-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಕಾಮದಾಸೆ ತೀರಿಸುವಂತೆ ಇನ್‌ಸ್ಟಾಗ್ರಾಂ ಸ್ನೇಹಿತನಿಗೆ ದುಂಬಾಲು ಬಿದ್ದ ಎರಡು ಮಕ್ಕಳ ತಾಯಿ ಆತನಿಂದಲೇ ಕೊಲೆಯಾದಳು

ಕಾಮದಾಸೆ ತೀರಿಸುವಂತೆ ಇನ್‌ಸ್ಟಾಗ್ರಾಂ ಸ್ನೇಹಿತನಿಗೆ ದುಂಬಾಲು ಬಿದ್ದ ಎರಡು ಮಕ್ಕಳ ತಾಯಿ ಆತನಿಂದಲೇ ಕೊಲೆಯಾದಳು


ಮಂಡ್ಯ: ಸಾಮಾಜಿಕ ಜಾಲತಾಣದಲ್ಲಿ ಪರಿಚಿತಳಾದ ವಿವಾಹಿತೆಯನ್ನು ಯುವಕನೊಬ್ಬ ಹತ್ಯೆಗೈದು ಬಳಿಕ ಮೃತದೇಹವನ್ನು ತನ್ನ ಜಮೀನಿನಲ್ಲಿ ಬಚ್ಚಿಟ್ಟಿದ್ದ ಘಟನೆ ಮಂಡ್ಯದ ಕೆ.ಆರ್. ಪೇಟೆ ತಾಲ್ಲೂಕಿನ ಕರೋಟಿ ಗ್ರಾಮದಲ್ಲಿ ನಡೆದಿದೆ.

ಹಾಸನದ ಹೊಸಕೊಪ್ಪಲಿನ ನಿವಾಸಿ ಪ್ರೀತಿ ಎಂಬಾಕೆಗೆ ಸಾಮಾಜಿಕ ಜಾಲತಾಣದಲ್ಲಿ ಮಂಡ್ಯ ಜಿಲ್ಲೆಯ ಕೆ.ಆರ್‌.ಪೇಟೆ ತಾಲೂಕಿನ ಕರೋಠಿ ಗ್ರಾಮದ ಪುನೀತ್ ಎಂಬಾತನ ಪರಿಚಯವಾಗಿತ್ತು. ಪರಿಚಯವಾದ ಕೇವಲ ಹತ್ತೇ ದಿನಕ್ಕೆ ಇಬ್ಬರು ಲಾಂಗ್ ಡ್ರೈವ್ ಗೆ ಹೋಗಿದ್ದಾರೆ. ಆ ವೇಳೆ ಪ್ರೀತಿ, ಪದೇಪದೇ ಲೈಂಗಿಕ ಕ್ರಿಯೆ ನಡೆಸಲು ಪೀಡಿಸಿದ್ದಾಳೆ. ಇದಕ್ಕೆ ನಿರಾಕರಿಸಿದ್ದಕ್ಕೆ ಪುನೀತ್​ಗೆ ಕೊಂಕು ಮಾತಿನಿಂದ ಹಿಯಾಳಿಸಿದ್ದಾಳೆ. ಇದರಿಂದ ಕೋಪಗೊಂಡ ಪುನೀತ್, ಪ್ರೀತಿಯನ್ನು ಕೊಂದು ತನ್ನ ಜಮೀನಿನಲ್ಲಿ ಶವ ಬಚ್ಚಿಟ್ಟಿದ್ದ ಎನ್ನುವುದು ತನಿಖೆಯಲ್ಲಿ ಬಟಾಬಯಲಾಗಿದೆ.

ಪ್ರೀತಿಗೆ ಮದಿವೆಯಾಗಿ ಮುದ್ದಾದ ಇಬ್ಬರು ಮಕ್ಕಳು ಸಹ ಇದ್ದಾರೆ. ಪತಿ ಆಟೋ‌ ಡ್ರೈವರ್, ಈಕೆ ಗಾರ್ಮೆಂಟ್ಸ್‌ಗೆ ಕೆಲಸಕ್ಕೆ ಹೋಗುತ್ತಿದ್ದಳು. ಈಕೆಗೆ ಸದಾ ಫೇಸ್‌ಬುಕ್‌ನಲ್ಲಿ ಚಾಟ್ ಮಾಡುವ ಹವ್ಯಾಸ ಸಹ ಇತ್ತು. ಪ್ರೀತಿ ಕಳೆದ ಗುರುವಾರ ರಾತ್ರಿ ಮಂಡ್ಯ ಜಿಲ್ಲೆಯ ಕೆಆರ್‌ಪೇಟೆ ತಾಲೂಕಿನ ಕರೋಠಿ ಗ್ರಾಮ ಪುನೀತ್ ಎಂಬ ಯುವಕನಿಗೆ ಫೇಸ್‌ಬುಕ್‌‌ನಲ್ಲಿ ರಿಕ್ವೆಸ್ಟ್ ಕಳಿಸಿದ್ದಳು. ತನ್ನ ಅಕೌಂಟ್‌ಗೆ ಫ್ರೆಂಡ್ ರಿಕ್ವೆಸ್ಟ್ ಬಂದಿದ್ದೇ ತಡ ಅದನ್ನು ಪುನೀತ್ ಅಸೆಪ್ಟ್ ಮಾಡಿದ್ದಾನೆ. ಬಳಿಕ ಪ್ರೀತಿ ಪುನೀತ್‌ನಿಗೆ ಹಾಯ್ ಎಂದು ಮೆಸೇಜ್ ಮಾಡಿದ್ದಾಳೆ. ಇದಕ್ಕೆ ಪ್ರತಿಯಾಗಿ ಪುನೀತ್ ರಿಪ್ಲೈ ಮಾಡಿದ್ದಾನೆ. ಬಳಿಕ ಇಬ್ಬರು ಪರಸ್ಪರ ರಾತ್ರಿ ಇಡೀ ಮೆಸೆಜ್ ಮಾಡಿದ್ದು, ಶುಕ್ರವಾರ ಬೆಳಗ್ಗೆ ಪ್ರೀತಿ ಪುನೀತ್‌ನೊಂದಿಗೆ ಪೋನ್ ನಂಬರ್ ಎಕ್ಸ್ ಚೆಂಜ್ ಮಾಡಿದ್ದಾಳೆ. ಬಳಿಕ ಒಂದೇ ದಿನದಲ್ಲಿ ಮಾತುಕತೆ ನಡೆದಿದೆ.

ಇದಾಗಿ ಆಕೆ‌ ಮೀಟ್ ಮಾಡುವಂತೆ ಪುನೀತ್​ಗೆ ಹೇಳಿದ್ದಾಳೆ. ಆಕೆ ಕರೆದದ್ದೇ ತಡ ಪುನೀತ್ ಓಕೆ ಎಂದು ರವಿವಾರ ಬೆಳಗ್ಗೆ ತನ್ನ ಸ್ನೇಹಿತನ ಕಾರು ತೆಗೆದುಕೊಂಡು ಹಾಸನಕ್ಕೆ ಹೋಗಿದ್ದಾನೆ. ಅತ್ತ ಪ್ರೀತಿ ತನ್ನ ಮನೆಯವರಿಗೆ ಸ್ನೇಹಿತೆಯ ಮಗಳ ಶಾಸ್ತ್ರವಿದೆ ಅಲ್ಲಿಗೆ ಹೋಗ್ತೀನಿ ಎಂದು ಮನೆಯಿಂದ ಬಂದಿದ್ದಾಳೆ. ಬಳಿಕ ಪುನೀತ್ ಕಾರು ಹತ್ತಿ ತನ್ನನ್ನು ಎಲ್ಲಿಗಾದರೂ ಲಾಂಗ್‌ಡ್ರೈವ್ ಕರೆದುಕೊಂಡು ಹೋಗು ಎಂದು ದುಂಬಾಲು ಬಿದ್ದಿದ್ದಾಳೆ. ಅವಳು ಹೇಳಿದನ್ನು ಕೇಳಿ ಪುನೀತ್, ಕೆಆರ್‌ಎಸ್ ಕಡೆಗೆ ಕಾರನ್ನು ಡ್ರೈವ್ ಮಾಡಿದ್ದಾನೆ. ಬಳಿಕ ಅಲ್ಲಿ ಒಂದು ಲಾಡ್ಜ್‌ ಬುಕ್ ಮಾಡಿಕೊಂಡು ಇಬ್ಬರೂ ಲೈಂಗಿಕ ಸಂಪರ್ಕ ಬೆಳೆಸಿದ್ದಾರೆ. ಅದಾದ ಮೇಲೆ ಮತ್ತೆ ತನ್ನ ಕಾಮದ ಬಯಕೆಯನ್ನು ತೀರಿಸು ಆಕೆ‌ ಮತ್ತೆ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಾಳೆ. ಆದರೆ ಪುನೀತ್ ಒಪ್ಪದೆ ಲಾಡ್ಜ್​ ನಿಂದ ಇಬ್ಬರು ಬಂದಿದ್ದಾರೆ.

ಇಷ್ಟಕ್ಕೆ ಬಿಡದ ಆಕೆ ವಾಪಸ್ಸು ಹೋಗದೆ ಯಾರು ಇಲ್ಲದ ಸ್ಥಳಕ್ಕೆ ಕರೆದೋಗುವಂತೆ ಒತ್ತಾಯಿಸಿದ್ದಾಳೆ. ಈಗ ಪುನೀತ್ ಕೆ.ಆರ್.ಪೇಟೆಯ ಕತ್ತರಘಟ್ಟ ಅರಣ್ಯ ಪ್ರದೇಶಕ್ಕೆ ಕರೆದೋಗಿದ್ದಾನೆ. ಅಲ್ಲಿ ಮತ್ತೆ ಪ್ರೀತಿ ಲೈಂಗಿಕ ಕ್ರಿಯೆ ಒತ್ತಾಯಿಸಿದ್ದಾಳೆ. ಆದರೆ ಪುನೀತ್ ಒಪ್ಪಿಲ್ಲ. ಇದರಿಂದ ಪ್ರೀತಿ ಬೇಸರಗೊಂಡು ಪುನೀತನನ್ನು ರೇಗಿಸಿದ್ದಾಳೆ. ಇದರಿಂದ ಕೋಪಗೊಂಡ ಪುನೀತ್ ಆಕೆಯ ಕಪಾಳ‌ ಬಾರಿಸಿದ್ದಾನೆ. ಈ ವೇಳೆ ಆಕೆ ಪ್ರಜ್ಞೆ ತಪ್ಪಿದ್ದರಿಂದ ಗಾಬರಿಗೊಂಡು ಆಕೆಯನ್ನು ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ.


ಇನ್ನು ಮೃತದೇಹವನ್ನು ತನ್ನ ತೋಟಕ್ಕೆ ತಂದು ಇಟ್ಟಿದ್ದಾನೆ. ಬಳಿಕ ತಾನೊಬ್ಬ ಕಾರ್ ಡ್ರೈವರ್, ಕಾರಿನಲ್ಲಿ ಮೊಬೈಲ್ ಬಿಟ್ಟುಹೋಗಿದ್ದಾರೆ ಎಂದು ಹೇಳಿ ಮೊಬೈಲ್ ಅನ್ನು ಪ್ರೀತಿಯ ಪತಿಗೆ ತಲುಪಿಸಿದ್ದಾನೆ.‌ ಈ ವೇಳೆ ಅನುಮಾನಗೊಂಡು ಪ್ರೀತಿ ಪತಿ ಪೊಲೀಸರಿಗೆ ದೂರು ನೀಡಿದ್ದಾನೆ. ಈ ದೂರು ಸ್ವೀಕರಿಸಿದ ಪೊಲೀಸರು ಪುನೀತ್​​ನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಕೊಲೆ ರಹಸ್ಯ ಬಯಲಾಗಿದೆ.

ಒಟ್ಟಾರೆ ಸುಂದರ ಯುವಕನ ಹಿಂದೆ ಬಿದ್ದವಳು ಮಸಣ ಸೇರಿದ್ದು ಮಾತ್ರ ವಿಪರ್ಯಾಸ.


Ads on article

🎁 Amazon Prime ಸದಸ್ಯರಾಗಿರಿ

Amazon Prime Offer
👉 ಉಚಿತ shipping, Prime Video, shopping deals—all in one!

Disclosure: ಈ ಲಿಂಕ್ Amazon Affiliate Program ನ ಭಾಗವಾಗಿದೆ. ನೀವು ಈ ಲಿಂಕ್ ಮೂಲಕ Prime ಸದಸ್ಯರಾಗಿದರೆ, ನಮಗೆ commission ಸಿಗಬಹುದು.

Advertise in articles 1

advertising articles 2

Advertise under the article