ಮಂಗಳೂರು: ರಾಜಕಾಲುವೆಗೆ ಬಿದ್ದ ಕಾರು- ತಪ್ಪಿದ ದುರಂತ
Wednesday, May 28, 2025
ಮಂಗಳೂರು: ರಾಷ್ಟ್ರೀಯ ಹೆದ್ದಾರಿ 66ರ ಕೋಡಿಕಲ್ ಕ್ರಾಸ್ ಬಳಿಯಿರುವ ರಾಜಕಾಲುವೆಗೆ ಸಂಚಾರದಲ್ಲಿದ್ದ ಕಾರೊಂದು ಬಿದ್ದಿರುವ ಘಟನೆ ಬುಧವಾರ ಬೆಳಗ್ಗೆ ನಡೆದಿದೆ.
ಈ ರಾಜಕಾಲುವೆಯಲ್ಲಿ ಹೂಳೆತ್ತುವ ಕಾರ್ಯ ನಡೆಯುತ್ತಿತ್ತು. ಅದಕ್ಕಾಗಿ ರಾಜಕಾಲುವೆ ಬದಿಯಲ್ಲಿ ಬೆಳೆದಿದ್ದ ಪೊದೆಗಿಡಗಳನ್ನು ತೆಗೆದು ಮರಳು ತುಂಬಿದ ಚೀಲಗಳನ್ನು ತಡೆಯಾಗಿ ಇಡಲಾಗಿತ್ತು. ಆದರೆ ಸಂಚಾರದಲ್ಲಿದ್ದ ಕಾರೊಂದು ನಿಯಂತ್ರಣ ಕಳೆದು ರಾಜಕಾಲುವೆಗೆ ಬಿದ್ದಿದೆ.
ಅದೃಷ್ಟವಶಾತ್ ರಾಜಕಾಲುವೆಯಲ್ಲಿ ನೀರಿನಮಟ್ಟ ಕಡಿಮೆ ಇದ್ದಿದ್ದರಿಂದ ಕಾರಿನಲ್ಲಿದ್ದವರು ಯಾವುದೇ ಅಪಾಯ ಇಲ್ಲದೆ ಪಾರಾಗಿದ್ದಾರೆ. ಒಂದು ವೇಳೆ ಭಾರಿ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದಲ್ಲಿ ಜೀವಪಾಯ ಸಂಭವಿಸುವ ಸಾಧ್ಯತೆಯಿತ್ತು. ಸದ್ಯ ಕಾರನ್ನು ರಾಜಕಾಲುವೆಯಿಂದ ಮೇಲೆತ್ತಲಾಗಿದೆ. ಮಳೆಗಾಲಕ್ಕೆ ಮೊದಲೇ ಮಂಗಳೂರು ಮನಪಾ ರಾಜಕಾಲುವೆಯ ನಿರ್ವಹಣೆಯ ಕಾಮಗಾರಿ ನಡೆಸುತ್ತಿದ್ದರೆ ಇಂತಹ ಅಪಾಯ ಸಂಭವಿಸುತ್ತಿರಲಿಲ್ಲ.