ಮಂಗಳೂರು: ತಲಪಾಡಿಯಲ್ಲಿ ಭೀಕರ ಅಪಘಾತ - ಐವರು ಮೃತ್ಯು, ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆ



ಮಂಗಳೂರು: ನಗರದ ಹೊರವಲಯದ ತಲಪಾಡಿಯ ಕೆ.ಸಿರೋಡ್ ಟೋಲ್‌ಗೇಟ್ ಬಳಿ  ನಡೆದ ಭೀಕರ ಅಪಘಾತದಲ್ಲಿ ಐವರು ಮಂದಿ ಮೃತಪಟ್ಟ ಘಟನೆ ನಡೆದಿದೆ.

ಘಟನೆಯಲ್ಲಿ ನಾಲ್ವರು ಮಹಿಳೆಯರು, ಒಂದು ಮಗು  ಮೃತಪಟ್ಟಿದ್ದಾರೆ‌ ಎಂದು ಹೇಳಲಾಗಿದೆ. ಆಟೋ ರಿಕ್ಷಾ ಡ್ರೈವರ್ ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.




ಕೆಎಸ್ಆರ್‌ಟಿಸಿ ಬಸ್ ಹಿಮ್ಮುಖವಾಗಿ ಸಂಚರಿಸಿ ಆಟೋರಿಕ್ಷಾಕ್ಕೆ ಢಿಕ್ಕಿಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಪರಿಣಾಮ ರಿಕ್ಷಾದಲ್ಲಿದ್ದ ಮಹಿಳೆಯರು, ಓರ್ವ ಮಗು, ಬಸ್‌ಗಾಗಿ ಕಾಯುತ್ತಿದ್ದ ಮಹಿಳೆಯರು ಗಾಯಗೊಂಡಿದ್ದಾರೆ. ಆಟೋ ಡ್ರೈವರ್ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ ಎನ್ನಲಾಗಿದೆ. 

ಈ ಬಗ್ಗೆ ಮಂಜೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.