ಕಾರು - ಬೈಕ್ ಅಪಘಾತ: ಯುವಕ ಸಾವು


ಮಡಿಕೇರಿ : ಕಾರು ಹಾಗೂ ಬೈಕ್ ನಡುವೆ ನಡೆದ ಅಪಘಾತದಲ್ಲಿ ಯುವಕನೊರ್ವ ಮೃತಪಟ್ಟಿರುವ ಘಟನೆ ಶನಿವಾರಸಂತೆ ಬಳಿ ನಡೆದಿದೆ.

ಶನಿವಾರಸಂತೆ ಸಮೀಪದ ನಿಡ್ತ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಚೌಡೇನಹಳ್ಳಿ ಗ್ರಾಮದ ನಿವಾಸಿ ಚಂದನ್(25) ಮೃತಪಟ್ಟ ದುರ್ದೈವಿ.

ಚಂದನ್ ತನ್ನ ಸ್ನೇಹಿತನೊಂದಿಗೆ ಬೈಕ್‍ನಲ್ಲಿ ಶನಿವಾರಸಂತೆಯಿಂದ ಚೌಡೇನಹಳ್ಳಿಯ ತನ್ನ ಮನೆಯತ್ತ ತೆರಳುತ್ತಿದ್ದರು. ಈ ವೇಳೆ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಈ ಕುರಿತು ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಮುಂದಿನ ಕ್ರಮ ಕೈಗೊಂಡಿದ್ದಾರೆ.