ಮಂಗಳೂರು: ಮಳೆಗೆ ಕುಸಿದು ರಸ್ತೆಗೆ ಬಿದ್ದ ಬೃಹತ್ ತಡೆಗೋಡೆ- ಭೀಕರ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ Video



ಮಂಗಳೂರು: ನಗರದಲ್ಲಿ ಶನಿವಾರ ಸಂಜೆಯ ಬಳಿಕ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ರೆಡ್ ಅಲರ್ಟ್ ಘೋಷಿಸಲಾಗಿದೆ. ಅಲ್ಲಲ್ಲಿ ಅವಘಡ ಸೃಷ್ಟಿಯಾಗಿದ್ದು, ಮಂಗಳೂರಿನ ಕಂಕನಾಡಿಯ ಸುವರ್ಣಲೇನ್ ಬಳಿಯ ಬೃಹತ್‌ ತಡೆಗೋಡೆ ಏಕಾಏಕಿ ಕುಸಿದು ರಸ್ತೆಗೆ ಬಿದ್ದ ಘಟನೆ ನಡೆದಿದೆ. ತಡೆಗೋಡೆ ಕುಸಿದ ಭಯಾನಕ ದೃಶ್ಯ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದೆ.







ಬೃಹತ್ ತಡೆಗೋಡೆ ಕುಸಿದು ರಸ್ತೆಯ ಮೇಲೆಯೇ ಬಿದ್ದಿದ್ದು ಅದೃಷ್ಟವಶಾತ್ ರಸ್ತೆಯಲ್ಲಿ ಜನ ಸಂಚಾರ, ವಾಹನ ಸಂಚಾರವಿಲ್ಲದ ಕಾರಣ ಭಾರೀ ದುರಂತವೊಂದು ತಪ್ಪಿದಂತಾಗಿದೆ. ತಡೆಗೋಡೆ ರಸ್ತೆ ಮೇಲೆ ಕುಸಿದು‌ ಮುಂಭಾಗದ ಮನೆಯ ಕಾಂಪೌಂಡ್‌ಗೆ ಹಾನಿಯಾಗಿದೆ. ತಡೆಗೋಡೆ ಬಿದ್ದ ರಭಸಕ್ಕೆ ಮುಂಭಾಗದ ಮನೆಯ ಕಾಪೌಂಡ್ ಗೇಟ್ ಕಿತ್ತು ಹೋಗಿದೆ. ಜೊತೆಗೆ ವಿದ್ಯುತ್ ಕಂಬ ಬಿದ್ದು ಎರಡು ತುಂಡಾಗಿ ಶಾರ್ಟ್ ಸರ್ಕ್ಯೂಟ್ ಆಗಿದೆ‌. ಅಲ್ಲದೆ ಜಲಸ್ಫೋಟದ ಮಾದರಿಯ ಬಂದ ಭಯಾನಕ ದೃಶ್ಯ ಸಿಸಿಕ್ಯಾಮರಾದಲ್ಲಿ‌ ಸೆರೆಯಾಗಿದೆ.