-->
ಉಡುಪಿ: ಮದ್ಯದ ಮತ್ತಿನಲ್ಲಿ ತನ್ನದೇ ಮನೆಗೆ ಬೆಂಕಿ ಹಚ್ಚಿದ ವ್ಯಕ್ತಿ

ಉಡುಪಿ: ಮದ್ಯದ ಮತ್ತಿನಲ್ಲಿ ತನ್ನದೇ ಮನೆಗೆ ಬೆಂಕಿ ಹಚ್ಚಿದ ವ್ಯಕ್ತಿ

ಉಡುಪಿ: ಮದ್ಯದ ಮತ್ತಿನಲ್ಲಿ ವ್ಯಕ್ತಿಯೊರ್ವನು ತನ್ನದೇ ಮನೆಗೆ ಬೆಂಕಿ ಹಚ್ಚಿರುವ ವಿಚಿತ್ರ ಘಟನೆ ನಗರದ ಹೊರವಲಯದ ಚಿಟ್ಟಾಡಿಯಲ್ಲಿ ನಡೆದಿದೆ.

ಕಂಠಪೂರ್ತಿ ಮದ್ಯಸೇವಿಸಿದ್ದ ವ್ಯಕ್ತಿಯ ರಂಪಾಟ, ವರ್ತನೆ ಎದುರಿಸಲು ಅಸಹಾಯಕರಾದ ಮನೆಯವರು, ಸಮಾಜಸೇವಕ ನಿತ್ಯಾನಂದ ಒಳಕಾಡುವರಲ್ಲಿ ನೆರವಿಗೆ ಬರುವಂತೆ ಕೇಳಿಕೊಂಡಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ನಿತ್ಯಾನಂದ ಒಳಕಾಡು ಅವರು ಅಗ್ನಿಶಾಮಕ ದಳದವರಿಗೆ ವಿಷಯ ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸಿ ದೊಡ್ಡ ಪ್ರಮಾಣದಲ್ಲಿ ಆಗಬಹುದಾದ ಅಗ್ನಿದುರಂತವನ್ನು ತಪ್ಪಿಸಿದ್ದಾರೆ. ಬಳಿಕ ನಿತ್ಯಾನಂದ ಒಳಕಾಡು ಅವರು ಕುಡುಕನ ಮೊನವೊಲಿಸಿ ಮಧ್ಯವರ್ಜನ ಕೇಂದ್ರಕ್ಕೆ ದಾಖಲು ಮಾಡಿದ್ದಾರೆ.

Ads on article

Advertise in articles 1

advertising articles 2

Advertise under the article