-->

ಮಂಗಳೂರು: ಅಪ್ರಾಪ್ತೆಯ ಅಪಹರಿಸಿ ಸಾಮೂಹಿಕ ಗ್ಯಾಂಗ್ ರೇಪ್- ಮೂವರು ಕಾಮುಕರಿಗೆ 20 ವರ್ಷಗಳ ಕಠಿಣ ಜೈಲು ಶಿಕ್ಷೆ

ಮಂಗಳೂರು: ಅಪ್ರಾಪ್ತೆಯ ಅಪಹರಿಸಿ ಸಾಮೂಹಿಕ ಗ್ಯಾಂಗ್ ರೇಪ್- ಮೂವರು ಕಾಮುಕರಿಗೆ 20 ವರ್ಷಗಳ ಕಠಿಣ ಜೈಲು ಶಿಕ್ಷೆ


ಮಂಗಳೂರು: ಅಪ್ರಾಪ್ತೆಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರಗೈದ ಆರೋಪ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಎಫ್.ಟಿ.ಎಸ್.ಸಿ-2 ಪೊಕ್ಸೊ ವಿಶೇಷ ನ್ಯಾಯಾಲಯದಲ್ಲಿ ಸಾಬೀತಾಗಿರುವ ಹಿನ್ನೆಲೆಯಲ್ಲಿ ಅಪರಾಧಿಗಳಿಗೆ 20 ವರ್ಷಗಳ ಕಠಿಣ ಶಿಕ್ಷೆ ವಿಧಿಸಿ ತೀರ್ಪು‌ ನೀಡಿದ್ದಾರೆ.

ಮಂಗಳೂರಿನ ಮೂಳೂರು ಗ್ರಾಮ ನಿವಾಸಿ ಮೊಹಮ್ಮದ್ ಶಾಕೀರ್  (26) ಕಾರ್ಕಳ ತಾಲೂಕಿನ ಕುಕ್ಕುಂದೂರಿನ ಅಬ್ದುಲ್ ಸಮದ್ (32) ಬಂಟ್ವಾಳ ತಾಲೂಕಿನ ಅಭಿಜೀತ್ (27) ಶಿಕ್ಷೆಗೊಳಗಾದ ಅಪರಾಧಿಗಳು.




2021 ಡಿಸೆಂಬರ್ 7ರಂದು ಪೆರ್ಮನ್ನೂರು ತೊಕ್ಕೊಟ್ಟು ಬಸ್ಸು ತಂಗುದಾಣದ ಬಳಿಯಿಂದ 16 ವರ್ಷದ ಅಪ್ರಾಪ್ತೆಯನ್ನು ಮೊಹಮ್ಮದ್ ಶಾಕೀರ್ ಮತ್ತು ಅಬ್ದುಲ್ ಸಮದ್ ಮೊಬೈಲ್ ಮತ್ತು ಹೊಸ ಬಟ್ಟೆಗಳನ್ನು ತೆಗೆದುಕೊಡುವುದಾಗಿ ಆಮಿಷವನ್ನು ತೋರಿಸಿ ಅಪಹರಿಸಿದ್ದಾರೆ. ಆಕೆಯನ್ನು ಕಾಸರಗೋಡು ಜಿಲ್ಲೆಯ ಮಂಜೇಶ್ವರ ಕೆ.ಜಿ.ಎಮ್ ರೋಡ್ ಜಂಕ್ಷನ್ ಗೆ ಕರೆಸಿಕೊಂಡು ಅಲ್ಲಿಂದ ಅಬ್ದುಲ್ ಸಮದ್ ಸ್ಕೂಟರ್‌ನಲ್ಲಿ  ಬಾಲಕಿಯನ್ನು ಕೂರಿಸಿಕೊಂಡು ಅಲ್ಲೆ ಪಕ್ಕದಲ್ಲಿರುವ ಮೆಟ್ರೋ ಲಾಡ್ಜ್‌ಗೆ ಕರೆದೊಯ್ದಿದ್ದಾನೆ. ಅಲ್ಲಿ ಬಾಲಕಿಯನ್ನು ರೂಮಿನಿಂದ ಹೊರಕ್ಕೆ ಬರಲು ಬಿಡದೆ ಕೂಡಿ ಹಾಕಿ ಡಿಸಂಬರ್  11ರ ನಂಜೆ ತನಕ ಒತ್ತಾಯಪೂರ್ವಕವಾಗಿ ಬಿಯರನ್ನು ಕುಡಿಸಿ ಸಿಗರೇಟ್‌‌ಗೆ ಗಾಂಜಾವನ್ನು ಬೆರೆಸಿ ಒತ್ತಾಯದಲ್ಲಿ ಸೇದಿಸಿ ನೊಂದ ಬಾಲಕಿಯ ಇಚ್ಛೆಗೆ ವಿರುದ್ಧವಾಗಿ ಮೊಹಮ್ಮದ್ ಶಾಕೀರ್ ಮತ್ತು ಅಬ್ದುಲ್ ಸಮದ್ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ. 

ಡಿಸೆಂಬರ್ 11ರಂದು ಆರೋಪಿಗಳು ಬಾಲಕಿಯನ್ನು ನಾಟೆಕಲ್‌ಗೆ ಕರೆದುಕೊಂಡು ಬಂದು ಅಲ್ಲಿ 3ನೇ ಆರೋಪಿ ಅಭಿಜಿತ್‌ನೊಂದಿಗೆ ಕಳುಹಿಸಿದ್ದಾರೆ. ಆತ ಬಾಲಕಿಯನ್ನು ಆತನ ಕಾರಿನಲ್ಲಿ ಅದೇ ದಿನ ರಾತ್ರಿ 12 ಗಂಟೆಗೆ ಮಂಗಳೂರು ತಾಲೂಕು ಪಜೀರ್ ಗ್ರಾಮದ ಕಂಬಪದವು ಎಂಬಲ್ಲಿರುವ ಬ್ರೀಝ್ ಅಪಾರ್ಟ್‌ ಮೆಂಟ್‌ ಗೆ ಕರೆದುಕೊಂಡು ಬಂದು  ಬಾಲಕಿಗೆ ಒತ್ತಾಯ ಪೂರ್ವಕವಾಗಿ ಬಿಯರ್ ಕುಡಿಸಿ ಗಾಂಜಾ ಸೇದಿಸಿದ್ದಾನೆ. ಬಳಿಕ ಆಕೆಯ ಇಚ್ಛೆಗೆ ವಿರುದ್ಧವಾಗಿ ಅತ್ಯಾಚಾರ ಮಾಡಿದ್ದು, ನಂತರ ಮೊಹಮ್ಮದ್ ಶಾಕೀರ್ ಮತ್ತು ಅಬ್ದುಲ್ ಸಮದ್ ಕೂಡಾ ಅಲ್ಲಿಗೆ ಬಂದು ಬಿಯರ್ ಕುಡಿದು ಗಾಂಜಾ ಎಳೆದು ಬಾಲಕಿಗೆ ಕೂಡಾ ಬಲವಂತವಾಗಿ ಬಿಯರ್ ಕುಡಿಸಿ ಗಾಂಜಾ ಸೇದಿಸಿ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ. ಈ ಬಗ್ಗೆ ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆಯನ್ನು ಒಡ್ಡಿದ್ದಾರೆ. 

ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.  ಉಳ್ಳಾಲ ಪೊಲೀಸ್ ನಿರೀಕ್ಷಕರಾದ  ಸಂದೀಪ್ ಜೆ.ಎಸ್ ರವರು ತನಿಖೆ ಪೂರ್ಣಗೊಳಿಸಿ ಆರೋಪಿಗಳ ವಿರುದ್ಧ ದೋಷಾರೋಪಣೆ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

ಈ ಪ್ರಕರಣವು  ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಎಫ್.ಟಿ.ಎಸ್ ಸಿ -2 ಪೊಕ್ಸೊ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, ಈ ಪ್ರಕರಣದಲ್ಲಿ ಅಭಿಯೋಜನೆ ಪರ ಒಟ್ಟು 15 ಸಾಕ್ಷಿದಾರರನ್ನು ವಿಚಾರಿಸಲಾಗಿರುತ್ತದೆ ಮತ್ತು 50 ದಾಖಲೆಗಳನ್ನು ಗುರುತಿಸಲಾಗಿರುತ್ತದೆ. ಈ ಪ್ರಕರಣದಲ್ಲಿ  ಬಾಲಕಿಯ ತಾಯಿ ನೀಡಿದ ದೂರಿನನ್ವಯ  ಬಾಲಕಿಯನ್ನು ಫ್ರೀಝ್ ಅಪಾರ್ಟ್‌ ಮೆಂಟ್ ನಿಂದ ಪೊಲೀಸರು ಆರೋಪಿತರಿಂದ ರಕ್ಷಿಸಿದ್ದರು. ಬಾಲಕಿ ಮತ್ತು ಆರೋಪಿತರನ್ನು ವೈದ್ಯಾಧಿಕಾರಿಯಿಂದ ತಪಾಸಣೆ ಮಾಡಿದಾಗ ಆರೋಪಿಗಳು ಮತ್ತು ನೊಂದ ಬಾಲಕಿಗೆ ಗಾಂಜಾ ಸೇವನೆ ಮಾಡಿಸಿರುವುದು ಕಂಡು ಬಂದಿರುತ್ತದೆ. ಆರೋಪಿಗಳು ನೊಂದ ಬಾಲಕಿಯನ್ನು ಅತ್ಯಾಚಾರ ಮಾಡಿದ ಸ್ಥಳದಿಂದ ಗಾಂಜಾವನ್ನು ಸಹ ವಶಪಡಿಸಿಕೊಳ್ಳಲಾಗಿತ್ತು. ವಶಪಡಿಸಿಕೊಂಡ ವಸ್ತು ಗಾಂಜಾ ಎನ್ನುವ ಬಗ್ಗೆ ಎಫ್.ಎಸ್.ಎಲ್ ಅಧಿಕಾರಿಗಳು ಸಹ ವರದಿ ನೀಡಿದ್ದರು. ಈ ಪ್ರಕರಣದ ಸಾಕ್ಷ್ಯ ದಾಖಲೆಗಳು ಹಾಗೂ ಪೂರಕ ಸಾಕ್ಷ್ಯವನ್ನು ಹಾಗೂ ವಾದ ವಿವಾದವನ್ನು ಆಲಿಸಿ ಆರೋಪಿಗಳ ವಿರುದ್ಧ ಅಪರಾಧವು ಸಾಬೀತಾಗಿದೆ ಎಂದು ತೀರ್ಮಾನಿಸಿ  ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಎಫ್.ಟಿ.ಎಸ್.ಸಿ-2 ಪೊಕ್ಸೊ ವಿಶೇಷ ನ್ಯಾಯಾಲಯದ ಜಿಲ್ಲಾ ನ್ಯಾಯಾಧೀಶರಾದ  ಮಾನು ಕೆ. ಎಸ್. ರವರು ಆರೋಪಿಗಳಿಗೆ  ಅತ್ಯಾಚಾರ ಮಾಡಿದ ಅಪರಾಧಕ್ಕೆ  20 ವರ್ಷಗಳ ಕಾಲ ಕಠಿಣ ಶಿಕ್ಷೆ ಮತ್ತು ಕಲಾ 40,000/- ರೂಪಾಯಿ ದಂಡ ವಿಧಿಸಿರುತ್ತದೆ, ಭಾರತೀಯ ದಂಡ ಸಂಹಿತೆಯ ಕಲಂ 363, ರ ಪ್ರಕಾರ ಎಲ್ಲಾ ಆರೋಪಿಗಳಿಗೆ 3 ವರ್ಷ ಸಾದಾ ಶಿಕ್ಷೆ ಮತ್ತು ತಲಾ 5,000/- ರೂಪಾಯಿ ದಂಡ ವಿಧಿಸಿರುತ್ತದೆ. ಭಾರತೀಯ ದಂಡ ಸಂಹಿತೆಯ ಕಲಂ  363 ರ ಪ್ರಕಾರ ಎಲ್ಲಾ ಆರೋಪಿಗಳಿಗೆ 1 ವರ್ಷಗಳ ಕಾಲ ಸಾದಾ ಶಿಕ್ಷೆ ಮತ್ತು ತಲಾ 2,000/- ರೂಪಾಯಿ ದಂಡ ವಿಧಿಸಿರುತ್ತದೆ, ಭಾರತೀಯ ದಂಡ ಸಂಹಿತೆಯ ಕಲಂ: 328, ರ ಪ್ರಕಾರ ಎಲ್ಲಾ ಆರೋಪಿಗಳಿಗೆ 3 ವರ್ಷಗಳ ಕಾಲ ಸಾದಾ ಶಿಕ್ಷೆ ಮತ್ತು ತಲಾ 5,000/- ರೂಪಾಯಿ ದಂಡ ವಿಧಿಸಿರುತ್ತದೆ, ಭಾರತೀಯ ದಂಡ ಸಂಹಿತೆ ಕಲಂ 506, ಪ್ರಕಾರ ಎಲ್ಲಾ ಆರೋಪಿಗಳಿಗೆ 1 ವರ್ಷಗಳ ಕಾಲ ಸಾದಾ ಶಿಕ್ಷೆ ಮತ್ತು ತಲು 2,000/- ರೂಪಾಯಿ ದಂಡ ವಿಧಿಸಿರುತ್ತದೆ ಮತ್ತು ಎನ್.ಡಿ.ಪಿ.ಎಸ್ ಕಾಯ್ದೆ ಕಲಂ 27(b) ರ ಪ್ರಕಾರ ಎಲ್ಲಾ ಆರೋಪಿಗಳಿಗೆ 3 ತಿಂಗಳ ಸಾದಾ ಶಿಕ್ಷೆ ಮತ್ತು ತಲಾ 500/- ರೂಪಾಯಿ ದಂಡ ವಿಧಿಸಿರುತ್ತದೆ, ಎನ್.ಡಿ.ಪಿ.ಎಸ್ ಕಾಯ್ದೆ ಕಲಂ 20(b)(ii)A ರ ಪ್ರಕಾರ ಎಲ್ಲಾ ಆರೋಪಿಗಳಿಗೆ 6 ತಿಂಗಳ ಸಾದ ಶಿಕ್ಷೆ ಮತ್ತು 500/- ರೂಪಾಯಿ ದಂಡ ವಿಧಿಸಿರುತ್ತದೆ. ದಂಡದ ಒಟ್ಟು ಹಣವಾದ 1,65,000 ರೂಪಾಯಿ ಹಣವನ್ನು ನೊಂದ ಬಾಲಕಿಗೆ ಪಾವತಿಸುವಂತೆ ನ್ಯಾಯಾಲಯವು ಆದೇಶಿಸಿರುತ್ತದೆ. ಅಲ್ಲದೆ ದಂಡ ಪ್ರಕ್ರಿಯೆ ಸಂಹಿತೆಯ ಕಲಂ: 357(ಎ) ಪ್ರಕಾರ ಮತ್ತು ಸಂತ್ರಸ್ಥರ ಪರಿಹಾರ ಯೋಜನೆ ಅಡಿಯಲ್ಲಿ ನೊಂದ ಬಾಲಕಿಗೆ ಹೆಚ್ಚುವರಿಯಾಗಿ ರೂಪಾಯಿ 2,35,000/- ವನ್ನು ಪರಿಹಾರವನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ನೀಡುವಂತೆ ತೀರ್ಪಿನಲ್ಲಿ ನಿರ್ದೇಶನ ನೀಡಿರುತ್ತದೆ.

ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸ್ಪೆಶಲ್ ಪಬ್ಲಿಕ್ ಪ್ರಾಸಿಕ್ಯೂಟರ್ ಆದ  ಕೆ ಬದರಿನಾಥ ನಾಯರಿರವರು ಸಾಕ್ಷಿದಾರರನ್ನು ವಿಚಾರಿಸಿ ವಾದ ಮಂಡಿಸಿದ್ದಾರೆ.

Ads on article

🎁 Amazon Prime ಸದಸ್ಯರಾಗಿರಿ

Amazon Prime Offer
👉 ಉಚಿತ shipping, Prime Video, shopping deals—all in one!

Disclosure: ಈ ಲಿಂಕ್ Amazon Affiliate Program ನ ಭಾಗವಾಗಿದೆ. ನೀವು ಈ ಲಿಂಕ್ ಮೂಲಕ Prime ಸದಸ್ಯರಾಗಿದರೆ, ನಮಗೆ commission ಸಿಗಬಹುದು.

Advertise in articles 1

advertising articles 2

Advertise under the article