಟ್ರೈನಿಂಗ್ ವೇಳೆ ಅನವಶ್ಯಕವಾಗಿ ಹಿಂದೂ ಯುವತಿಯರ ಮೈಮುಟ್ಟಿ ಅನುಚಿತ ವರ್ತನೆ ಮಾಡುತ್ತಾನೆಂದು ಆರೋಪಿಸಲಾಗಿದೆ. ವರ್ಕೌಟ್ ಮಾಡಲು ಬರುವ ಹಿಂದೂ ಯುವತಿಯರಿಗೆ ಟ್ರೈನಿಂಗ್ ವೇಳೆ ಬೇಕಂತಲೇ ಮೈಮುಟ್ಟಿ ಅನುಚಿತವಾಗಿ ವರ್ತಿಸುವ ಈತ ಯುವತಿಯರ ಬಾತ್ ರೂಮ್​ಗೆ ಹೋಗಿ ಬರುತ್ತಿದ್ದ ಎಂದು ಆರೋಪ ಕೇಳಿ ಬಂದಿದೆ.

ಈ ಸಂಬಂಧ ಬಜರಂಗದಳ ಕಾರ್ಯಕರ್ತರು ಜಿಮ್​ಗೆ ಬೀಗ ಹಾಕಿ ಜಿಮ್ ಟ್ರೈನರ್ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಹಿಂದೂ ಯುವತಿಯರನ್ನೇ ಟಾರ್ಗೆಟ್ ಮಾಡಿ ಅವರೊಂದಿಗೆ ಅಸಭ್ಯವಾಗಿ ವರ್ತನೆ ಮಾಡುವ ಆರೋಪ ಸಂಬಂಧ ಈ ಹಿಂದೆಯೇ ಟ್ರೈನರ್ ಸಾಬಿರ್​ಗೆ ಬಜರಂಗದಳ ಕಾರ್ಯಕರ್ತರು ಎಚ್ಚರಿಕೆ ನೀಡಿದ್ದರು. ಆದರೂ ವರ್ತನೆ ಸರಿಪಡಿಸಿಕೊಳ್ಳದ ಸಾಬಿರ್ ವಿರುದ್ಧ ಮತ್ತೆ ಆರೋಪಗಳು ಕೇಳಿಬಂದಿದೆ.

ಇದೀಗ ಬಜರಂಗದಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಹಿಂದೂ ಯುವತಿಯರನ್ನೇ ಟಾರ್ಗೆಟ್ ಮಾಡಿ ಅನುಚಿತ ವರ್ತನೆ ಮಾಡುವ ಜಿಮ್ ಟ್ರೈನರ್ ಸಾಬಿರ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಉಪ ನಗರ ಠಾಣೆ ಪೊಲೀಸರು, ದೌಡಾಯಿಸಿ ಪ್ರತಿಭಟನೆಕಾರರ ಮನವೊಲಿಸಲು ಯತ್ನಿಸಿದ್ದಾರೆ. ಆದರೂ ಪಟ್ಟು ಬಿಡಿದ ಪ್ರತಿಭಟನೆಕಾರರು, ಸ್ಥಳಕ್ಕೆ ಸಾಬಿರ್ ಕರೆಸುವಂತೆ ಒತ್ತಾಯಿಸಿದ್ದಾರೆ.

BREAKING NEWS
Loading latest news...
Join our WhatsApp Channel Powered By : Online Pudu