ಹಾರ್ದಿಕ್ ಪಾಂಡ್ಯ ಮಾಜಿ ಪತ್ನಿಯೊಂದಿಗೆ ಸ್ಮೃತಿ ಮಂಧನಾ ಭಾವೀ ಪತಿ ಸುತ್ತಾಟ, ಎಂಜಾಯ್ ವೀಡಿಯೋ ವೈರಲ್



ಮುಂಬಯಿ: ಭಾರತದ ಕ್ರಿಕೆಟ್ ಆಟಗಾರ್ತಿ ಸ್ಮೃತಿ ಮಂಧನಾ ಮತ್ತು ಸಂಗೀತ ನಿರ್ದೇಶಕ ಪಲಾಶ್ ಮಚಾಲ್ ಅವರ ವಿವಾಹ ಮುಂದೂಡಿಕೆ ಆಗಿರುವ ವಿಚಾರ ದೇಶದೆಲ್ಲೆಡೆ ಚರ್ಚೆಗೆ ಕಾರಣವಾಗಿದೆ.

ಇದೇ ಕಾರಣಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಸ್ಮೃತಿ ಮಂಧನಾ - ಪಲಾಶ್ ಮಚಾಲ್ ಟ್ರೆಂಡ್‌ನಲ್ಲಿದ್ದಾರೆ. ಇವರ ವಿವಾಹ ಮುಂದೂಡಿಕೆಗೆ ನಾನಾ ಕಾರಣಗಳಿವೆ ಎಂಬ ಮಾತುಗಳು ಹರಿದಾಡುತ್ತಿದೆ. ವಿವಾಹ ದಿನದಂದೇ ಸ್ಮೃತಿ ತಂದೆಯ ಅನಾರೋಗ್ಯದ ಕಾರಣದಿಂದ ಮದುವೆ ಮುಂದೂಡಿಕೆಯಾಗಿದೆ. ಆದರೆ ಈ ಬಗ್ಗೆ ನಾನಾ ರೀತಿಯ ಚರ್ಚೆಗಳು ಎದ್ದಿವೆ.

ಜೊತೆಗೆ ಪಲಾಶ್‌ ಬೇರೆ ಹುಡುಗಿಯರೊಂದಿಗೆ ಆತ್ಮೀಯವಾಗಿದ್ದರು ಎನ್ನುವ ಮಾತುಗಳು ಕೇಳಿ ಬಂದಿದೆ. ಪಲಾಶ್ ಅವರ ಮಾಜಿ ಗೆಳತಿ ಬಿರ್ವಾ ಶಾ ಜೊತೆಗಿನ ಪ್ರಣಯದ ಫೋಟೋಗಳು ಹಾಗೂ ಮೇರಿ ಡಿ'ಕೋಸ್ಟಾ ಎಂಬ ಮಹಿಳೆಯೊಂದಿಗೆ ಮಾಡಿರುವ ಚಾಟ್‌ಗಳ ಸ್ಕ್ರೀನ್ ಶಾಟ್ ಭಾರೀ ವೈರಲ್ ಆಗಿದೆ.

ಇದರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿರುವಾಗಲೇ ಪಲಾಶ್ ಟೀಮ್ ಇಂಡಿಯಾದ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಅವರ ಮಾಜಿ ಪತ್ನಿ ನತಾಶಾ ಸ್ಟಾಂಕೋವಿಕ್‌ನೊಂದಿಗೆ ಸುತ್ತಾಡಿರುವ ವಿಡಿಯೋ ವೈರಲ್ ಆಗಿದೆ.

ರೆಡ್ಡಿಟ್‌ನಲ್ಲಿ 'priyansh_gif' ಎನ್ನುವವರು ನತಾಶಾ - ಪಲಾಶ್ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ವಿಡಿಯೋದಲ್ಲಿ ನತಾಶಾ - ಪಲಾಶ್ ಬಾಲಿವುಡ್ ಗಾಯಕ ಬಾದ್‌ಷಾ ಅವರ ಫೇಮಸ್ ಸಾಂಗ್ "ಡಿಜೆ ವಾಲೆ ಬಾಬು" ಸಾಂಗ್ ಪ್ಲೇ ಆಗುತ್ತಿದ್ದು, ಇಬ್ಬರೂ ಆ ಹಾಡನ್ನು ಎಂಜಾಯ್ ಮಾಡುತ್ತಿದ್ದಾರೆ.

ಈ ಹಾಡು ನತಾಶಾ ಅವರಿಗೆ ಅಪಾರ ಜನಪ್ರಿಯತೆ ತಂದುಕೊಟ್ಟಿತ್ತು. ಪಲಾಶ್ ಜತೆಗಿನ ಈ ವಿಡಿಯೋ ಹಳೆಯದಾಗಿದ್ದು, ಮದುವೆ ಮುಂದೂಡಿಕೆ, ಪರಸ್ತ್ರೀ ವ್ಯಾಮೋಹದ ವಿಚಾರದ ಚರ್ಚೆ ಆಗುತ್ತಿದ್ದಂತೆ ವಿಡಿಯೋ ವೈರಲ್ ಆಗಿದೆ.

ಸದ್ಯ ಪಲಾಶ್‌ ಆಸ್ಪತ್ರೆಯಿಂದ ಡಿಸ್ಟಾರ್ಜ್ ಆಗಿದ್ದಾರೆ ಎನ್ನಲಾಗಿದೆ. ಹರಿದಾಡುತ್ತಿರುವ ಆರೋಪಗಳಿಗೆ ಮಂಧಾನ - ಪಲಾಶ್ ಯಾರೂ ಕೂಡ ಇದುವರೆಗೆ ಪ್ರತಿಕ್ರಿಯೆ ನೀಡಿಲ್ಲ.

ಇತ್ತ ಮಂಧಾನ ಅವರು ಮದುವೆಯ ಎಲ್ಲಾ ಫೋಟೋಸ್‌ಗಳನ್ನು ಡಿಲೀಟ್ ಮಾಡಿದ್ದು, ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.