
ಬಂಟ್ಸ್ ಹಾಸ್ಟೇಲ್ : ಶ್ರೀ ಸಿದ್ದಿವಿನಾಯಕ ದೇವರ ವಿಗ್ರಹ ಓಂಕಾರ ನಗರಕ್ಕೆ
ಮಂಗಳೂರು: ಬಂಟರ ಯಾನೆ ನಾಡವರ ಮಾತೃ ಸಂಘ, ಶ್ರೀ ಸಿದ್ದಿವಿನಾಯಕ ಪ್ರತಿಷ್ಠಾನ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಓಂಕಾರ ನಗರ ಬಂಟ್ಸ್ ಹಾಸ್ಟೇಲ್ ಮಂಗಳೂರು ಇಲ್ಲಿ ನಡೆಯುತ್ತಿರುವ 19 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವಕ್ಕೆ ಶರವು ದೇವಸ್ಥಾನದ ಬಳಿ ಇರುವ ಶ್ರೀ ರಾಧಾಕೃಷ್ಣ ದೇವಸ್ಥಾನದಲ್ಲಿ ಶ್ರೀ ರಾಮದಾಸ ಆಚಾರ್ ರವರ ಶಿಷ್ಯರಿಂದ ರಚಿಸಲ್ಪಟ್ಟ ಶ್ರೀ ಸಿದ್ದಿವಿನಾಯಕ ದೇವರ ವಿಗ್ರಹವನ್ನು ಬಂಟ್ಸ್ ಹಾಸ್ಟೇಲ್ ನ ಓಂಕಾರ ನಗರಕ್ಕೆ ಬರಮಾಡಿಕೊಳ್ಳಲಾಯಿತು.
ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ , ಶ್ರೀ ಸಿದ್ದಿವಿನಾಯಕ ಪ್ರತಿಷ್ಠಾನದ ಮೆನೇಜಿಂಗ್ ಟ್ರಸ್ಟಿ ಕೊಡಿಯಾಲ್ ಗುತ್ತು ಅಜಿತ್ ಕುಮಾರ್ ರೈ ಮಾಲಾಡಿ, ಮಾತೃ ಸಂಘದ ಪದಾಧಿಕಾರಿಗಳಾದ ಕಾವು ಹೇಮನಾಥ ಶೆಟ್ಟಿ, ಕೆ ಎಮ್ ಶೆಟ್ಟಿ, ಸಿ ಎ ರಾಮ್ ಮೋಹನ್ ರೈ, ಟ್ರಸ್ಟಿಗಳಾದ ಮಂಜುನಾಥ ಭಂಡಾರಿ ಶೆಡ್ಡೆ, ರವಿರಾಜ ಶೆಟ್ಟಿ ನಿಟ್ಟೆಗುತ್ತು, ಕೃಷ್ಣಪ್ರಸಾದ್ ರೈ ಬೆಳ್ಳಿಪಾಡಿ, ಡಾ ಆಶಾಜ್ಯೋತಿ ರೈ ಬಂಬ್ರಾಣ ಹಾಗೂ ಸಮಿತಿಯ ಸಂಚಾಲಕರು, ಗಣೇಶೋತ್ಸವದ ಸಮನ್ವಯಕಾರರು ಉಪಸ್ಥಿತರಿದ್ದರು.