ಅತ್ತೂರು ಸಂತ ಲಾರೆನ್ಸ್ ಬಸಿಲಕದ ವಾರ್ಷಿಕ ಮಹೋತ್ಸವ- ಕಾರ್ಕಳದ ಸಾಂತ್ ಮಾರಿ ಸಂಭ್ರಮ



ಕಾರ್ಕಳ ಸರ್ವಧರ್ಮ, ಏಕತೆಯ ಸಾರುವ ತಾಣ ಭಕ್ತಿ ಸಂಭ್ರಮವನ್ನು ಸಾರುವ ಅತ್ತೂರಿನ ಸಂತ ಲಾರೆನ್ಸ್ ಬಸಿಲಕದ ವಾರ್ಷಿಕ ಮಹೋತ್ಸವ ಸಂಭ್ರಮದೊಂದಿಗೆ ನಡೆಯುತ್ತಿದೆ.



      ಇಂದು ಬೆಳಿಗ್ಗೆ ಸಂತ ಲಾರೆನ್ಸ ರ ಪರಮ ಪ್ರಸಾದವನ್ನು ಭವ್ಯ ಮೆರವಣಿಗೆಯೊಂದಿಗೆ ಸಂತ ಬೆಸಲಿಕ ಚರ್ಚಿಗೆ ತರಲಾಯಿತು.  ನಂತರ ಉಡುಪಿ ಜಿಲ್ಲಾ ಧರ್ಮ ಅಧ್ಯಕ್ಷರಾದ ಪರಮಪೂಜ್ಯ ಡಾ. ಜರಾಲ್ಡ್ ಐಸಾಕ್ ಲೋಬೋ ಧರ್ಮ ದ್ವಜಾರೋಹಣ ಮಾಡಿ  ವಾರ್ಷಿಕ ಮಹೋತ್ಸವಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕಾರ್ಕಳ ಅತ್ತೂರು ಬೆಸಲಿಕದ ಧರ್ಮ ಗುರುಗಳಾದ ಒಂದನೇಯ ಅಲ್ಬನ್ನ್ ಡಿಸೋಜಾ , ಆಧ್ಯಾತ್ಮಿಕ ಗುರುಗಳಾದ ರೋಮನ್ ಮಸ್ಕರೇ ನಸ್, ಉಪಾಧ್ಯಕ್ಷರಾದ ಸಂತೋಷ್ ಡಿಸಿಲ್ವಾ ಹಾಗೂ ಕಾರ್ಯದರ್ಶಿ ರೊನಾಲ್ಟ್ ನೋರನ್ನ ಉಪಸ್ಥಿತರಿದ್ದರು. 





      ಅತ್ತೂರು ಸಂತ ಲಾರೆನ್ಸ್ ಬೆಸೆಲಿಕದ ವಾರ್ಷಿಕ ಹಬ್ಬ ನಾಡಿನೆಲ್ಲೆಡೆ ಜನಪ್ರಿಯ. ಕಾರ್ಕಳದ ಸಾಂತ್ ಮಾರಿ ಎಂದೇ ಪ್ರಸದ್ದಿ ಪಡೆದಿರುವ ಅತ್ತೂರು ಜಾತ್ರೆ ಸರ್ವ ಧರ್ಮೀಯರು ಪ್ರತಿ ವರ್ಷ ಹಗಲು ಮತ್ತು ರಾತ್ರಿ ಎನ್ನದೆ ಜನರು ನಾನ ಭಾಗಗಳಿಂದ ಭಾಗವಹಿಸುತ್ತಾರೆ. 

      ಇದೊಂದು ನಿಜಾರ್ಥದ ಜಾತ್ರೆಯಾಗಿದ್ದು ಬಟ್ಟೆ, ಆಹಾರ ,ಆಟಿಕೆ ಉತ್ಪನ್ನಗಳು ನಾನಾ ಬಗೆಯ ನೂರಾರು ಮಳಿಗೆಗಳು ಇಲ್ಲಿ ಕಾಣಸಿಗುತ್ತದೆ.

      ಇಟಲಿ ಬಿಟ್ಟರೆ ಅತ್ತೂರಿನಲ್ಲಿ ಏಕಶಿಲಾ ಕಲ್ಲಿನಿಂದ ಕೆತ್ತಿದ ಸಂತ ಲಾರೆನ್ಸರ ಅತಿ ದೊಡ್ಡ ಮೂರ್ತಿಯನ್ನು ಬಸಿಲಕದ ಬಲಬದಿಯಲ್ಲಿ ಪ್ರತಿಷ್ಠಾಪಿಸಲಾಗಿದೆ. 

 ಶಿಲೆಯಿಂದ ಕೆತ್ತಿರುವ ಸಂತ ಲಾರೆಸರ ಪ್ರತಿಮೆ ಇಟೇಲಿಯ ರೋಮ್ ಪ್ರಾಂತದಲ್ಲಿ ಹಾಗೂ ಅತ್ತೂರು ಸಂತ ಲಾರೆನ್ಸ್ ಬಸಿಲಿಕದಲ್ಲಿ ಬಿಟ್ಟರೆ  ಬೇರೆ ಎಲ್ಲಿಯೂಕಾಣಸಿಗಲಿಕ್ಕೆ ಇಲ್ಲ.