ಮಂಗಳೂರು: ನೆಕ್ಸ್ಟ್ ಟಾರ್ಗೆಟ್ ಶರಣ್ ಪಂಪ್‌ವೆಲ್, ಭರತ್ ಕುಮ್ಡೇಲ್- ಸೋಷಿಯಲ್ ಮೀಡಿಯಾದಲ್ಲಿ ಕೊಲೆ ಬೆದರಿಕೆ
Sunday, May 4, 2025
ಮಂಗಳೂರು: ಸುಹಾಸ್ ಶೆಟ್ಟಿ ಹತ್ಯೆ ಬೆನ್ನಲ್ಲೇ ನೆಕ್ಸ್ಟ್ ಟಾರ್ಗೆಟ್ ವಿಎಚ್‌ಪಿ ಮುಖಂಡ ಶರಣ್ ಪಂಪ್‌ವೆಲ್, ಬಜರಂಗದಳ ಮುಖಂಡ ಭರತ್ ಕುಮ್ಡೇಲ್ ಎಂದು ಸೋಶಿಯಲ್ ಮೀಡಿಯಾದಲ್ಲಿ ಜೀವ ಬೆದರಿಕೆ ಒಡ್ಡಿರುವ ಪೋಸ್ಟ್ ವೈರಲ್ ಆಗುತ್ತಿದೆ.
ಮುಂದಿನ ಟಾರ್ಗೆಟ್ ಶರಣ್ ಪಂಪ್‌ವೆಲ್ ಹತ್ಯೆಗೆ ತಯಾರಾಗು ಎಂಬ ಜೀವ ಬೆದರಿಕೆ ಒಡ್ಡುವ ಪೋಸ್ಟ್ ಮಾಡಲಾಗಿದೆ. ಬಜರಂಗದಳ ಮುಖಂಡ ಭರತ್ ಕುಮ್ಡೇಲು ಹತ್ಯೆಗೆ ಡೇಟ್ ಫಿಕ್ಸ್ ಪೋಸ್ಟ್ ಮಾಡಲಾಗಿದೆ. ಅಶ್ರಫ್‌ನನ್ನು ಕೊಂದ ಭರತ್‌ನನ್ನು ಮರೆತಿಲ್ಲ. Wait and watch ಎಂದು ತಲವಾರು ಫೋಟೋವನ್ನು ಅಟ್ಯಾಚ್ ಮಾಡಿ On fixed leader ಎಂಬ ಹೆಸರಿನ ಇನ್ಸ್ಟಾಗ್ರಾಂ ಪೇಜ್‌ನಲ್ಲಿ ಪೋಸ್ಟ್ ಮಾಡಲಾಗಿದೆ.
ಮತ್ತೊಂದು ಪೋಸ್ಟ್‌ನಲ್ಲಿ 5/5/ 2025 ರಾತ್ರಿ 9.30ಕ್ಕೆ ನಿನ್ನ ಸ್ಥಳದಲ್ಲೇ ಕೊಲೆ ಮಾಡುದಾಗಿ ಭರತ್ ಕುಮ್ಡೇಲ್‌ಗೆ ಜೀವ ಬೆದರಿಕೆ. ಇದೇ ಪೋಸ್ಟ್‌ನಲ್ಲಿ ಸುಹಾಸ್ ಶೆಟ್ಟಿ ಪೋಟೋಗೆ ರೈಟ್ ಚಿಹ್ನೆ ಹಾಕಿ ವಿಕೃತಿ ಮೆರೆಯಲಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ದ್ವೇಷ ಕಾರುವ, ಜೀವ ಬೆದರಿಕೆ ಒಡ್ಡುವ ಪೋಸ್ಟ್‌ಗಳ ಮೇಲೆ ಪೊಲೀಸ್ ಇಲಾಖೆಯ ಕ್ರಮ ಕೈಗೊಳ್ಳುತ್ತಿದ್ದಾರೆ. ಆದರೆ ರಾಜರೋಷವಾಗಿ ಪೋಸ್ಟ್ ಮಾಡಲಾಗಿದೆ.