-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ನೀವು ಪಾನಿಪುರಿ ತಿನ್ನುವವರೇ? ಹಾಗಾದರೆ ಇಲ್ಲಿದೆ ನಿಮಗೊಂದು ಗುಡ್‌ನ್ಯೂಸ್

ನೀವು ಪಾನಿಪುರಿ ತಿನ್ನುವವರೇ? ಹಾಗಾದರೆ ಇಲ್ಲಿದೆ ನಿಮಗೊಂದು ಗುಡ್‌ನ್ಯೂಸ್




ಯುವ ಜನತೆಗೆ ಪಾನಿಪುರಿ ಬಹಳ ಇಷ್ಟದ ಬೀದಿಬದಿ ಆಹಾರ. ಅದರಲ್ಲೂ ವಿಶೇಷವಾಗಿ ಬಹುತೇಕ ಹುಡುಗಿಯರಿಗೆ ಪಾನಿಪುರಿ ಅಥವಾ ಗೋಲ್‌ಗಪ್ಪಾವೆಂದರೆ ಪಂಚಪ್ರಾಣ. ಏಕೆಂದರೆ, ಇದು ಬಹಳ ರುಚಿಕರವಾಗಿರುತ್ತದೆ. ಆದರೆ, ಎಲ್ಲರೂ ಭಾವಿಸಿರುವಂತೆ, ಪಾನಿಪುರಿ ತಿನ್ನುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ. ಆದರೆ, ಅಚ್ಚರಿ ಸಂಗತಿಯೆಂದರೆ, ಪಾನಿಪುರಿ ತಿನ್ನುವುದರಿಂದ ಆರೋಗ್ಯ ಲಾಭಗಳನ್ನು ಸಹ ಪಡೆಯಬಹುದು.

* ಪಾನಿಪುರಿಯಲ್ಲಿ ಪುದೀನಾ ಹಾಗೂ ಜೀರಿಗೆಯಂತಹ ಆರೋಗ್ಯಕರ ಪದಾರ್ಥಗಳಿವೆ. ಇವು ಜೀರ್ಣಕ್ರಿಯೆ ಸುಧಾರಿಸುವುದರೊಂದಿಗೆ ಮತ್ತು ಜೀರ್ಣಕಾರಿ ಸಮಸ್ಯೆಗಳನ್ನು ನಿವಾರಿಸುತ್ತದೆ.

* ಪಾನಿಪುರಿಯಲ್ಲಿ ಕಾರ್ಬೋಹೈಡ್ರೆಟ್‌ ಸಮೃದ್ಧವಾಗಿದೆ. ಇವು ದೇಹಕ್ಕೆ ತ್ವರಿತ ಶಕ್ತಿಯನ್ನು ಒದಗಿಸುತ್ತದೆ. ಶಕ್ತಿವರ್ಧನೆಯ ಬಳಿಕ ನೀವು ನಿಮ್ಮ ಕೆಲಸಗಳನ್ನು ಹುರುಪಿನಿಂದ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ.

* ಪಾನಿಪುರಿಯಲ್ಲಿರುವ ಆಲೂಗಡ್ಡೆ ಹಾಗೂ ಕಡಲೆಗಳು ಜೀವಸತ್ವಗಳು ಮತ್ತು ಖನಿಜಗಳನ್ನು ಒದಗಿಸುತ್ತವೆ. ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುವ ಮೂಲಕ ಶಕ್ತಿಯನ್ನು ವೃದ್ಧಿಸುತ್ತದೆ.

* ಪಾನಿಪುರಿಯು ಬಾಯಿಹುಣ್ಣು ಶಮನಕಾರಿ ಔಷಧೀಯ ಗುಣಗಳನ್ನು ಹೊಂದಿದೆ. ಪಾನಿಪುರಿಯಲ್ಲಿರುವ ಮಸಾಲೆಗಳು ಬಾಯಿ ಹುಣ್ಣನ್ನು ಕಡಿಮೆ ಮಾಡಲು ಸಹಕಾರಿ.

* ಪುದೀನಾ ಮತ್ತು ಜೀರಿಗೆಯಂತಹ ಪದಾರ್ಥಗಳು ಮನಸ್ಸನ್ನು ಉತ್ತೇಜಿಸುತ್ತವೆ. ಅವು ಮನಸ್ಸನ್ನು ಶಾಂತವಾಗಿಡಲು ಸಹಾಯ ಮಾಡುತ್ತವೆ.

ಪಾನಿಪುರಿ ತಿನ್ನುವ ಮುನ್ನ ಎಚ್ಚರವಹಿಸಿ

ಹಲವು ಪ್ರಯೋಜನಗಳನ್ನು ಹೊಂದಿರುವ ಪಾನಿಪುರಿಯ ಸೇವನೆ ಮೊದಲು ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಅಂದರೆ, ಪಾನಿಪುರಿ ತಿನ್ನುವಾಗ, ಅದನ್ನು ಶುದ್ಧ ವಾತಾವರಣದಲ್ಲಿ ತಯಾರಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಿ. ಅದಕ್ಕೆ ಬಳಸುವ ನೀರು ಶುದ್ಧವಾಗಿರಬೇಕು. ಅಲ್ಲದೆ, ಹೆಚ್ಚು ಪಾನಿಪುರಿ ತಿನ್ನುವುದು ಆರೋಗ್ಯಕ್ಕೆ ಹಾನಿಕಾರಕವಾಗಬಹುದು.. ಆದ್ದರಿಂದ, ಇದನ್ನು ಮಿತವಾಗಿ ತಿನ್ನುವುದು ಉತ್ತಮ. ಜೀರ್ಣಕ್ರಿಯೆಯ ಸಮಸ್ಯೆ ಇರುವವರು ವೈದ್ಯರನ್ನು ಸಂಪರ್ಕಿಸಬೇಕು.

ಒಟ್ಟಾರೆಯಾಗಿ, ಪಾನಿಪುರಿ ರುಚಿಕರ ಮಾತ್ರವಲ್ಲ, ಆರೋಗ್ಯ ಪ್ರಯೋಜನಗಳನ್ನು ಸಹ ನೀಡುತ್ತದೆ. ಆದಾಗ್ಯೂ, ಇದನ್ನು ಶುದ್ಧ ವಾತಾವರಣದಲ್ಲಿ ಮಿತವಾಗಿ ತಿನ್ನಬೇಕು.

Ads on article

🎁 Amazon Prime ಸದಸ್ಯರಾಗಿರಿ

Amazon Prime Offer
👉 ಉಚಿತ shipping, Prime Video, shopping deals—all in one!

Disclosure: ಈ ಲಿಂಕ್ Amazon Affiliate Program ನ ಭಾಗವಾಗಿದೆ. ನೀವು ಈ ಲಿಂಕ್ ಮೂಲಕ Prime ಸದಸ್ಯರಾಗಿದರೆ, ನಮಗೆ commission ಸಿಗಬಹುದು.

Advertise in articles 1

advertising articles 2

Advertise under the article