ಮಂಗಳೂರು: ರಿವರ್ಸ್ ಲವ್‌ಜಿಹಾದ್ ಆಗಿರುವ ದಿನೇಶ್ ಗುಂಡೂರಾವ್ ಸಚಿವರಾದದ್ದು ನಮ್ಮ ದುರ್ದೈವ- ಶಾಸಕ ಹರೀಶ್ ಪೂಂಜಾ
Monday, May 5, 2025
ಮಂಗಳೂರು: ದಿನೇಶ್ ಗುಂಡೂರಾವ್ ಬುರ್ಕಾ ಹಾಕಿಕೊಂಡವರ ಲವ್‌ಜಿಹಾದ್‌ಗೆ ಒಳಗಾಗಿರುವವರು. ರಿವರ್ಸ್ ಲವ್‌ಜಿಹಾದ್ ಆಗಿರುವ ಅವರು ದ.ಕ.ಜಿಲ್ಲೆಯ ಉಸ್ತುವಾರಿ ಸಚಿವರಾದದ್ದು ನಮ್ಮ ದುರ್ದೈವ ಎಂದು ಶಾಸಕ ಹರೀಶ್ ಪೂಂಜಾ ವಿವಾದಿತ ಹೇಳಿಕೆ ನೀಡಿದ್ದಾರೆ.
ಹರೀಶ್ ಪೂಂಜಾ ಸೀರಿಯಲ್ ಅಫೆಂಡರ್ ಎಂಬ
ಸಚಿವ ದಿನೇಶ್ ಗುಂಡೂರಾವ್ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ನಾನು ಯಾಕೆ ದಿನೇಶ್ ಗುಂಡೂರಾವ್ ಬುರ್ಖಾ ಹಾಕಿದ ಸಚಿವನೆಂದು ಹೇಳಿದನೆಂದ್ರೆ ಅವರು ಮದುವೆ ಆಗಿರುವುದು ಮುಸ್ಲಿಂ ಸಮುದಾಯ ಮಹಿಳೆಯನ್ನು. ಲವ್ ಜಿಹಾದ್ ಅಂದ್ರೆ ಹಿಂದೂ ಹುಡುಗಿಯನ್ನು ಮುಸ್ಲಿಂ ಯುವಕರು ಮದುವೆಯಾಗುವುದು. ಆದರೆ ಗುಂಡೂರಾವ್ ಅವರಲ್ಲಿ ಉಲ್ಟಾ ಆಗಿದೆ.
ದಿನೇಶ್ ಗುಂಡೂರಾವ್‌ರನ್ನು ಅವರ ಪತ್ನಿ ಲವ್ ಜಿಹಾದ್ ಮಾಡಿದ್ದಾರೆ. ಹೀಗಾಗಿ ಹಿಂದೂಗಳನ್ನು ತರ್ಡ್ ಸಿಟಿಜನ ರೀತಿಯಲ್ಲಿ ನೋಡುತ್ತಾರೆ ಎಂದು ಹರೀಶ್ ಪೂಂಜಾ ಹೇಳಿದರು.