-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದ ನಟಿ ರನ್ಯಾ ರಾವ್‌ಗೆ ಡಿವೋರ್ಸ್ ನೀಡಲು ಮುಂದಾದ ಜತಿನ್ ಹುಕ್ಕೇರಿ

ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದ ನಟಿ ರನ್ಯಾ ರಾವ್‌ಗೆ ಡಿವೋರ್ಸ್ ನೀಡಲು ಮುಂದಾದ ಜತಿನ್ ಹುಕ್ಕೇರಿ


ಬೆಂಗಳೂರು: ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟಿ ರನ್ಯಾ ರಾವ್‌ಗೆ ಪತಿ ಜತೀನ್‌ ಹುಕ್ಕೇರಿ ವಿವಾಹ ವಿಚ್ಛೇದನ ನೀಡಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ. ಜತೀನ್ ಹುಕ್ಕೇರಿ ಕೌಟುಂಬಿಕ ನ್ಯಾಯಾಲಯದಲ್ಲಿ ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಕೋರ್ಟ್ ನಂಬರಿಂಗ್ ಇನ್ನೂ ಆಗಿಲ್ಲ ಎನ್ನಲಾಗಿದೆ. ತನ್ನ ದಾಂಪತ್ಯ ಜೀವನದಲ್ಲಿ ಈಗಾಗಲೇ ಸಾಕಷ್ಟು ತೊಂದರೆಗಳಾಗಿದ್ದು, ಆದ್ದರಿಂದ ತಾನಹ ಡಿವೋರ್ಸ್‌ಗೆ ಮುಂದಾಗಿದ್ದೇನೆ ಎಂದು ಅವರು ಹೇಳಿದ್ದಾರೆ ಎನ್ನಲಾಗಿದೆ.

"ನಾವು ವಿವಾಹ ಆದಗಿನಿಂದ ಸಮಸ್ಯೆ ಆರಂಭವಾಗಿದೆ. ನನಗೆ ಮದುವೆಯಾದ ಮೊದಲ ದಿನದಿಂದಲೂ ನೋವು ಹಾಗೂ ತೊಂದರೆ ಶುರುವಾಗಿದೆ. ಆದ್ದರಿಂದ ನಾನು ಡಿವೋರ್ಸ್‌ಗೆ ಅರ್ಜಿ ಸಲ್ಲಿಸುವ ನಿರ್ಧಾರಕ್ಕೆ ಬಂದಿದ್ದೇನೆ" ಎಂದು ಮಾಧ್ಯಮಗಳ ಮುಂದೆ ಜತೀನ್ ತಿಳಿಸಿದ್ದಾರೆ ಎಂದು ವರದಿಯಾಗಿದೆ.

ನಟಿ ರನ್ಯಾ ರಾವ್ ಮತ್ತು ಹುಕ್ಕೇರಿ 2024ರ ನವೆಂಬರ್ 27ರಂದು ಮದುವೆಯಾಗಿದ್ದರು. ಬ್ರೋಕರ್ ಮೂಲಕ ಪರಿಚಯವಾಗಿ ಮದುವೆಯಾಗಿದ್ದರು. ಮದುವೆಯಾದ ಒಂದೇ ತಿಂಗಳಲ್ಲಿ ಇವರ ನಡುವೆ ಮನಸ್ತಾಪ ಆರಂಭವಾಗಿತ್ತು. ರನ್ಯಾ ರಾವ್ ದುಬೈ ಪ್ರವಾಸದ ಕುರಿತು ಪತಿಗೆ ಅನುಮಾನವಿತ್ತು ಎನ್ನಲಾಗುತ್ತಿದೆ. ಆದ್ದರಿಂದ ಈಕೆಗೆ ಡಿವೋರ್ಸ್ ನೀಡಲು ಹುಕ್ಕೇರಿ ಯೋಚಿಸಿದ್ದರು. ಈ ಸಮಯದಲ್ಲಿ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣವೂ ಬೆಳಕಿಗೆ ಬಂದಿದೆ. ಆಗ ಜತೀನ್ ಹುಕ್ಕೇರಿಯವರ ವಿಚಾರಣೆಯೂ ನಡೆದಿತ್ತು.

Ads on article

Advertise in articles 1

advertising articles 2

Advertise under the article

ಸುರ