ಮಕ್ಕಳಿಗಾಗಿ ಮಿನುಗು ತಾರ ಬೇಸಿಗೆ ಶಿಬಿರ

 
ಕಾರ್ಕಳ : ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯಾ ವಿಶ್ವ ವಿದ್ಯಾಲಯ ದ  ನಿಟ್ಟೆ ರಾಜಯೋಗ ಶಿಕ್ಷಣ  ಕೇಂದ್ರ ದಲ್ಲಿ ಮಕ್ಕಳಿಗಾಗಿ  ಮಿನುಗು ತಾರ ಬೇಸಿಗೆ ಶಿಬಿರ ಏಪ್ರಿಲ್ 15ರಿಂದ 19ರ ವರೆಗೆ  ನಡೆಯಿತು.


 ನಾಟ್ಯ ಮತ್ತು ಸಂಗೀತ ತರಬೇತಿಯನ್ನು ಪ್ರಸಿದ್ಧ ರಂಗಭೂಮಿ ಕಲಾವಿದರು ಶರತ್ ಶೆಟ್ಟಿ ಮತ್ತು ಪ್ರಕಾಶ್ ಕಿನ್ನಿಗೋಳಿ ಅವರು ಶಿಬಿರದಲ್ಲಿ ನೀಡಿದರು. ಅವರ ಸಾನ್ನಿಧ್ಯ ಮತ್ತು ಪರಿಣಿತಿಗೆ ಅಭಿನಂದನೆ ಸಲ್ಲಿಸಲಾಯಿತು.

ಈ ಶಿಬಿರದಲ್ಲಿ ಧನಾತ್ಮಕ ಚಿಂತನೆ, ಏಕಾಗ್ರತೆಗಾಗಿ ಧ್ಯಾನ ಹಾಗೂ ಜೀವನದ ವಿವಿಧ ತತ್ತ್ವಗಳನ್ನು ಕುರಿತು ಕಲಿಸಲಾಗಿದೆ.  ನಿಟ್ಟೆ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವ ವಿದ್ಯಾಲಯದ ವರಾಂದಾವಣ ರಾಜಯೋಗ ಕೇಂದ್ರದಲ್ಲಿ ನಡೆದ ಸಮಾರಂಭದಲ್ಲಿ  ಮನೋಹರ್ ಶೆಟ್ಟಿ, ಯಶೋಧ ಶೆಟ್ಟಿ, ಶಿಕ್ಷಕಿ ಜಯಂತಿ ಶೆಟ್ಟಿ ಅಭಿನಂದಿಸಿದರು