ತಾನು 10ಮಕ್ಕಳ ತಾಯಿಯಾಗಬೇಕು ಎಂದು ವಿಚಿತ್ರ ಇಂಗಿತ ವ್ಯಕ್ತಪಡಿಸಿದ ನಟಿ ಸನಾ ಖಾನ್- ನೆಟ್ಟಿಗರಿಂದ ತೀವ್ರ ತರಾಟೆಗೆ


ಇತ್ತೀಚೆಗೆ ಕೆಲ ನಟಿಯರು ವಿಚಿತ್ರ ಹೇಳಿಕೆಗಳನ್ನು ನೀಡಿ ಟ್ರೋಲ್‌ಗೆ ಒಳಗಾಗುತ್ತಿದ್ದಾರೆ. ಆ ಸಾಲಿಗೆ ಇತ್ತೀಚಿನ ಸೇರ್ಪಡೆ ಸನಾ ಖಾನ್‌ರದ್ದು. ತಾವು 10 ಮಕ್ಕಳನ್ನು ಹೊಂದಬೇಕೆಂದು ಆಸೆಯಿದೆ ಎಂದು ಇಂಗಿತ ವ್ಯಕ್ತಪಡಿಸಿದ್ದಾರೆ. ಇದಕ್ಕೆ ನೆಟ್ಟಿಗರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಮದುವೆಯ ಬಳಿಕ ಸಿನಿಮಾರಂಗವನ್ನು ತೊರೆದು ಕೌಟುಂಬಿಕ ಜೀವನಕ್ಕೆ ಮರಳಿದ ನಟಿಯರಲ್ಲಿ ಸನಾ ಖಾನ್ ಕೂಡ ಒಬ್ಬರು. ಸದ್ಯ ಧಾರ್ಮಿಕ ಜೀವನ ನಡೆಸುತ್ತಿರುವ ಸನಾ ಖಾನ್ ತಮ್ಮ ಭವಿಷ್ಯದ ಕುಟುಂಬ ಯೋಜನೆ ಬಗ್ಗೆ ಹೇಳಿಕೆ ನೀಡಿದ್ದಾರೆ.

ಪ್ರಸ್ತುತ ಸನಾ ಖಾನ್ ತಮ್ಮ ಪತಿ ಅನಾಸ್ ಸಯ್ಯದ್‌ರೊಂದಿಗೆ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇತ್ತೀಚಿನ ಇನ್‌ಸ್ಟಾಗ್ರಾಮ್ ವಿಡಿಯೋದಲ್ಲಿ, ಹಿಂದಿನ ಕಾಲದಲ್ಲಿ ಮಹಿಳೆಯರು 12 ಮಕ್ಕಳಿಗೆ ಜನ್ಮ ನೀಡುತ್ತಿದ್ದರು, ನಾನು 10 ಮಕ್ಕಳನ್ನು ಹೊಂದಲು ಬಯಸುತ್ತೇನೆ ಎಂದು ಹೇಳಿದ್ದಾರೆ.

ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ತೀವ್ರವಾಗಿ ಟೀಕಿಸಿದ್ದಾರೆ. 10-12 ಮಕ್ಕಳಿಗೆ ಜನ್ಮ ನೀಡುವುದು ಸುಲಭವೇ? ಎಂದು ಪ್ರಶ್ನಿಸಿದ್ದಾರೆ.

ಸನಾ ಖಾನ್ ಅವರ ಪತಿ ಗುಜರಾತ್‌ನ ಸೂರತ್‌ನ ಮುಫ್ತಿ ಅನಾಸ್ ಸಯ್ಯದ್. ಆತ ಓರ್ವ ಧಾರ್ಮಿಕ ನಾಯಕ ಮತ್ತು ಇಸ್ಲಾಮಿಕ್ ವಿದ್ವಾಂಸ. ಅಂದಹಾಗೆ, ಸನಾ ಖಾನ್ ನವೆಂಬರ್ 20, 2020ರಂದು ಗುಜರಾತ್‌ನ ಅಂಕಲೇಶ್ವರದ ಮುಫ್ತಿ ಅನಾಸ್ ಸೈಯದ್ ಅವರನ್ನು ವಿವಾಹವಾದರು. ಇವರಿಬ್ಬರ ಮೊದಲ ಭೇಟಿ 2017ರಲ್ಲಿ ಮೆಕ್ಕಾದಲ್ಲಿ ನಡೆದಿತ್ತು.