ಬಿಗ್ ಬಾಸ್ ಕನ್ನಡ ಸೀಸನ್ 12 ಸೀಸನ್ ಟ್ವಿಸ್ಟ್ ಮೇಲೆ ಟ್ವಿಸ್ಟ್ ಇದೆ. ಎಲ್ಲಾ ಟ್ವಿಸ್ಟ್‌ಗಳು ಸ್ಪರ್ಧಿಗಳಿಗೆ ಮಾತ್ರವಲ್ಲ ಪ್ರೇಕ್ಷಕನಿಗೂ ಶಾಕ್ ಎನಿಸುವಂತಿದೆದೆ. ರಕ್ಷಿತಾ ಶೆಟ್ಟಿ ಬಿಗ್‌ಬಾಸ್ ಮನೆಗೆ ಪ್ರವೇಶಿಸಿದ ದಿನವೇ ಹೊರ ಹಾಕಲಾಗಿತ್ತು. ವಾರದ ಬಳಿಕ ಮತ್ತೆ ಅವರನ್ನು ಒಳಕ್ಕೆ ಕರೆಸಿಕೊಳ್ಳಲಾಗಿತ್ತು. ಆಗ ರಕ್ಷಿತಾ ಶೆಟ್ಟಿ ಹೇಳಿದ ಆ ಒಂದು ಮಾತೊಂದನ್ನು ಯಾರೆಂದರೆ ಯಾರೊಬ್ಬರೂ ನಂಬಲೇ ಇಲ್ಲ.
ರಕ್ಷಿತಾ ಶೆಟ್ಟಿ ಬಿಗ್‌ಬಾಸ್ ಮನೆಯಿಂದ ಹೊರಗೆ ಹೋಗಿ ಒಂದು ವಾರ ಆಗಿತ್ತು. ಈ ಅವಧಿಯಲ್ಲಿ ಅವರು ಎಲ್ಲಿದ್ದರು? ಏನು ಮಾಡುತ್ತಿದ್ದರು ಎನ್ನುವ ಕುತೂಹಲ ಮೂಡಿದೆ. ಈ ಕುತೂಹಲಕ್ಕೆ ಅವರೇ ತೆರೆ ಎಳೆದಿದ್ದಾರೆ. ‘ಇಷ್ಟು ದಿನ ನನ್ನನ್ನು ಸೀಕ್ರೆಟ್ ರೂಂನಲ್ಲಿ ಇಡಲಾಗಿತ್ತು. ನನಗೆ ಒಂದು ವಾರ ಯಾರನ್ನೂ ತೋರಿಸಿಲ್ಲ’ ಎಂದು ರಕ್ಷಿತಾ ಶೆಟ್ಟಿ ಹೇಳಿದರು.
ಆದರೆ ರಕ್ಷಿತಾ ಶೆಟ್ಟಿ ಅದನ್ನು ಮನೆಯವರಿಗೆ ಹೇಳಿದರೆ ಯಾರಿಗೂ ನಂಬಿಕೆ ಬರಲೇ ಇಲ್ಲ. ಸಾಮಾನ್ಯವಾಗಿ ಸೀಕ್ರೆಟ್ ರೂಂನಲ್ಲಿರುವವರಿಗೆ ಯಾರು ಯಾವ ರೀತಿ ಆಡುತ್ತಿದ್ದಾರೆ ಎಂಬ ವಿಡಿಯೋಗಳನ್ನು ತೋರಿಸಗುತ್ತದೆ. ಆದರೆ, ರಕ್ಷಿತಾಗೆ ಆ ರೀತಿ ಮಾಡಿಲ್ಲವಂತೆ. ಇದನ್ನು ಸ್ವತಃ ಅವರೇ ಹೇಳಿಕೊಂಡರು. ಅವರ ಮಾತಿನ ಮೇಲೆ ಯಾರಿಗೂ ನಂಬಿಕೆ ಬರಲಿಲ್ಲ.
ರಕ್ಷಿತಾ ನೀವು ಸುಳ್ಳು ಹೇಳ್ತಾ ಇದೀರಾ. ಅಲ್ಲಿ ನಮ್ಮ ಎಪಿಸೋಡ್ಗಳನ್ನು ನಿಮಗೆ ತೋರಿಸಲಾಗಿದೆ ಅಲ್ವ ಎಂದು ಕಾವ್ಯಾ ಶೈವ ಕೇಳಿದರು. ಆದರೆ, ಇಲ್ಲ ಎನ್ನುವ ಉತ್ತರ ರಕ್ಷಿತಾ ಕಡೆಯಿಂದ ಬಂತು. ‘ಮದರ್ ಪ್ರಾಮಿಸ್ ನನಗೆ ನಿಮ್ಮ ವಿಶ್ಯುವಲ್ಸ್ ತೋರಿಸಿಲ್ಲ’ ಎಂದು ರಕ್ಷಿತಾ ಸಮಜಾಯಿಶಿ ಕೊಡಲು ಬಂದರು. ಆ ಬಳಿಕ ಕಾವ್ಯಾ ಶೈವ ಅವರು, ‘ನಿಮ್ಮ ದಿನಚರಿಗಳ ವಿಡಿಯೋನ ನನಗೆ ತೋರಿಸುತ್ತಾ ಇದ್ದರು’ ಎಂದು ಹೇಳಿದರು. ಇದನ್ನು ರಕ್ಷಿತಾ ನಂಬಿಲ್ಲ.
ಸದ್ಯ ರಕ್ಷಿತಾ ಶೆಟ್ಟಿ ಅವರು ಹೇಳಿದ ಮಾತಿನ ಮೇಲೆ ಯಾರೊಬ್ಬರಿಗೂ ನಂಬಿಕೆ ಬರಲೇ ಇಲ್ಲ. ರಕ್ಷಿತಾ ಶೆಟ್ಟಿ ಅವರು ಮುಂದಿನ ದಿನಗಳಲ್ಲಿ ದೊಡ್ಡ ದೊಡ್ಡ ಸವಾಲುಗಳನ್ನು ಎದುರಿಸಬೇಕಾದ ಪರಿಸ್ಥಿತಿ ಬಂದರೂ ಅಚ್ಚರಿ ಏನಿಲ್ಲ.