ರಾಹುಲ್ ಗಾಂಧಿಯನ್ನು ಹಿಂದೂ ಧರ್ಮದಿಂದ ಬಹಿಷ್ಕರಿಸಬೇಕು- ಸ್ವಾಮಿ ಅವಿಮುಕ್ತಶ್ವರಾನಂದ


ಡೆಹ್ರಾಡೂನ್‌: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಹಿಂದೂ ಧರ್ಮದಿಂದ ಬಹಿಷ್ಕರಿಸಬೇಕು ಎಂದು ಜ್ಯೋತಿರ್ಮಠ ಶಂಕರಾಚಾರ್ಯ ಸ್ವಾಮಿ ಅವಿಮುಕ್ತಶ್ವರಾನಂದ ಸರಸ್ವತಿ ಆಗ್ರಹಿಸಿದ್ದಾರೆ.

ಕೆಲವು ತಿಂಗಳುಗಳ ಹಿಂದೆ ರಾಹುಲ್ ಗಾಂಧಿ ಸಂಸತ್ತಿನಲ್ಲಿ ಮನುಸ್ಮೃತಿ ಬಗ್ಗೆ ಮಾತನಾಡಿ ಸನಾತನ ಧರ್ಮಕ್ಕೆ ಅವಮಾನಿಸಿದ್ದಾರೆ. ಈ ಬಗ್ಗೆ ಸ್ಪಷ್ಟನೆ ಕೇಳಿದ್ದರೂ ಅದಕ್ಕೆ ಪ್ರತಿಕ್ರಿಯೆ ನೀಡಿಲ್ಲ ಎಂದು ಶ್ರೀಗಳು ಹೇಳಿದ್ದಾರೆ.

ಬದರೀನಾಥದ ಶಂಕರಾಚಾರ್ಯ ಮಠದಿಂದ ಈ ಬಗ್ಗೆ ಪ್ರಕಟನೆ ನೀಡಿರುವ ಶ್ರೀಗಳು "ಮನುಸ್ಮೃತಿಯು ಅತ್ಯಾಚಾರ ಅಪರಾಧಿಗಳನ್ನು ರಕ್ಷಿಸುತ್ತವೆ" ಎಂದಿರುವ ರಾಹುಲ್‌ಗೆ ಸನಾತನ ಧರ್ಮದ ಮೇಲೆ ನಂಬಿಕೆಯಿಲ್ಲ. ಹಾಗಿದ್ದಾಗ ಅವರನ್ನು ಬಹಿಷ್ಕರಿಸುವುದೇ ಒಳಿತು. ದೇವಾಲಯಗಳಲ್ಲಿ ಅವರಿಗೆ ಪ್ರವೇಶ ನಿಷೇಧಿಸಿ' ಎಂದಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu