ಪ್ರಚೋದನಕಾರಿ ಭಾಷಣ: ಕಲ್ಲಡ್ಕ ಪ್ರಭಾಕರ್ ಭಟ್ ಮೇಲೆ‌ ಎಫ್ ಐ ಆರ್ , ಮತ್ತೊಂದೆಡೆ 15 ಹಿಂದೂ ಸಂಘಟನೆ ಕಾರ್ಯಕರ್ತರ ಮೇಲೆ ಪ್ರಕರಣ



 ಪ್ರಚೋದನಕಾರಿ ಭಾಷ ಮಾಡಿರುವ ಆರೋಪದಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವಿಎಚ್‌ಪಿ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಮೇಲೆ ಪ್ರಕರಣ ದಾಖಲಾಗಿದೆ.




ಇತ್ತೀಚೆಗೆ ಬಜ್ಪೆಯಲ್ಲಿ ಕೊಲೆಗೀಡಾದ ಸುಹಾಸ್ ಶೆಟ್ಟಿ ಶ್ರದ್ಧಾಂಜಲಿ ಕಾರ್ಯಕ್ರಮ ಮೇ 12ರಂದು ಬಂಟ್ವಾಳದ ಮದ್ವ ಪ್ಯಾಲೇಸ್ ಕಲ್ಯಾಣ ಮಂಟಪದ ಹಾಲ್‌ನಲ್ಲಿ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್ ರವರು ಭಾಗವಹಿಸಿದ್ದರು. ಅಲ್ಲಿ ಸುಮಾರು 500 ಜನರನ್ನುದ್ದೇಶಿಸಿ ಭಾಷಣ ಮಾಡುವ ವೇಳೆ, ಸಮಾಜದ ಸ್ವಾಸ್ತ್ಯ ಕೆಡುವಂತೆ, ಮತಿಯ ಗುಂಪುಗಳ ನಡುವೆ ವೈಮನಸ್ಸುಂಟು ಮಾಡುವಂತೆ, ಪ್ರಚೋದನಾತ್ಮಕವಾಗಿ ಹೇಳಿಕೆಯನ್ನು ನೀಡಿರುತ್ತಾರೆ. 





ಪರಿಣಾಮ ದ.ಕ.ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆಯಿದೆ ಎಂದು ಕಲ್ಲಡ್ಕ  ಪ್ರಭಾಕರ್ ಭಟ್‌ರವರ ವಿರುದ್ಧ ಜೂನ್ 2ರಂದು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಕ್ರ ನಂಬ್ರ : 60/2025, ಕಲಂ: 353(2) BNS ರಂತೆ ಪ್ರಕರಣ ದಾಖಲಾಗಿದೆ.




ಸಂಘಟನೆ ಮುಖಂಡರ ಪರಿಶೀಲನೆ ವಿರೋಧಿಸಿ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ- 15 ಮಂದಿ ವಿರುದ್ದ ಪ್ರಕರಣ





ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ  ಸಂಘಟನೆ ಮುಖಂಡರ ಪರಿಶೀಲನೆ ಮಾಡುತ್ತಿರುವುದನ್ನು ವಿರೋಧಿಸಿ ಕಡಬ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದ 15 ಮಂದಿ ವಿರುದ್ದ ಪ್ರಕರಣ ದಾಖಲಿಸಲಾಗಿದೆ.


 

ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸಂಘಟನೆ ಮುಖಂಡರ ಮನೆ ಬಳಿಗೆ ತೆರಳಿ ಮಾಹಿತಿ ಸಂಗ್ರಹ ಕಾರ್ಯ ಆಗಿದೆ. ಇದಕ್ಕೆ  ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.  ಪೊಲೀಸರು ಮಧ್ಯರಾತ್ರಿ ಮನೆಗೆ ಆಗಮಿಸುತ್ತಿದ್ದಾರೆ ಎಂದು ಆರೋಪಿಸಿದ್ದ ಹಿಂದೂ ಸಂಘಟನೆಯ ಕಾರ್ಯಕರ್ತರು ಠಾಣೆಯ ಮುಂದೆ ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ 15ಮಂದಿಯ ವಿರುದ್ಧ ಕಡಬ ಠಾಣೆಯ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.


 1)ಪ್ರಮೋದ್ ರೈ,   ನಂದುಗುರಿ, 2) ತಿಲಕ್ , ನಂದುಗುರಿ, 3) ಮೋಹನ, ಕೆರೆಕೋಡಿ, 4)ಚಂದ್ರಶೇಖರ, ನೂಜಿಬಾಳ್ತಿಲ, 5)ಮಹೇಶ್  ಕುಟ್ರುಪ್ಪಾಡಿ. 6)ಡೀಕಯ್ಯ ನೂಜಿಬಾಳ್ತಿಲ, 7) ಸುಜಿತ್ ಕುಟ್ರುಪ್ಪಾಡಿ, 8)ಶರತ್ ನಂದುಗುರಿ, 9)ಶ್ರೇಯತ್,  ನಂದುಗುರಿ, 10)ಉಮೇಶ್,  ನೂಜಿಬಾಳ್ತಿಲ, 11) ರಾದಾಕೃಷ್ಣ, ಕೆ. 12) ಜಯಂತ್, ಮತ್ತು ಇತರ ಮೂವರ ಮೇಲೆ FIR ದಾಖಲಾಗಿದೆ.


ಇವರು ಯಾವುದೇ ಪೂರ್ವಾನುಮತಿ ಇಲ್ಲದೆ ಅಕ್ರಮವಾಗಿ ಗುಂಪು ಕಟ್ಟಿಕೊಂಡು ಕಡಬ ಠಾಣೆಯ ಮುಂಭಾಗದಲ್ಲಿ ಕಾನೂನು ಬಾಹಿರವಾಗಿ ಪ್ರತಿಭಟನೆ ನಡೆಸಿದ್ದಾರೆಂದು ಎಫ್ಐಆರ್ ದಾಖಲಾಗಿದೆ.