ಗುಜರಾತ್ : ಇಲ್ಲಿನ ಅಮೇಲಿಯಲ್ಲಿ 8ವರ್ಷದ ಬಾಲಕನೊಬ್ಬನ ಕಣ್ಣಿನಲ್ಲಿ 30 ಕೀಟಗಳು ಹಾಗೂ ಅವುಗಳ 35 ಮೊಟ್ಟೆಗಳು ಪತ್ತೆಯಾಗಿದ್ದು, ತಪಾಸಣೆ ನಡೆಸಿದ ವೈದ್ಯರೇ ಶಾಕ್‌ಗೊಳಗಾಗಿದ್ದಾರೆ.
ಈ ಬಾಲಕ ತೀವ್ರ ಕಣ್ಣಿನ ನೋವಿನಿಂದ ಬಳಲುತ್ತಿದ್ದ ಕಾರಣ ಚಿಕಿತ್ಸೆಗಾಗಿ ಸ್ಥಳೀಯ ಲಲ್ಲುಭಾಯಿ ಸೇಠ್ ಆರೋಗ್ಯ ಮಂದಿರ ಆಸ್ಪತ್ರೆಗೆ ಮನೆಯವರು ಕರೆ ತಂದಿದ್ದರು. ಆಸ್ಪತ್ರೆಯ ನೇತ್ರತಜ್ಞರು ಡಾ. ಮೃಗಾಂಕ್ ಪಟೇಲ್ ಬಾಲಕನ ಕಣ್ಣುಗಳನ್ನು ಪರೀಕ್ಷಿಸಿದ್ದಾರೆ. ಈ ವೇಳೆ ಅವರು ಬಾಲಕನ ಕಣ್ಣುಗಳಲ್ಲಿ ಕಂಡುಬಂದ ಕೀಟಗಳನ್ನು, ಅವುಗಳ ಮೊಟ್ಟೆಗಳನ್ನು ನೋಡಿ ಆಘಾತಕ್ಕೊಳಗಾಗಿದ್ದಾರೆ.
ತಲೆಯ ಹೇನುಗಳಂತಹ ಕೀಟಗಳು ಬಾಲಕನ ಕಣ್ಣುರೆಪ್ಪೆಗಳಲ್ಲಿ ವಾಸಿಸುತ್ತಿತ್ತು. ಪರೀಕ್ಷೆಯಲ್ಲಿ ಕೀಟಗಳು ಈ ಕಣ್ಣುರೆಪ್ಪೆಗಳಲ್ಲಿ ಮೊಟ್ಟೆಗಳನ್ನು ಇಟ್ಟಿವೆ ಎಂದು ತಿಳಿದುಬಂದಾಗ ವೈದ್ಯರು ಆಘಾತಕ್ಕೊಳಗಾಗಿದ್ದರೆ.
ವೈದ್ಯರು ಯಾವುದೇ ಶಸ್ತ್ರಚಿಕಿತ್ಸೆ ಮಾಡದೆ ಕೇವಲ ಕಣ್ಣಿನ ಹನಿಗಳನ್ನು ಮಾತ್ರ ಹಾಕಿದ್ದಾರೆ. ಕಣ್ಣುಗಳಿಗೆ ಹನಿಗಳನ್ನು ಹಾಕುವ ಮೂಲಕ ಅವರು ಬಾಲಕನ ಕಣ್ಣುಗಳಿಂದ 30ಹುಳುಗಳು ಮತ್ತು 35ಮೊಟ್ಟೆಗಳನ್ನು ತೆಗೆದುಹಾಕಿದ್ದಾರೆ. ಕಣ್ಣುರೆಪ್ಪೆಗಳಿಂದ ಹುಳುಗಳನ್ನು ತೆಗೆದುಹಾಕಲು ವೈದ್ಯರಿಗೆ ಸುಮಾರು ಒಂದೂವರೆ ಗಂಟೆ ತಗುಲಿದೆಯಂತೆ. ಈ ರೀತಿಯ ಶಸ್ತ್ರಚಿಕಿತ್ಸೆಯನ್ನು ಅಮೇಲಿಯಲ್ಲಿ ಮೊದಲ ಬಾರಿಗೆ ಮಾಡಲಾಗುತ್ತಿದೆ. ಕಣ್ಣುರೆಪ್ಪೆಗಳಿಂದ ಹುಳುಗಳು ಮತ್ತು ಮೊಟ್ಟೆಗಳನ್ನು ತೆಗೆದುಹಾಕುವ ಶಸ್ತ್ರಚಿಕಿತ್ಸೆಯ ನಂತರ ಬಾಲಕನ ಸ್ಥಿತಿ ಸುಧಾರಿದೆ ಎಂದು ವೈದ್ಯರು ಹೇಳಿದರು.
ಕೀಟಗಳಿಂದ ಕಣ್ಣುಗಳಿಗೆ ಬಹಳ ಹಾನಿಯಾಗಿದೆ. ಅವು ರಕ್ತ ಹೀರುತ್ತವೆ. ಸಮಯಕ್ಕೆ ಗುರುತಿಸಿ ಸೂಕ್ತ ಚಿಕಿತ್ಸೆ ನೀಡದಿದ್ದರೆ, ಕಣ್ಣು ಕಳೆದುಕೊಳ್ಳುವ ಅಪಾಯವಿತ್ತು ಎಂದು ವೈದ್ಯರು ಹೇಳಿದ್ದಾರೆ.